TATA Motors: ಮುಂದಿನ ವರ್ಷದಿಂದ ಟಾಟಾ ಕಾರುಗಳು ದುಬಾರಿಯಾಕೆ? ಟಾಟಾ ಪ್ರೇಮಿಗಳಿಗೆ ಕಹಿ ಸುದ್ದಿ
2021 ರಿಂದ ಈಚಿನ ಅವಧಿ ಭಾರತೀಯ ಆಟೋಮೊಬೈಲ್ ಅವಧಿಯಲ್ಲಿನ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ಅವಧಿಯಲ್ಲಿ ಭಾರತೀಯರು ಆಟೋಮೊಬೈಲ್ ಕ್ಷೇತ್ರದ ದೊಡ್ಡ ದೊಡ್ಡ ಬೆಳವಣಿಗೆಯನ್ನು ಕಣ್ಣಾರೆ ಕಾಣುತ್ತಿದ್ದು, ಹಲವಾರು ಐತಿಹಾಸಿಕ ಮೈಲುಗಲ್ಲುಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಈ ಅವಧಿಯಲ್ಲಿ ಟಾಟಾ ಮೋಟಾರ್ಸ್ (TATA Motors) ಬೆಳವಣಿಗೆಯಂತೂ ಅಪಾರ.
ಇದೀಗ ಟಾಟಾ ಮೋಟಾರ್ಸ್ ತಮ್ಮ ಕೆಲವು ಕಾರುಗಳ ಬೆಲೆಯನ್ನು ಏರಿಸುವತ್ತ ಯೋಜನೆ ರೂಪಿಸುತ್ತಿದ್ದು ಮುಂದಿನ ವರ್ಷದ ಆರಂಭದಿಂದಲೇ ಇದು ಜಾರಿಗೆ ಬರಲಿದೆ. ಇನ್ನು ಟಾಟಾ ತನ್ನ ಪ್ಯಾಸೆಂಜರ್ ಕಾರುಗಳ ಬೆಲೆಯನ್ನು ಏರಿಸಲಿದ್ದು ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು ಸಹ ಸೇರಿಕೊಂಡಿದೆ. ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ತನ್ನ ಬಹುತೇಕ ಎಲ್ಲಾ ಸರಣಿಯ ಕಾರುಗಳ ಬೆಲೆಯನ್ನು ಏರಿಸಲಿದೆ.

ಸದ್ಯಕ್ಕೆ ಟಾಟಾ ಮೋಟಾರ್ಸ್ ಹಲವು ಸೆಗ್ಮೆಂಟ್‌ಗಳಲ್ಲಿ ತಮ್ಮ ಪ್ಯಾಸೆಂಜರ್ ಕಾರು ಮಾಡೆಲ್‌ಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಟಿಯಾಗೋ ಹ್ಯಾಚ್‌ಬ್ಯಾಕ್ ನಿಂದ ಹಿಡಿದು ಟಾಟಾ ಸಫಾರಿ ಎಸ್‌ಯುವಿವರೆಗಿನ ಕಾರುಗಳನ್ನು ಟಾಟಾ ಮಾರಾಟ ಮಾಡುತ್ತಿದೆ. ಟಾಟಾ ಕಾರುಗಳು ಸುಮಾರು 5.6 ಲಕ್ಷ ರೂಗಳಿಂದ ಆರಂಭವಾಗಿ, ಸುಮಾರು 25.94 ಲಕ್ಷ ಎಕ್ಸ್ ಶೋ ರೂಮ್ ವರೆಗಿನ ದರಗಳಲ್ಲೂ ಲಭ್ಯವಿದೆ.
ಇನ್ನು ಟಾಟಾ ತನ್ನ ಕಾರುಗಳ ಮೇಲಿನ ಬೆಲೆಗಳನ್ನು ಏರಿಸಲು ಇರುವ ಕಾರಣ ಏನೆಂದು ಬಹಿರಂಗಪಡಿಸಿಲ್ಲ. ಬಹುತೇಕ ಕಾರು ತಯಾರಿಕಾ ಕಂಪನಿಯು ತಮ್ಮ ಕಾರುಗಳ ಮೇಲಿನ ಬೆಲೆಯನ್ನು ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚಗಳು ಹೆಚ್ಚಾದಂತೆ ಏರಿಕೆ ಮಾಡುತ್ತವೆ. ಇಲ್ಲಿ ಟಾಟಾ ಮೋಟಾರ್ಸ್ (TATA Motors) ಸಹ ಇದೇ ಕಾರಣದಿಂದ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿದೆ ಎಂಬುದು ಹಲವರ ಅಭಿಪ್ರಾಯ.

ಈಗಾಗಲೇ ತಿಳಿದಿರುವಂತೆ ಮುಂದಿನ ವರ್ಷದ ಆರಂಭದಿಂದ ಕಾರುಗಳ ಮೇಲಿನ ಬೆಲೆಯನ್ನು ಏರಿಸುತ್ತಿರುವುದು ಕೇವಲ ಟಾಟಾ ಮೋಟಾರ್ಸ್ (TATA Motors) ಮಾತ್ರ ಅಲ್ಲ. ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ಕಾರು ತಯಾರಿಕಾ ಕಂಪನಿಗಳು ಸಹ ತಮ್ಮ ಕಾರಿನ ಬೆಲೆಯನ್ನು ಏರಿಸುತ್ತಿದ್ದು, ಇವುಗಳಲ್ಲಿ ಮಾರುತಿ ಸುಜುಕಿ ಪ್ರಮುಖವಾದುದು.
ಭಾರತದ ಅತಿದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿಯೂ ಮುಂದಿನ ವರ್ಷದ ಆರಂಭದಿಂದ ತಮ್ಮ ಕಾರುಗಳ ಮೇಲಿನ ಬೆಲೆಯನ್ನು ಹೆಚ್ಚಸುತ್ತಿದ್ದು, ಇದಕ್ಕೆ ಮಹೀಂದ್ರಾ ಸಹ ಸಾಥ್ ನೀಡುತ್ತಿದೆ. ಮಹೀಂದ್ರಾ ಸಹ ತಮ್ಮ ಕಾರುಗಳ ಮೇಲಿನ ಬೆಲೆಯನ್ನು ಹೆಚ್ಚಿಸುತ್ತಿದೆ. ಬಹುತೇಕ ಕಾರು ಕಂಪನಿಗಳ ಒಮ್ಮತದ ಈ ನಿರ್ಧಾರ ಕಾರು ಕೊಳ್ಳುವವರ ಆತಂಕಕ್ಕೆ ಕಾರಣವಾಗಿದೆ.
ಬೆಲೆ ಏರಿಕೆಯ ಈ ಬೆಳವಣಿಗೆಗೆ ಗ್ರಾಹಕರು ಯಾವ ರೀತಿಯಾಗಿ ಇದಕ್ಕೆ ಸ್ಪಂದಿಸುತ್ತಾರೆ ಎಂಬುದು ಕಾದು ನೊಡಬೇಕು. ಟಾಟಾ ಮೋಟಾರ್ಸ್‌ನ ಬಹುತೇಕ ಎಲ್ಲಾ ಕಾರುಗಳು ಗ್ರಾಹಕರ ನೆಚ್ಚಿನದ್ದಾಗಿದ್ದು, ಇದರಲ್ಲಿ ಸಫಾರಿ ಪ್ರಮುಖವಾದುದು ಎಂದರೆ ತಪ್ಪಾಗಲಾರದು. ಇದಕ್ಕೆ ಪ್ರಮುಖ ಕಾರಣ ಈ ಕಾರು ಗ್ರಾಹಕರಿಗೆ ನೀಡುವ ಅನುಭವ ಮತ್ತು ಸೌಕರ್ಯಗಳು.
ಇತ್ತೀಚೆಗಷ್ಟೇ ಟಾಟಾ ತಮ್ಮ ಸಫಾರಿ ಮತ್ತು ಹ್ಯಾರಿಯರ್ ಕಾರುಗಳಿಗೆ ಫೇಸ್‌ಲಿಫ್ಟ್ ಟಚ್ ನೀಡಿತ್ತು. ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್‌ನ ಎಂಜಿನ್ ಸೆಟಪ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಎಸ್‍ಯುವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 168bhp ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications