TATA ಕಾರುಗಳೇ ಬೆಸ್ಟ್: ಏನ್ ಮೈಲೇಜ್, ಲಕ್ಷ - ಲಕ್ಷ ಕಿಲೋಮೀಟರ್ ಕ್ರಮಿಸಿದ್ರು ಜಗ್ಗಲ್ಲ, ಕುಗ್ಗಲ್ಲ..!

ದೇಶದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ವಿನ್ಯಾಸದಿಂದ ಟಾಟಾ ಕಂಪನಿ ಕಾರುಗಳು ಖ್ಯಾತಿಗಳಿಸಿವೆ. ಅದರಲ್ಲೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರ ಜೊತೆಗೆ ದೀರ್ಘಕಾಲಿಕ ಬಾಳಿಕೆ ಬರುವುದರಿಂದ ಮಧ್ಯಮ ವರ್ಗದ ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ, ಟಾಟಾ ಕಾರಿನೊಂದಿಗಿನ ತನ್ನ ಅನುಭವವನ್ನು ಶೇರ್ ಮಾಡಿದ್ದಾರೆ.

ಯಶ್ ವರ್ಮಾ ಎಂಬುವವರೂ ಹಲವು ವರ್ಷಗಳಿಂದ ಟಾಟಾ ಕಂಪನಿ ಕಾರುಗಳನ್ನು ಓಡಿಸುತ್ತಿದ್ದಾರೆ. ಸದ್ಯ, ನೆಕ್ಸಾನ್ ಕಾರಿನಲ್ಲಿ 2,00,000 ಕಿಲೋಮೀಟರ್ ಕ್ರಮಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2017ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನೆಕ್ಸಾನ್ ಎಸ್‌ಯುವಿಯನ್ನು ಖರೀದಿಸಿದ ಮೊದಲು ಕೆಲವು ಗ್ರಾಹಕರಲ್ಲಿ ಇವರು ಒಬ್ಬರಾಗಿದ್ದಾರೆ. ಕಾರು ಕೊಂಡುಕೊಂಡ ಒಂದೇ ವರ್ಷದಲ್ಲಿ ಅಂದರೆ 2018ರವರೆಗೆ 24,000 ಕಿಲೋಮೀಟರ್ ಓಡಿಸಿ, ಒಂದು ರೀತಿಯಲ್ಲಿ ದಾಖಲೆಯನ್ನೇ ಮಾಡಿದ್ದರು.

TATA ಕಾರುಗಳೇ ಬೆಸ್ಟ್: ಏನ್ ಮೈಲೇಜ್, ಲಕ್ಷ - ಲಕ್ಷ ಕಿಲೋಮೀಟರ್ ಕ್ರಮಿಸಿದ್ರು ಜಗ್ಗಲ್ಲ, ಕುಗ್ಗಲ್ಲ..!

ನೆಕ್ಸಾನ್ ಮೇಲೆ ಅತೀವ ಪ್ರೀತಿ ಹೊಂದಿರುವ ಇವರಿಗೆ ಅದರಲ್ಲಿ ಲಾಂಗ್ ಡ್ರೈವ್ ಹೋಗುವುದು ತುಂಬಾ ಅಚ್ಚುಮೆಚ್ಚಿರಬೇಕು. ಆ ಕಾರಣದಿಂದ ಆಗಲೇ ಪ್ರತಿ ವಾರಾಂತ್ಯದಲ್ಲಿ 300 ಕಿಲೋಮೀಟರ್ ಡ್ರೈವ್ ಮಾಡುತ್ತಿದ್ದರಂತೆ. ಮೊದಲೇ ಟಾಟಾ ಕಾರುಗಳೆಂದರೇ ಉತ್ತಮ ಇಂಧನ ದಕ್ಷತೆಗೆ ಹೆಸರುವಾಸಿ. ಯಶ್ ವರ್ಮಾ ಒಡೆತನದ ನೆಕ್ಸಾನ್ ಕಾರು, ಹೆದ್ದಾರಿಗಳಲ್ಲಿ 21 km/l ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇದಕ್ಕೂ ಮುನ್ನ, ಅವರು ಭಾರತದ ಎಷ್ಟೋ ಮಂದಿಯ ಫೆವರೇಟ್ ಕಾರಾಗಿರುವ ಟಾಟಾ ಇಂಡಿಕಾವನ್ನು ಬರೋಬ್ಬರಿ 3 ಲಕ್ಷ ಕಿಲೋಮೀಟರ್ ಓಡಿಸಿದ್ದಾರೆ. ಅದು ಕೇವಲ 7 ವರ್ಷಗಳಲ್ಲಿ. ಯಶ್ ವರ್ಮಾ ಹೇಳುವಂತೆ ಎಸಿ ಇಲ್ಲದ ಈ ಕಾರು, ಆ ಕಾಲದಲ್ಲಿಯೇ 18 km/l ಇಂಧನ ದಕ್ಷತೆ ಹೊಂದಿತ್ತು. ಜೊತೆಗೆ ಅವರ ಕುಟುಂಬದ ಮೊದಲ ಕಾರು ಕೂಡ ಆಗಿತ್ತು.

ಇವರ ಬಳಿಯಿರುವ ನೆಕ್ಸಾನ್ ಹಾಗೂ ಇಂಡಿಕಾ ಕಾರುಗಳು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿವೆ. ಪೆಟ್ರೋಲ್ ಚಾಲಿತ ಕಾರುಗಳಿಗೆ ಹೋಲಿಕೆ ಮಾಡಿದರೆ, ಡೀಸೆಲ್ ಇಂಧನದಿಂದ ಓಡುವ ಕಾರುಗಳೇ ಅತ್ಯುತ್ತಮವಾಗಿರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಯಾವುದೇ ಸಮಸ್ಯೆ ಇಲ್ಲದೆ, 2.5 ಲಕ್ಷದಿಂದ 3 ಲಕ್ಷ ಕಿಲೋಮೀಟರ್ ಅನ್ನು ಸುಲಭವಾಗಿ ಕ್ರಮಿಸಬಲ್ಲವು. ಸರ್ವಿಸ್ ಮಾಡಿಸಿದ್ರೆ ಅವುಗಳಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು.

ಟಾಟಾ ಇಂಡಿಕಾ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಈ ಕಾರನ್ನು 1998ರಲ್ಲಿ ಆಟೋ ಎಕ್ಸ್‌ಪೋ ಅನಾವರಣ ಮಾಡಲಾಗಿತ್ತು. ಲಾಂಚ್ ಆದ ಕೆಲವೇ ದಿನಗಲ್ಲಿ ಬರೋಬ್ಬರಿ 115,000 ಬುಕಿಂಗ್ ಪಡೆದುಕೊಂಡಿದ್ದ ಇಂಡಿಕಾ, ರೂ.2.59 ಲಕ್ಷದಿಂದ ರೂ.3.9 ಲಕ್ಷ. ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತಿತ್ತು. ಜೊತೆಗೆ 1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ಪಡೆದಿತ್ತು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗುವ ಟಾಟಾ ನೆಕ್ಸಾನ್ ರೂ.7.80 - 14.33 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ರೂಪಾಂತರಗಳಿಗೆ 17.33 kmpl ನಿಂದ 24.07 kmpl ಮೈಲೇಜ್ ನೀಡುತ್ತದೆ. ಟಾಟಾ ಕಂಪನಿ, ನೆಕ್ಸಾನ್ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಇದನ್ನು ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. ಇದು ನವೀಕರಿಸಿದ ಎಂಜಿನ್ ಹೊಂದಿರಲಿದೆ.

ಇಲ್ಲಿ, ಯಶ್ ವರ್ಮಾ ಅವರಿಗೆ ಟಾಟಾ ಕಾರುಗಳ ಮೇಲೆ ಪ್ರೀತಿ ಎಷ್ಟಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಭಾರತದಲ್ಲಿ ಈಗಲೂ ಎಷ್ಟೋ ಮಂದಿ ತಮ್ಮ ಕುಟುಂಬದ ಮೊದಲ ಕಾರಾಗಿ ಟಾಟಾ ಕಂಪನಿಯ ಕಾರುಗಳನ್ನೇ ಖರೀದಿಸಲು ಬಯಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಅವುಗಳ ಕಾರ್ಯಕ್ಷಮತೆ ಹಾಗೂ ದೀರ್ಘಕಾಲಿಕೆ ಬಾಳಿಕೆ. ಪ್ರಸ್ತುತ ಬಹುತೇಕ ಕಂಪನಿಗಳು ಡೀಸೆಲ್ ಚಾಲಿತ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆ. ಆದರೆ, ಟಾಟಾ ಅನೇಕ ಡಿಸೇಲ್ ಮಾದರಿಗಳನ್ನು ಉತ್ಪಾದಿಸುತ್ತಿದೆ.

Article Published On: Tuesday, May 2, 2023, 14:23 [IST]
English summary
Tata nexon owner run 2 lakh km after completing 3 lakh km indica details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+