Tata Nexon EV Max ಗೇರ್‌ಬಾಕ್ಸ್ ಸಮಸ್ಯೆ... ಟ್ವಿಟರ್‌ನಲ್ಲಿ ಟಾಟಾವನ್ನು ಟ್ಯಾಗ್ ಮಾಡಿದ ಮಾಲೀಕ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರವು ಜೋರಾಗಿದೆ, ಪೆಟ್ರೋಲ್ ಬೆಲೆಗಳಿಂದ ಕಂಗೆಟ್ಟಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನವನ್ನು ವಶಪಡಿಸಿಕೊಂಡು ಎಲೆಕ್ಟ್ರಿಕ್ ವಿಭಾಗವನ್ನು ಆಳುತ್ತಿದೆ. ಆದರೆ ಟಾಟಾ ಮೋಟರ್ಸ್‌ಗೆ ಇದೀಗ ಸಮಸ್ಯೆಯೊಂದು ಎದುರಾಗಿದೆ.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ವ್ಯಾಪಕ ಶ್ರೇಣಿಯ ಕಾರುಗಳನ್ನು ನೀಡುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, ಈ ಎಲೆಕ್ಟ್ರಿಕ್ ಕಾರುಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಕೆಲವೊಮ್ಮೆ ಬ್ರಾಂಡ್‌ಗೆ ಸಮಸ್ಯೆಗೆ ಸಿಲುಕುವಂತೆ ಮಾಡುತ್ತದೆ. ಟಾಟಾ ಮೋಟಾರ್ಸ್‌ನಿಂದ ಅಂತಹದೇ ಒಂದು ಪ್ರಕರಣ ಇದೀಗ ಬೆಳಕಿದೆ ಬಂದಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಮಾಲೀಕ ಆಕಾಶ್ ಭಂಗ್ರೆ ಎಂಬುವರು ಕಾರಿನ ಚಿತ್ರವನ್ನು ಪೋಸ್ಟ್ ಮಾಡಿ, ಘಟನೆ ಕುರಿತು ಕಾರಿನ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

"ನನ್ನ ನೆಕ್ಸಾನ್ ಇವಿ ಮ್ಯಾಕ್ಸ್‌ನ ಗೇರ್‌ಬಾಕ್ಸ್ ಇದ್ದಕ್ಕಿದ್ದಂತೆ ಕೆಲಸ ಮಾಡುದೇ ನಿಂತುಹೋಗಿದೆ, ಕಾರು ಪ್ರಸ್ತುತ ಇತರ ವಾಹನಗಳು ಸಂಚರಿಸುವ ಮಧ್ಯದ ದಾರಿಯಲ್ಲಿ ಸಿಲುಕಿಕೊಂಡು ಇಡೀ ಲೇನ್ ಅನ್ನು ನಿರ್ಬಂಧಿಸಿದೆ. ಇದು ನನ್ನ ಸುತ್ತಮುತ್ತಲಿನ ಇತರರಿಗೆ ತೀರ್ವ ತೊಂದರೆಯನ್ನು ಉಂಟುಮಾಡಿದೆ. ದಯವಿಟ್ಟು ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ." ಈ ದೃಶ್ಯವನ್ನು ಕಂಡರೆ ಟಾಟಾ ನೆಕ್ಸಾನ್ EV ಕೈಕೊಟ್ಟ ನಂತರ ಮಾಲೀಕರಿಗೆ ಎಲ್ಲಯೂ ಚಲಿಸಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ಸಿಂಗಲ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುವುದರಿಂದ, ಇದು ಡ್ರೈವ್‌ಟ್ರೇನ್ ವೈಫಲ್ಯದಂತೆ ತೋರುತ್ತಿದೆ. ಸದ್ಯ ಮಾಲೀಕರ ಕಾರು ಡ್ರೈವ್ ಮೋಡ್‌ನಲ್ಲಿ ಸಿಲುಕಿಕೊಂಡಿದೆ. ವಾಹನವನ್ನು ಚಲಿಸಲು ಸಾಧ್ಯವಾಗುತ್ತಿಲ್ಲ, ತ್ವರಿತ ಸಹಾಯಕ್ಕಾಗಿ ಅವರು ಟಾಟಾ ಮೋಟಾರ್ಸ್ EV ಅನ್ನು ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ವ್ಯಕ್ತವಾಗಿವೆ. ಲಕ್ಷಾಂತರ ಇವಿ ಕಾರುಗಳನ್ನು ಮಾರಾಟ ಮಾಡಿರುವ ಟಾಟಾ ಮೋಟಾರ್ಸ್‌ಗೆ ಬೆರಳೆಣಿಕೆಯಷ್ಟು ಸಮಸ್ಯೆಗಳು ಇದ್ದಿದ್ದೇ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಹೈಲೆಟ್ಸ್:
ಟಾಟಾ ನೆಕ್ಸಾನ್ EV ಮ್ಯಾಕ್ಸ್ ದೊಡ್ಡ 40.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಪ್ರಮಾಣಿತ Nexon EV ಯ 30.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಿಂತ ಸುಮಾರು ಶೇಕಡಾ 33 ರಷ್ಟು ದೊಡ್ಡದಾಗಿದೆ. ನೆಕ್ಸಾನ್ ಇವಿ ಮ್ಯಾಕ್ಸ್‌ನ ಎಲೆಕ್ಟ್ರಿಕ್ ಮೋಟಾರ್ 141 ಬಿಎಚ್‌ಪಿ ಪವರ್ ಮತ್ತು 250 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 100 kmph ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. ನೆಕ್ಸಾನ್ EV ಮ್ಯಾಕ್ಸ್ ARAI ಪ್ರಮಾಣೀಕರಿಸಿದ ಸಂಪೂರ್ಣ ಚಾರ್ಜ್‌ನಲ್ಲಿ 437 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಎರಡು ರೀತಿಯ ಚಾರ್ಜರ್ ಆಯ್ಕೆಗಳೊಂದಿಗೆ ಪರಿಚಯಿಸಿದೆ. ಇದು 3.3 kW ಸಾಮಾನ್ಯ ಚಾರ್ಜರ್ ಮತ್ತು 7.2 kW AC ಫಾಸ್ಟ್ ಚಾರ್ಜರ್‌ಗೆ ಬೆಂಬಲವನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು 7.2 kW AC ಫಾಸ್ಟ್ ಚಾರ್ಜರ್ ಅನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಳವಡಿಸಬಹುದಾಗಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, Nexon EV ಮ್ಯಾಕ್ಸ್ ಅನ್ನು ಅದರ ಪ್ರಮಾಣಿತ ಮಾದರಿಯಿಂದ ನವೀಕರಿಸಲಾಗಿದೆ. ಇದು ಹೊಸ ವೆಂಟಿಲೇಟೆಡ್ ಸೀಟ್‌ಗಳು, ಸೀಡ್ ಇಂಟೀರಿಯರ್, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಹೊಸ ಸೆಂಟರ್ ಕನ್ಸೋಲ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಡಿಮ್ಮಿಂಗ್ IRVM ಅನ್ನು ಪಡೆದುಕೊಂಡಿದೆ.


Click it and Unblock the Notifications