Tata Motors ಹೊಸ ಮೈಲಿಗಲ್ಲು... 4 ತಿಂಗಳೊಳಗೆ 10 ಸಾವಿರ ಟಿಯಾಗೊ ಇವಿಗಳ ವಿತರಣೆ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 10 ಸಾವಿರ Tiago ev ಗಳನ್ನು ಡೆಲಿವರಿ ಮಾಡಿರುವುದಾಗಿ ಇಂದು ಘೋಷಿಸಿದೆ. ಇವಿ ವಲಯದಲ್ಲಿ ನಾಲ್ಕು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಎಲೆಕ್ಟ್ರಿಕ್ ವಾಹನವಾಗಿ ಟಿಯಾಗೊ ಇವಿ ಗುರ್ತಿಸಿಕೊಂಡಿದೆ.

ಬುಕಿಂಗ್ ತೆರದ ಕೇವಲ 24 ಗಂಟೆಗಳಲ್ಲಿ 10 ಸಾವಿರ ಬುಕಿಂಗ್‌ಗಳನ್ನು ಮತ್ತು ಡಿಸೆಂಬರ್ 2022 ರ ವೇಳೆಗೆ 20 ಸಾವಿರ ಬುಕಿಂಗ್‌ಗಳನ್ನು ಸ್ವೀಕರಿಸಿ 'ಭಾರತದಲ್ಲಿ ಅತ್ಯಂತ ವೇಗವಾಗಿ ಬುಕ್ ಮಾಡಲಾದ EV' ಆದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಸದ್ಯ ತಯಾರಕರು 10 ಸಾವಿರ Tiago ev ಗಳನ್ನು ಡೆಲಿವರಿ ಮಾಡಿ ಬ್ರಾಂಡ್‌ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

Tata Motors

Tiago.ev ಮಾಲೀಕರು ತಮ್ಮ ಕಾರಿನೊಂದಿಗೆ ದೀರ್ಘ, ಇಂಟರ್‌ಸಿಟಿ ಟ್ರಿಪ್‌ಗಳನ್ನು ಕೈಗೊಂಡಿದ್ದಾರೆ. ಡೇಟಾ ಪ್ರಕಾರ 1,200 ಕ್ಕೂ ಹೆಚ್ಚು ಇವಿಗಳು ಸದ್ಯ (ಪ್ರತಿಯೊಂದು ಇವಿ) 3,000 ಕಿ.ಮೀಗಳಷ್ಟು ಓಡಿಸಲ್ಪಟ್ಟಿವೆ. 600ಕ್ಕೂ ಹೆಚ್ಚು ಕಾರುಗಳು ಭಾರತೀಯ ರಸ್ತೆಗಳಲ್ಲಿ (ಪ್ರತಿಯೊಂದು ಇವಿ) 4,000 ಕ್ಕೂ ಹೆಚ್ಚು ಕಿ.ಮೀಗಳಷ್ಟು ಕ್ರಮಿಸಿವೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಕೇವಲ 30 ನಿಮಿಷಗಳಲ್ಲಿ 110 ಕಿ.ಮೀ ರೇಂಜ್ ಪಡೆಯಬಹುದಾದ DC ವೇಗದ ಚಾರ್ಜಿಂಗ್ ಲಭ್ಯತೆಯು ಈ ದೀರ್ಘ ಪ್ರಯಾಣಗಳನ್ನು ಇನ್ನಷ್ಟು ಅನುಕೂಲಕರವಾಗಿಸಿವೆ. ಇದಲ್ಲದೆ, ಮಾಲೀಕತ್ವದ ಕಡಿಮೆ ವೆಚ್ಚವು ಸಂಪೂರ್ಣ ಪ್ಯಾಕೇಜ್‌ಗೆ ಹೆಚ್ಚುವರಿ ಪ್ರಯೋಜನವಾಗಿ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ಚಾಲಿತ ಕಾರುಗಳ ನಿರ್ವಹಣಾ ವೆಚ್ಚಕ್ಕೆ ಹೋಲಿಸಿದರೆ ನಮ್ಮ ಇವಿ ಗ್ರಾಹಕರು ಒಟ್ಟು 7 ಕೋಟಿ ರೂ. ಉಳಿಸಿದ್ದಾರೆ ಎಂದು ಟಾಟಾ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ, "Tiago.ev ಪ್ರಾರಂಭವಾದಾಗಿನಿಂದ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. 'ಭಾರತದಲ್ಲಿ ಅತ್ಯಂತ ವೇಗವಾಗಿ ಬುಕ್ ಮಾಡಲಾದ EV' ಆಗುವುದರಿಂದ ಹಿಡಿದು 10 ಸಾವಿರ ಡೆಲಿವರಿ ಮಾರ್ಕ್ ಅನ್ನು ಸಾಧಿಸಲು ಭಾರತದಲ್ಲಿ ವೇಗದ EV ಆಗುವವರೆಗೆ ಎಲ್ಲಾ ದಾಖಲೆಗಳನ್ನು ನಿರ್ಮಿಸಿದೆ.

"ನಮ್ಮ ಗ್ರಾಹಕರು ನಮ್ಮ ದೊಡ್ಡ ಶಕ್ತಿ ಮತ್ತು ನಮ್ಮ EV ಸಮುದಾಯದ ಬೆನ್ನೆಲುಬಾಗಿರುವುದರಿಂದ ನಾವು ನಮ್ಮ ಗ್ರಾಹಕರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ನಿರಂತರ ಬೆಂಬಲ ಮತ್ತು ವಿಶ್ವಾಸವು ನಮ್ಮನ್ನು ಈ ಜಾಗದಲ್ಲಿ ನಾಯಕರನ್ನಾಗಿ ಮಾಡಿದೆ. ಈ ಸಮುದಾಯವು ಮುಂದೆ ಸಾಗಲು ಹಾಗೂ ಯಶಸ್ವಿಯಾಗಿ ನಮ್ಮ ಪಾದವನ್ನು ಮುಂದಕ್ಕೆ ಇಡುವುದಾಗಿ ನಾವು ಭರವಸೆ ನೀಡುತ್ತೇವೆ ಎಂದರು.

ಟಿಯಾಗೊ ಇವಿಯು ಉನ್ನತ-ವೋಲ್ಟೇಜ್ ಸ್ಟೇಟ್ ಆಫ್ ಆರ್ಟ್, Ziptron ತಂತ್ರಜ್ಞಾನದ ಆಧಾರದ ಮೇಲೆ ಪರ್ಫಾಮೆನ್ಸ್, ತಂತ್ರಜ್ಞಾನ, ವಿಶ್ವಾಸಾರ್ಹತೆ, ಚಾರ್ಜಿಂಗ್ ಮತ್ತು ಕಂಫರ್ಟ್ ಎಂಬ 5 ಪ್ರಮುಖ ಸ್ತಂಭಗಳ ಮೇಲೆ ಬಲವಾಗಿ ನಿಂತಿದೆ. ಇದು ಡಿಜಿಟಲ್ ಡ್ರೈವ್, ಮಲ್ಟಿ-ಮೋಡ್ ರಿಜೆನ್‌ನೊಂದಿಗೆ ಸಿಟಿ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

Tiago.ev ಅನುಕೂಲಕರ ವೈಶಿಷ್ಟ್ಯಗಳಾದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಆಟೋ ಫೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ORVM ಗಳು, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳು, ಇತರವುಗಳಂತಹ ಅನುಕೂಲಕರ ವೈಶಿಷ್ಟ್ಯಗಳಿಗಾಗಿ ವಿಶೇಷವಾಗಿ ಮೆಚ್ಚುಗೆ ಪಡೆದಿದೆ. ಅನೇಕ ಸಂಪರ್ಕಿತ ವೈಶಿಷ್ಟ್ಯಗಳ ಹೆಗ್ಗಳಿಕೆ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಉನ್ನತ ವಿಭಾಗದ ಕಾರುಗಳಲ್ಲಿ ನೀಡಲಾಗುತ್ತದೆ.

Article Published On: Friday, May 5, 2023, 17:35 [IST]
English summary
Tata motors delivered 10k tiago evs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+