ಟಾಟಾ ನೆಕ್ಸಾನ್ ಪ್ರೈಮ್, ನೆಕ್ಸಾನ್ ಮ್ಯಾಕ್ಸ್ ಇವಿ Vs ಮಹೀಂದ್ರಾ XUV400: ಯಾವುದು ಉತ್ತಮ?

ಭಾರತದ ಮಾರುಕಟ್ಟೆಯಲ್ಲಿ ಅಂತಿಮವಾಗಿ ಮಹೀಂದ್ರಾ ಬಹುನೀರಿಕ್ಷಿತ XUV400 ಎಲೆಕ್ಟ್ರಿಕ್ ಎಸ್‌ಯುವಿಯನ್ನು ರೂ.15.99 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ (ಎಕ್ಸ್ ಶೋರೂಂ, ಭಾರತ). ಅದರ ದೊಡ್ಡ ಪ್ರತಿಸ್ಪರ್ಧಿ ಕಾರುಗಳಾದ ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್‌ನೊಂದಿಗೆ ಬೆಲೆ ಹಾಗೂ ಕಾರ್ಯಕ್ಷಮತೆ ಕುರಿತಂತೆ ಹೋಲಿಕೆ ಇಲ್ಲಿದೆ.

ಟಾಟಾ ನೆಕ್ಸಾನ್ ಇವಿ ಪ್ರೈಮ್, ನೆಕ್ಸಾನ್ ಇವಿ & ಮಹೀಂದ್ರಾ XUV400 ಪವರ್‌ಟ್ರೇನ್‌:
ಮೊದಲಿಗೆ ಪವರ್‌ಟ್ರೇನ್‌ನಿಂದ ಪ್ರಾರಂಭಿಸೋಣ. ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‌ಯುವಿ, 147.5 bhp ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಲಿದೆ. ಈ ಹೊಸ ಎಸ್‌ಯುವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 34.5kWh (ಚಿಕ್ಕ ಬ್ಯಾಟರಿ ಪ್ಯಾಕ್) ಮತ್ತು 39.4kWh (ದೊಡ್ಡ ಬ್ಯಾಟರಿ ಪ್ಯಾಕ್).

ಟಾಟಾ ನೆಕ್ಸಾನ್ ಪ್ರೈಮ್, ನೆಕ್ಸಾನ್ ಮ್ಯಾಕ್ಸ್ ಇವಿ Vs ಮಹೀಂದ್ರಾ XUV400: ಯಾವುದು ಉತ್ತಮ?

ಟಾಟಾ ನೆಕ್ಸಾನ್ ಇವಿ ಎರಡು ರೂಪಾಂತರಗಳನ್ನು ಹೊಂದಿದೆ. ಅವುಗಳೆಂದರೆ, ನೆಕ್ಸಾನ್ ಇವಿ ಪ್ರೈಮ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್. ಟಾಟಾ ನೆಕ್ಸಾನ್ ಇವಿ ಪ್ರೈಮ್ 127.3 bhp ಗರಿಷ್ಠ ಪವರ್ ಮತ್ತು 245 Nm ಪೀಕ್ ಟಾರ್ಕ್‌ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಲಿದ್ದು, 30.2kWh ಬ್ಯಾಟರಿ ಪ್ಯಾಕ್‌ ಹೊಂದಿದೆ. ಟಾಪ್-ಎಂಡ್ ಮಾದರಿ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ 143 bhp ಗರಿಷ್ಠ ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಜೊತೆಗೆ ದೊಡ್ಡ 40.5kWh ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ.

ರೇಂಜ್ & ಚಾರ್ಜಿಂಗ್:
34.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಮಹೀಂದ್ರಾ XUV400, ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, 375 ಕಿಲೋಮೀಟರ್‌ಗಳವರೆಗೆ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಆದರೆ, ದೊಡ್ಡ 39.4kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ XUV400, ಫುಲ್ ಚಾರ್ಜ್ ನಲ್ಲಿ 456 ಕಿಲೋಮೀಟರ್‌ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, DC ಫಾಸ್ಟ್ ಚಾರ್ಜರ್ ಬಳಸಿಕೊಂಡು ಮಹೀಂದ್ರಾ XUV400ಯನ್ನು ಕೇವಲ 50 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಟಾಟಾ ನೆಕ್ಸಾನ್ ಪ್ರೈಮ್, ನೆಕ್ಸಾನ್ ಮ್ಯಾಕ್ಸ್ ಇವಿ Vs ಮಹೀಂದ್ರಾ XUV400: ಯಾವುದು ಉತ್ತಮ?

ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ಪ್ರಕಾರ, ಟಾಟಾ ನೆಕ್ಸಾನ್ ಇವಿ ಪ್ರೈಮ್ ಎಲೆಕ್ಟ್ರಿಕ್ ಎಸ್‌ಯುವಿಯ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌, 312 ಕಿಲೋಮೀಟರ್‌ ರೇಂಜ್ ನೀಡಲಿದೆ. ಜೊತೆಗೆ ಈ ಎಸ್‌ಯುವಿಯ ಬ್ಯಾಟರಿಯು ವೇಗದ ಚಾರ್ಜಿಂಗ್ ಆಯ್ಕೆಯಲ್ಲಿ 60 ನಿಮಿಷಗಳಲ್ಲಿ ಶೇಕಡ 10 ರಿಂದ 80 ರಷ್ಟು ಚಾರ್ಜ್ ಆಗಲಿದೆ. ಟಾಪ್-ಎಂಡ್ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್, ಒಂದೇ ಚಾರ್ಜಿನಲ್ಲಿ 437 ಕಿಲೋಮೀಟರ್‌ವರೆಗೆ ರೇಂಜ್ ನೀಡಲಿದ್ದು, ಕೇವಲ 56 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

ಮಹೀಂದ್ರಾ XUV400 ಎಸ್‌ಯುವಿ, ಕೇವಲ 8.3 ಸೆಕೆಂಡುಗಳಲ್ಲಿ 100 km/h ವೇಗವನ್ನು ತಲುಪಬಹುದು. ಈ ಎಸ್‌ಯುವಿಯನ್ನು ಟಾಟಾದ ನೆಕ್ಸಾನ್ ಇವಿಗೆ ಹೋಲಿಸಿದರೆ, ನೆಕ್ಸಾನ್ ಇವಿ ಮ್ಯಾಕ್ಸ್ 9.9 ಸೆಕೆಂಡುಗಳಲ್ಲಿ 100 km/h ಟಾಪ್ ಸ್ವೀಡ್ ಹೊಂದಿದೆ ಎಂದು ಟಾಟಾ ಕಂಪನಿ ಹೇಳಿಕೊಂಡಿದೆ. ಆದರೆ, ನೆಕ್ಸಾನ್ ಇವಿ ಪ್ರೈಮ್ 9 ಸೆಕೆಂಡುಗಳಲ್ಲಿ 100 km/h ವೇಗವನ್ನು ಪಡೆಯಲಿದೆ. ಇವುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಎರಡು ಎಸ್‌ಯುವಿಗಳು ಖರೀದಿಗೆ ಯೋಗ್ಯವಾಗಿವೆ ಎಂದು ಹೇಳಬಹುದು.

ಟಾಟಾ ನೆಕ್ಸಾನ್ ಪ್ರೈಮ್, ನೆಕ್ಸಾನ್ ಮ್ಯಾಕ್ಸ್ ಇವಿ Vs ಮಹೀಂದ್ರಾ XUV400: ಯಾವುದು ಉತ್ತಮ?

ಬೆಲೆ:
ಮಹೀಂದ್ರಾ XUV400, 'EC' ರೂಪಾಂತರದ ಬೆಲೆ ರೂ.15.99 ಲಕ್ಷದಿಂದ (ಎಕ್ಸ್-ಶೋರೂಂ, ಭಾರತ) ಆರಂಭವಾಗಲಿದೆ. ವೇಗವಾದ 7.2kW ಚಾರ್ಜರ್‌ನೊಂದಿಗೆ ದೊರೆಯುವ 'EC' ಆವೃತ್ತಿ ಬೆಲೆ ರೂ.16.49 ಲಕ್ಷ ಇದೆ. ಮಹೀಂದ್ರಾ XUV400ಯ 'EL' ಆವೃತ್ತಿಯ ಬೆಲೆ ರೂ.18.99 ಲಕ್ಷ ಇದ್ದು, ಈ ಆವೃತ್ತಿಯು ದೊಡ್ಡ ಬ್ಯಾಟರಿ ಪ್ಯಾಕ್‌ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇನ್ನು, ಟಾಟಾ ನೆಕ್ಸಾನ್ ಇವಿ ಪ್ರೈಮ್‌ನ ಬೆಲೆ ರೂ. 14.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಬೆಲೆ ರೂ.18.34 ಲಕ್ಷದಿಂದ ಶುರುವಾಗಲಿದೆ.

ಮಹೀಂದ್ರಾ XUV400, 4,200ಎಂಎಂ ಉದ್ದ, 1,821ಎಂಎಂ ಅಗಲ ಮತ್ತು 2,600ಎಂಎಂ ವ್ಹೀಲ್‌ಬೇಸ್ ಹೊಂದಿರುವ ದೊಡ್ಡ ಎಸ್‌ಯುವಿಯಾಗಿದೆ ಎಂದು ಹೇಳಬಹುದು. ಇದನ್ನು ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ಇವಿ ಮ್ಯಾಕ್ಸ್ ಹೋಲಿಕೆ ಮಾಡಿದ್ದರೆ, ಇವುಗಳು 3,993ಎಂಎಂ ಉದ್ದ, 1,811ಎಂಎಂ ಅಗಲ ಮತ್ತು 102ಎಂಎಂ ಕಡಿಮೆ ವೀಲ್‌ಬೇಸ್ ಅನ್ನು ಪಡೆದಿವೆ. ಒಟ್ಟಾರೆಯಾಗಿ ಈ ಎಸ್‌ಯುವಿಗಳು ಅವುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಗ್ರಾಹಕರನ್ನು ಆಕರ್ಷಿಸಲಿದ್ದು, ನಿಮಗೆ ಯಾವ ಕಾರು ಇಷ್ಟವಾಯಿತು ಕಾಮೆಂಟ್ ಮಾಡಿ ತಿಳಿಸಿರಿ.

Most Read Articles

Kannada
English summary
Tata nexon ev prime ev max vs mahindra xuv 400 comparison details kannada
Story first published: Tuesday, January 17, 2023, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X