ಟಾಟಾದ ಗೇಮ್ ಚೇಂಜರ್ ಹ್ಯಾರಿಯರ್ ಎಸ್‌ಯುವಿ ವಿತರಣೆ ಶುರು: ಇಲ್ಲಿದೆ ವಿವರ

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ 'ಟಾಟಾ ಮೋಟಾರ್ಸ್' ತನ್ನ ಬಹುನೀರಿಕ್ಷಿತ ಹ್ಯಾರಿಯರ್ ಎಸ್‌ಯುವಿ ವಿತರಣೆಯನ್ನು ಪ್ರಾರಂಭಿಸಿದೆ. ಈ ಕಾರಿನ ಎಂಜಿನ್ ಅನ್ನು ದೇಶಾದ್ಯಂತ ಮುಂಬರಲಿರುವ (ಏಪ್ರಿಲ್ 1) BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

ಹೊಸ ಟಾಟಾ ಹ್ಯಾರಿಯರ್ ಎಸ್‌ಯುವಿ ನವೀಕರಿಸಿದ 2.0-ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದ್ದು, 168 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6-ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 6-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅಲ್ಲದೆ, ಚಾಲಕರ ಅನುಕೂಲಕ್ಕಾಗಿ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿದೆ.

ಟಾಟಾದ ಗೇಮ್ ಚೇಂಜರ್ ಹ್ಯಾರಿಯರ್ ಎಸ್‌ಯುವಿ ವಿತರಣೆ ಶುರು: ಇಲ್ಲಿದೆ ವಿವರ

ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಸಿಸ್ಟಮ್, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್‌ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದೆ ಎಂದು ಹೇಳಬಹುದು.

ನವೀಕರಿಸಿದ ಟಾಟಾ ಹ್ಯಾರಿಯರ್ ಎಸ್‌ಯುವಿ ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿದೆ. ಇದು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡೋರ್ ಓಪನ್ ಅಲರ್ಟ್ ಅನ್ನು ಒಳಗೊಂಡಿದೆ. ಜೊತೆಗೆ AEB (ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್) ಅನ್ನು ಪಡೆದುಕೊಂಡಿದೆ.

ನೂತನ ಹ್ಯಾರಿಯರ್ ಎಸ್‌ಯುವಿ ಆರು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಆರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಕ್ಯಾಲಿಪ್ಸೊ ರೆಡ್. ಈ ಕಾರು, ರೂ.15 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಹೆಚ್ಚಿನ ಖರೀದಿದಾರರು ಕೊಂಡುಕೊಳ್ಳಬಹುದು.

ಟಾಟಾ ಮೋಟಾರ್ಸ್, ಹ್ಯಾರಿಯರ್ 2022ರ ಮಾದರಿಗೆ ರೂ.65,000ವರೆಗೆ ರಿಯಾಯಾತಿ ಪ್ರಯೋಜನವನ್ನು ನೀಡುತ್ತಿದೆ. ಅಲ್ಲದೆ, ಭಾರತದ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದೆ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯನ್ನು ರೂ.21.77 ಲಕ್ಷದಿಂದ ರೂ.24.07 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಅದಕ್ಕೂ ಮೊದಲು ಜನವರಿಯ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿಯನ್ನು ಅನಾವರಣ ಮಾಡಿತ್ತು. ಇದು 4WD (ಫೋರ್ ವೀಲ್ ಡ್ರೈವ್) ಆಯ್ಕೆ ಹೊಂದಿರಬಹುದು.

ಬಹುನೀರಿಕ್ಷಿತ ಟಾಟಾ ಸಫಾರಿ ಎಸ್‌ಯುವಿ ವಿತರಣೆ ಕೂಡ ಆರಂಭವಾಗಿದ್ದು, ಇದರ ಎಂಜಿನ್ ಅನ್ನು ಮುಂಬರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಜೊತೆಗೆ ಈ ಕಾರು, ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿದೆ. ರೂ.15.65 ಲಕ್ಷ (ಎಕ್ಸ್ ಶೋರೂಂ, ಬೆಂಗಳೂರು) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಟಾಪ್ ಎಂಡ್ ಮಾದರಿ ರೂ.25.01 ಲಕ್ಷ ಬೆಲೆಯನ್ನು ಪಡೆದಿದೆ.

ಇನ್ನು, ಹ್ಯಾರಿಯರ್ ಎಸ್‌ಯುವಿಯನ್ನು ಟಾಟಾದ ಗೇಮ್ ಚೇಂಜರ್ ಎಂದೇ ಬಿಂಬಿಸಲಾಗಿದ್ದು, ಈ ಕಾರು, ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಖರೀದಿಗೆ ದೊರೆಯಲಿದೆ. ಜೊತೆಗೆ ಆಕರ್ಷಕ ವಿನ್ಯಾಸವನ್ನು ಪಡೆದಿದ್ದು, ಹೆಚ್ಚಿನ ಭಾರತೀಯ ಖರೀದಿದಾರರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು. ಜೊತೆಗೆ ಬೆಲೆಗೆ ತಕ್ಕಂತೆ ಅತ್ಯಾಧುನಿಕವಾಗಿದ್ದು, ಮುಂಬರುವ ದಿನಗಳಲ್ಲಿ ಹಬ್ಬದ ಸೀಸನ್ ಇರುವುದರಿಂದ ಈ ಎಸ್‌ಯುವಿಗೆ ಬೇಡಿಕೆ ಹೆಚ್ಚಾಗಬಹುದು.

Article Published On: Tuesday, March 14, 2023, 11:52 [IST]
English summary
Tata harrier deliveries commence details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+