Tata: ನವೀಕರಿಸಿದ ಟಾಟಾ ಹ್ಯಾರಿಯರ್, ಸಫಾರಿ ಮೊದಲ ಟೀಸರ್ ಬಿಡುಗಡೆ, ಅ.6ರಿಂದ ಬುಕ್ಕಿಂಗ್.. ಎದುರಾಳಿಗಳಿಗೆ ನಡುಕ!
ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಖ್ಯಾತಿಗಳಿಸಿದ್ದು, ತನ್ನ ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ನವೀಕರಿಸಿದ ಹ್ಯಾರಿಯರ್, ಸಫಾರಿ ಎಸ್‌ಯುವಿಗಳ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಅಕ್ಟೋಬರ್ 6ರಿಂದ ಇವುಗಳ ಬುಕ್ಕಿಂಗ್ ಆರಂಭಿಸಲಿದೆ.
ಮೊದಲಿಗೆ ನವೀಕರಿಸಿದ ಟಾಟಾ ಹ್ಯಾರಿಯರ್ (Tata Harrier facelift) ಬಗ್ಗೆ ಮಾತನಾಡೋಣ. ಈ ಕಾರು, ಮುಂಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿದೆ. ಅದನ್ನು ಟೀಸರ್ ಚಿತ್ರದಲ್ಲಿ ಕಾಣಬಹುದು. ಎಲ್ಇಡಿ ಡಿಆರ್‌ಎಲ್ ಜೊತೆಗೆ ಲೈಟ್ ಬಾರ್ ಕನೆಕ್ಟ್ ಆಗಿದೆ. ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಹೊಸದಾದ ಬಂಪರ್ ಹಾಗೂ ಗ್ರಿಲ್ ಅನ್ನು ಹೊಂದಿದೆ.

ನವೀಕರಿಸಿದ ಟಾಟಾ ಹ್ಯಾರಿಯರ್, ವೈಶಿಷ್ಟ್ಯ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ಮುಖ್ಯವಾಗಿ, ದೊಡ್ಡದಾದ (12.3 - ಇಂಚು) ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಆಕರ್ಷಕ ಟಾಟಾ ಲೋಗೋ ಒಳಗೊಂಡ 2 - ಸ್ಪೋಕ್ ಸ್ಟೀರಿಂಗ್ ವೀಲ್, ಆಲ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹೊಂದಿರುವ ನಿರೀಕ್ಷೆಯಿದೆ.
ಇದರೊಟ್ಟಿಗೆ, ಕ್ರೂಸ್ ಕಂಟ್ರೋಲ್, 360 - ಡಿಗ್ರಿ ಸರೌಂಡ್ ಕ್ಯಾಮೆರಾ, ನೂತನ ಗೇರ್ ಲಿವರ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್ ಮತ್ತು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ಫೀಚರ್ಸ್ ಒಳಗೊಂಡಿರುವ ಸಾಧ್ಯತೆಯಿದೆ.

ಟಾಟಾ ಹ್ಯಾರಿಯರ್, 2.0 - ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್, 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು. ಜೊತೆಗೆ, 1.5 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್ ನೊಂದಿಗೂ ದೊರೆಯುವ ನೀರಿಕ್ಷೆಯಿದೆ. ಈ ಕಾರು, ರೂ.15.00 ಲಕ್ಷದಿಂದ ರೂ.22.00 ಲಕ್ಷ ಬೆಲೆಯಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.
ನವೀಕರಿಸಿದ ಟಾಟಾ ಸಫಾರಿ (Tata Safari facelift) ಬಗ್ಗೆ ಹೇಳುವುದಾದರೆ, ಇದು ವಿನ್ಯಾಸದಲ್ಲಿ ಹಲವು ಬದಲಾವಣೆಯನ್ನು ಹೊಂದಿದ್ದು, ಅದನ್ನು ಟೀಸರ್ ಚಿತ್ರದಲ್ಲಿ ನೋಡಬಹುದು. ಬ್ರೊನ್ (ಕಂಚು) ಬಣ್ಣದ ಈ ಕಾರು ನೋಡುಗರನ್ನು ಆಕರ್ಷಿಸುತ್ತದೆ. ಫಾಸಿಯಾ ಕೂಡ ದೊಡ್ಡದಾಗಿದೆ. ಮುಂಭಾಗ, ನವೀಕರಿಸಿದ ಬಂಪರ್ ಎದ್ದು ಕಾಣುತ್ತದೆ. ಜೊತೆಗೆ, ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಒಳಗೊಂಡಿದೆ.

ಟಾಟಾ ಸಫಾರಿ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಲ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ವಿನ್ - ಸ್ಪೋಕ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, 360 - ಡಿಗ್ರಿ ಸರೌಂಡ್ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್ ಮತ್ತು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ನವೀಕರಿಸಿದ ಟಾಟಾ ಸಫಾರಿ ಎಸ್‌ಯುವಿ, ಹ್ಯಾರಿಯರ್ ನಂತೆಯೇ ಎಂಜಿನ್ ಹೊಂದಿರುವ ನೀರಿಕ್ಷೆಯಿದೆ. ಇದು ಕೂಡ 2.0 - ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್, 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್, 1.5 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಸಿಗಬಹುದು. ರೂ.16.00 ಲಕ್ಷದಿಂದ ರೂ.25.00 ಲಕ್ಷ ಬೆಲೆಗೆ ಖರೀದಿಗೆ ದೊರೆಯಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications