Tata Harrier: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಖರೀದಿಸಬೇಕೇ.. ಇಲ್ಲಿದೆ ಪ್ರಮುಖ ಮಾಹಿತಿ
ಟಾಟಾ (Tata) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ, ಹಲವು ಬದಲಾವಣೆಗಳೊಂದಿಗೆ ನವೀಕರಿಸಿದ ಹ್ಯಾರಿಯರ್ ಫೇಸ್‌ಲಿಫ್ಟ್ (Harrier facelift) ಎಸ್‌ಯುವಿಯನ್ನು ಲಾಂಚ್ ಮಾಡಿತ್ತು. ಸದ್ಯ ವಿವಿಧ ನಗರಗಳ ಆನ್-ರೋಡ್ ಬೆಲೆ ಬಗ್ಗೆ ಮಾಹಿತಿ ಸಿಕ್ಕಿದೆ.
ಬೆಂಗಳೂರಿನಲ್ಲಿ (Bengaluru) ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ರೂ.19.34 ಲಕ್ಷದಿಂದ ರೂ.32.95 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಮುಂಬೈ (Mumbai)ನಲ್ಲಿ ರೂ.18.91 ಲಕ್ಷದಿಂದ ರೂ.32.23 ಲಕ್ಷ, ದೆಹಲಿ (Delhi)ಯಲ್ಲಿ ರೂ.18.67 - 31.52 ಲಕ್ಷ, ಕೋಲ್ಕತ್ತಾ (Kolkata)ದಲ್ಲಿ ರೂ.18.25 ಲಕ್ಷದಿಂದ ರೂ.30.82 ಲಕ್ಷ ಹೈದರಾಬಾದ್ (Hyderabad)ನಲ್ಲಿ ರೂ.19.33 ಲಕ್ಷದಿಂದ ರೂ.32.94 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ.

ಉಳಿದಂತೆ ಚೆನ್ನೈ (Chennai)ನಲ್ಲಿ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ, ರೂ.19.04 ಲಕ್ಷದಿಂದ ರೂ.32.16 ಲಕ್ಷ, ಲಕ್ನೋ (Lucknow)ದಲ್ಲಿ ರೂ.18.23 ಲಕ್ಷದಿಂದ ರೂ.30.79 ಲಕ್ಷ, ಅಹಮದಾಬಾದ್ (Ahmedabad)ದಲ್ಲಿ ರೂ.17.63 - 29.76 ಲಕ್ಷ, ಇಂದೋರ್ (Indore)ದಲ್ಲಿ ರೂ.18.54 ಲಕ್ಷದಿಂದ ರೂ.32.38 ಲಕ್ಷ, ಜೈಪುರ (Jaipur)ದಲ್ಲಿ ರೂ.18.38 ಲಕ್ಷದಿಂದ ರೂ.31.06 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ.
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ ಎಂಜಿನ್ ಕುರಿತು ಹೇಳುವುದಾದರೆ, ಇದು 2.0 - ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಪಡೆದಿದೆ.
ಈ ಕಾರು, ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಮುಂಭಾಗ, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್, ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ. ಸೈಡ್ ಅಷ್ಟಾಗಿ ಮರುವಿನ್ಯಾಸಗೊಂಡಿಲ್ಲ. ಹಿಂಭಾಗ ಕೂಡ ವಿವಿಧ ಬದಲಾವಣೆಗಳನ್ನು ಒಳಗೊಂಡಿದೆ. ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಸೇರಿದಂತೆ ಆರು ಬಣ್ಣದ ಆಯ್ಕೆಯಲ್ಲಿ ಸಿಗುತ್ತದೆ.
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಹೊಂದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. 7 ಏರ್‌ಬ್ಯಾಗ್, ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ಹಿಲ್ - ಹೋಲ್ಡ್ ಕಂಟ್ರೋಲ್, 3 - ಪಾಯಿಂಟ್ ಸೀಟ್ ಬೆಲ್ಟ್ ರಿಮೆಂಡರ್ ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications