Tata Nano EV: ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಬರಲಿದೆ, ಬೆಲೆ ಎಷ್ಟು?... ಅಲ್ಲೋಲ ಕಲ್ಲೋಲ ಗ್ಯಾರಂಟಿ!

ಟಾಟಾ ಮೋಟಾರ್ಸ್ ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಕಾರುಗಳು ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ವಿನ್ಯಾಸ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಇದೀಗ, ಕಂಪನಿಯು ನ್ಯಾನೋ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ಮೂಲಗಳು ಹೇಳಿವೆ.

ಸದ್ಯ, ರಸ್ತೆಗಳಲ್ಲಿ ಕಂಡುಬರುವ IEC ಚಾಲಿತ ಪ್ಲಾಟ್‌ಫಾರ್ಮ್‌ ಅನ್ನೇ ಎಲೆಕ್ಟ್ರಿಕ್ ಕಾರಾಗಿ ಬರಲಿರುವ ನ್ಯಾನೋ ಕೂಡ ಹೊಂದಿರಬಹುದು. ಜೊತೆಗೆ ಬಜೆಟ್ ಬೆಲೆಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಆದರೆ, ಕಂಪನಿ ಕಡೆಯಿಂದ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಂದೊಮ್ಮೆ ಎಲ್ಲ ಅಂದುಕೊಂಡಂತೆ ನಡೆದು, ಶೀಘ್ರದದಲ್ಲಿ ನ್ಯಾನೋ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾದ್ರೆ ಭಾರತದ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸುವುದು ಗ್ಯಾರಂಟಿ.

Tata Nano EV: ಬರಲಿದೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು.. ಹೇಗಿರಲಿದೆ?

ಲಭ್ಯವಾಗಿರುವ ಮಾಹಿತಿ ಪ್ರಕಾರ, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು, 800 ಕೆಜಿ ತೂಕವನ್ನು ಪಡೆದಿರಬಹುದು. 23 HP ಗರಿಷ್ಠ ಪವರ್ ಹಾಗೂ 85 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಸಾಧ್ಯತೆಯಿದ್ದು, 110 kmph ಟಾಪ್ ಸ್ವೀಡ್ ಪಡೆಯುವ ನೀರಿಕ್ಷೆಯಿದೆ. ಸಂಪೂರ್ಣ ಚಾರ್ಜಿನಲ್ಲಿ 200 ಕಿ.ಮೀ ಗಿಂತ ಹೆಚ್ಚಿನ ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಇದಿಷ್ಟೇ ಅಲ್ಲದೆ, ನ್ಯಾನೋ ಎಲೆಕ್ಟ್ರಿಕ್ ಕಾರು ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿಯು ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದ್ದು, ಕೇವಲ ಒಂದು ಗಂಟೆಯಲ್ಲಿ ಇದರ 80% ಬ್ಯಾಟರಿ ಚಾರ್ಜ್ ಆಗಬಹುದು. ಜೊತೆಗೆ ಈ ನ್ಯಾನೋ ಇವಿ ಅತ್ಯಂತ ಅಗ್ಗದ ಬೆಲೆಯಲ್ಲಿ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಅದು ಕೂಡ ಸರಿ ಸುಮಾರು 5 ಲಕ್ಷ ಬೆಲೆಯನ್ನು ಹೊಂದಿರಬಹುದು.

ಟಾಟಾ, ಭಾರತದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು 2008ರಲ್ಲಿ IEC ಚಾಲಿತ ನ್ಯಾನೋ ಕಾರನ್ನು ಪರಿಚಯಿಸಿತ್ತು. ಇದು ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ ಬೆಲೆಯಲ್ಲಿ ಕಾರೆಂಬ ಹೆಗ್ಗಳಿಗೆ ಪಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ. ಜೊತೆಗೆ ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಕುಸಿತವಾದ ಹಿನ್ನೆಲೆ, 2018ರಲ್ಲಿ ಈ ಕಾರನ್ನು ಸ್ಥಗಿತಗೊಳಿಸಲಾಯಿತು. ಈಗಲೂ ರಸ್ತೆಗಳಲ್ಲಿ ಕಂಡುಬರುತ್ತಲೇ ಇರುತ್ತದೆ.

ಗಮನಿಸಬೇಕಾಗ ಪ್ರಮುಖ ವಿಚಾರವೆಂದರೆ, ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ ಟಾಟಾ ಕಂಪನಿಯೇ ಮೊದಲ ಸ್ಥಾನದಲ್ಲಿ ಇದ್ದು, ಟಿಯಾಗೊ ಹಾಗೂ ನೆಕ್ಸಾನ್ ಇವಿಗಳಿಂದ ಅದು ಸಾಧ್ಯವಾಗಿದೆ. ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.11.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 19.2 kWh ಹಾಗೂ 24 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಕ್ರಮವಾಗಿ 250 km ಹಾಗೂ 315km ರೇಂಜ್ ನೀಡಲಿವೆ.

ಟಾಟಾ ನೆಕ್ಸಾನ್ ಇವಿ ಪ್ರೈಮ್ ರೂ.14.49 ಲಕ್ಷದಿಂದ ರೂ.16.99 ದರದಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, 30.2 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 129 PS ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಇನ್ನು, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಂದೊಮ್ಮೆ ಈ ಕಾರು ಬಿಡುಗಡೆಯಾದರೆ ಭಾರತದಲ್ಲಿ ದೊಡ್ಡ ಅಲೆ ಸೃಷ್ಟಿಸುವುದು ಪಕ್ಕಾ. ನಿನ್ನೆ ಬಿಡುಗಡೆಯಾದ 2 ಡೋರ್ ಎಂಜಿ ಕಾಮೆಟ್ ಇವಿ ದೇಶದಲ್ಲಿ ಅತ್ಯಂತ ಕೈಗೆಟುಕುವ ಬೆಲೆಗೆ ಖರೀದಿಗೆ ದೊರೆಯುವ ಎಲೆಕ್ಟ್ರಿಕ್ ಕಾರಾಗಿದೆ.

Article Published On: Thursday, April 27, 2023, 18:02 [IST]
English summary
Tata nano ev launched india soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+