2024ರಲ್ಲಿ ಜಿದ್ದಿಗೆ ಬಿದ್ದಂತೆ ಬರಲಿವೆ ದೊಡ್ಡ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು: ತುಂಬಿ ತುಳುಕಲಿವೆ ಶೋರೂಂಗಳು!
ಕೆಲವೇ ದಿನಗಳಲ್ಲಿ '2023' ಮುಕ್ತಾಯಗೊಳ್ಳಲಿದ್ದು, 2024ರ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ದೇಶದ ಪ್ರಮುಖ ಕಾರು ತಯಾರಿಕ ಕಂಪನಿಗಳಾದ ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ ಹಾಗೂ ಬಿವೈಡಿ ನೂತನ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿವೆ. ಆ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.
ಮೊದಲಿಗೆ ಟಾಟಾ ಮೋಟಾರ್ಸ್ (Tata Motors) ಲಾಂಚ್ ಮಾಡುವ ಸಾಧ್ಯತೆಯಿರುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾತನಾಡೋಣ. ಪಂಚ್ ಇವಿ (Punch EV), ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವ ಕಂಡುಬಂದಿದೆ. ಇದು, 24 kWh ಬ್ಯಾಟರಿ ಪ್ಯಾಕ್ ಪಡೆಡಿರುವ ನೀರಿಕ್ಷೆಯಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 250 ಕಿ.ಮೀ - 315 ಕಿ.ಮೀ ರೇಂಜ್ ನೀಡಬಹುದು. ರೂ.12 ಲಕ್ಷ ಬೆಲೆಯಲ್ಲಿ ದೊರೆಯಬಹುದು ಎನ್ನಲಾಗಿದೆ.

ಬಹುತೇಕ 2024ರಲ್ಲಿ ಬಿಡುಗಡೆಯಾಗಲು ಸಿದ್ದವಾಗಿರುವ ಕರ್ವ್ ಎಸ್‌ಯುವಿ (Curvv SUV) ಪರೀಕ್ಷೆಯನ್ನು ಟಾಟಾ ಹಲವು ಬಾರಿ ನಡೆಸಿದ್ದು, ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಈ ಕಾರು ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಪೂರ್ತಿ ಚಾರ್ಜ್‌ನಲ್ಲಿ 500 ಕಿ.ಮೀ ಕ್ರಮಿಸಬಹುದು. ರೂ.20 ಲಕ್ಷ ಬೆಲೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದರೊಟ್ಟಿಗೆ ಹ್ಯಾರಿಯರ್ ಹಾಗೂ ಸಫಾರಿ ಎಲೆಕ್ಟ್ರಿಕ್ ಕಾರುಗಳು ಲಾಂಚ್ ಆಗುವ ನೀರಿಕ್ಷೆಯಿದೆ.
ಮಾರುತಿ ಸುಜುಕಿ (Maruti Suzuki), ಈ ವರ್ಷಾರಂಭದ ಜನವರಿ ತಿಂಗಳಲ್ಲಿ (2023) ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇವಿಎಕ್ಸ್ (ಕಾನ್ಸೆಪ್ಟ್) ಅನ್ನು ಪ್ರದರ್ಶನ ಮಾಡಿತ್ತು. ಈ ಕಾರು, ದೊಡ್ಡದಾದ 60 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ರೇಂಜ್ ಕೊಡಲಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಈ ಇವಿಎಕ್ಸ್ ಎಲೆಕ್ಟ್ರಿಕ್ ಕಾರು 4300 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1600 ಎಂಎಂ ಎತ್ತರವನ್ನು ಹೊಂದಿರುವ ಸಾಧ್ಯತೆಯಿದೆ. ಸಿಂಗಲ್-ಮೋಟರ್ ಅಥವಾ ಡುಯಲ್-ಮೋಟಾರ್ (ಆಲ್-ವೀಲ್ ಡ್ರೈವ್) ಸೆಟಪ್‌ಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಹತ್ತಾರು ಆಕರ್ಷಕ ವೈಶಿಷ್ಟ್ಯಗಳನೊಂದಿಗೆ ರೂ.25 ಲಕ್ಷ ಆಸುಪಾಸಿನಲ್ಲಿ ಗ್ರಾಹಕರಿಗೆ ದೊರೆಯಬಹುದು.
ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿವೈಡಿ (BYD) ಕಂಪನಿ ಸೀಲ್ (Seal) ಸೆಡಾನ್ ಅನ್ನು ಪ್ರದರ್ಶನ ಮಾಡಿತ್ತು. ಈ ಕಾರು ಸಹ 2024ರಲ್ಲಿ ಖರೀದಿಗೆ ಸಿಗುವ ನಿರೀಕ್ಷೆಯಿದೆ. ಸದ್ಯ ಯುರೋಪ್ ಮಾರುಕಟ್ಟೆಯಲ್ಲಿ ದೊರೆಯುವ ಸೀಲ್ ಸೆಡಾನ್ 82.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು ಡುಯಲ್ ಮೋಟಾರ್ ಸೆಟಪ್ ಒಳಗೊಂಡಿದ್ದು, ಪೂರ್ತಿ ಚಾರ್ಜ್‌ನಲ್ಲಿ 550 - 700 ಕಿಲೋಮೀಟರ್ ರೇಂಜ್ ನೀಡುತ್ತದೆ.

ಬಿವೈಡಿ ಸೀಲ್ ಸೆಡಾನ್ ಕೇವಲ 3.8 ಸೆಕೆಂಡುಗಳಲ್ಲಿ 0 -100 kmph ವೇಗವನ್ನು ಪಡೆಯಲಿದೆ. 15.6 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ವಿವಿಧ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಮಲ್ಟಿ ಏರ್‌ಬ್ಯಾಗ್, ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಇವೆ.
ಮಹೀಂದ್ರಾ (Mahindra) ಕೂಡ 2 ಎಲೆಕ್ಟ್ರಿಕ್ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಸದ್ಯ, ಖರೀದಿಗೆ ದೊರೆಯುವ ಎಕ್ಸ್‌ಯುವಿ300 (XUV300) ಎಲೆಕ್ಟ್ರಿಕ್ ರೂಪದಲ್ಲಿ ಬರುವ ನೀರಿಕ್ಷೆಯಿದ್ದು, 35 kWh ಬ್ಯಾಟರಿ ಪ್ಯಾಕ್ ಪಡೆದಿರಬಹುದು. ಆದರೆ, ಕಾರ್ಯಕ್ಷಮತೆ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮಹೀಂದ್ರಾ, ಜನಪ್ರಿಯ ಎಕ್ಸ್‌ಯುವಿ700 (XUV700) ಆಧಾರಿತ ಎಕ್ಸ್‌ಯುವಿ ಇ8 (XUV.e8) ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಎಕ್ಸ್‌ಯುವಿ ಇ8 ಕಾರು ಅತ್ಯಾಧುನಿಕ ವಿನ್ಯಾಸ ಹೊಂದಿರಲಿದ್ದು, 80 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರುವ ನೀರಿಕ್ಷೆಯಿದೆ. ಈ ಕಾರಿನಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 230 hp ಪವರ್ ಉತ್ಪಾದಿಸಬಹುದು. ಜೊತೆಗೆ ಆಲ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 450 ಕಿಲೋಮೀಟರ್ ರೇಂಜ್ ನೀಡುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








