6 ವರ್ಷಗಳ ನಂತರವೂ ಅದೇ ಕ್ರೇಜ್: ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಟಾಟಾದ ಈ ಕಾರುಗಳಿಗೆ ಸ್ಥಾನ!

ಟಾಟಾ ಮೋಟಾರ್ಸ್ ಭಾರತದಲ್ಲಿ ತನ್ನ ಸ್ಟೈಲಿಷ್ ಎಸ್‌ಯುವಿಗಳಿಂದ ಭಾರೀ ಜನಪ್ರಿಯತೆ ಪಡೆದಿದೆ. ಅಲ್ಲದೇ ನಿರ್ಮಾಣ ಗುಣಮಟ್ಟಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದಿದೆ. ಅದರಲ್ಲೂ ಟಾಟಾ ನೆಕ್ಸಾನ್ ಮತ್ತು ಪಂಚ್ ಎರಡೂ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿವೆ. ಈ ಎರಡೂ ಕಾರುಗಳ ಮಾರಾಟವು ಭರ್ಜರಿ ಲಾಭ ತಂದುಕೊಟ್ಟಿದೆ.

ಟಾಟಾ ನೆಕ್ಸಾನ್ ಅನ್ನು 2017 ರಲ್ಲಿ ಬಿಡುಗಡೆ ಮಾಡಿದರೆ, ಪಂಚ್ ಅನ್ನು 2021 ರಲ್ಲಿ ಬಿಡುಗಡೆ ಮಾಡಲಾಯಿತು. ಭಾರತದ ಕಾರು ಮಾರುಕಟ್ಟೆಯಲ್ಲಿ ಪಂಚ್ ಶೀಘ್ರವಾಗಿ ತನ್ನ ಛಾಪು ಮೂಡಿಸಿತು. ಪ್ರಸ್ತುತ ಪರಿಸ್ಥಿತಿ ಏನೆಂದರೆ, ಟಾಟಾ ಮೋಟಾರ್ಸ್‌ನ ಎರಡು ಹೆಚ್ಚು ಮಾರಾಟವಾದ ಕಾರುಗಳಾದ ನೆಕ್ಸಾನ್ ಮತ್ತು ಪಂಚ್ ನವೆಂಬರ್ 2023 ರಲ್ಲಿ ಟಾಪ್-20 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

tata-nexon-punch-got-place-in-the-list-of-best-selling-cars

ನೆಕ್ಸಾನ್ ಈಗಾಗಲೇ ಟಾಟಾ ಮೋಟಾರ್ಸ್‌ನ ಅತ್ಯುತ್ತಮ ಮಾರಾಟವಾದ ಕಾರು. ಆದರೆ, ಈಗ ಕಳೆದ ನವೆಂಬರ್‌ನಲ್ಲಿ ಪಂಚ್‌ನ ಮಾರಾಟವು ಟಾಟಾ ನೆಕ್ಸಾನ್‌ಗೆ ಸರಿಸಮಾನವಾಗಿದೆ. ಇವೆರಡರ ಮಾರಾಟದ ಅಂಕಿಅಂಶಗಳಲ್ಲಿ ಬಹಳ ಕಡಿಮೆ ವ್ಯತ್ಯಾಸವಿದೆ. ಟಾಟಾ ನೆಕ್ಸಾನ್ ನವೆಂಬರ್ 2023 ರಲ್ಲಿ 14,916 ಯುನಿಟ್‌ಗಳು ಮಾರಾಟವಾಗಿದ್ರೆ, ನವೆಂಬರ್ 2022 ರಲ್ಲಿ 15,871 ಯುನಿಟ್‌ಗಳು ಮಾರಾಟವಾಗಿವೆ.

ಅದೇ ಟಾಟಾ ಪಂಚ್ ಮಾರಾಟವನ್ನು ನೊಡುವುದಾದ್ರೆ ನವೆಂಬರ್ 2023 ರಲ್ಲಿ 14,383 ಕಾರುಗಳ ಮಾರಾಟ ಹಾಗೂ ನವೆಂಬರ್ 2022 ರಲ್ಲಿ 12,131 ಯುನಿಟ್‌ಗಳ ಮಾರಾಟವಾಗಿದೆ. ಅಂದರೆ, ಪಂಚ್ ಮಾರಾಟವು ವಾರ್ಷಿಕ ಆಧಾರದ ಮೇಲೆ ಹೆಚ್ಚಾಗಿದೆ. ನೆಕ್ಸಾನ್ ಮಾರಾಟ ಕಡಿಮೆಯಾಗಿದ್ದು, ನೆಕ್ಸಾನ್ ಮಾರಾಟಕ್ಕೆ ಪಂಚ್ ತೀವ್ರ ಪೈಪೋಟಿ ನೀಡಿರುವುದನ್ನು ಇಲ್ಲಿ ನೋಡಬಹುದು.

tata-nexon-punch-got-place-in-the-list-of-best-selling-cars

ಈ ಅಂಕಿಅಂಶಗಳೊಂದಿಗೆ, ಟಾಟಾ ನೆಕ್ಸಾನ್ ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ SUV ಮತ್ತು ಟಾಟಾ ಪಂಚ್ ಎರಡನೇ ಅತಿ ಹೆಚ್ಚು ಮಾರಾಟವಾದ SUV ಆಗಿ ಕಂಪನಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ನೆಕ್ಸಾನ್ ಕೂಡ ಇತ್ತೀಚೆಗೆ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದ್ದು, ಮುಂಬರುವ ತಿಂಗಳುಗಳಲ್ಲಿ ಉತ್ತಮ ಮಾರಾಟವನ್ನು ನಿರೀಕ್ಷಿಸಲಾಗಿದೆ. ಹಾಗೆಯೇ ಟಾಟಾ ಪಂಚ್ ಎಲೆಕ್ಟ್ರಿಕ್ ಆವೃತ್ತಿ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಟಾಟಾ ಪಂಚ್ ವಿಶೇಷತೆಗಳು: ಪಂಚ್ ಬೆಲೆ ರೂ. 6 ಲಕ್ಷದಿಂದ ರೂ. 9.52 ಲಕ್ಷ (ಎಕ್ಸ್ ಶೋ ರೂಂ, ದೆಹಲಿ). ಇದು 7.0 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಎಸಿ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು/ವೈಪರ್‌ಗಳು, ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್, AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

tata-nexon-punch-got-place-in-the-list-of-best-selling-cars

ಟಾಟಾ ನೆಕ್ಸಾನ್ ವಿಶೇಷತೆಗಳು: ನೆಕ್ಸಾನ್ ಬೆಲೆ ರೂ. 8.10 ಲಕ್ಷದಿಂದ ರೂ. 15.50 ಲಕ್ಷ (ಎಕ್ಸ್ ಶೋ ರೂಂ). ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 15, 2023, 13:32 [IST]
English summary
Tata nexon punch got place in the list of best selling cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+