Tata Punch: ಟಾಟಾ ಪಂಚ್ ಸಿಎನ್‌ಜಿ ಕಾರಿನ ಮೈಲೇಜ್ ಬಹಿರಂಗ, ಸ್ಕೂಟರ್, ಬೈಕ್‌ಗಳಿಗಿಂತ ಇದೇ ಬೆಸ್ಟ್!

ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾಕರ ಕಂಪನಿಯಾಗಿದೆ. ಕೆಲವೇ ದಿನಗಳ ಹಿಂದೆ, ಹ್ಯುಂಡೈ ಎಕ್ಸ್‌ಟರ್‌ಗೆ ಟಫ್ ಫೈಟ್ ನೀಡಲು ಪಂಚ್ (Punch) ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂಬ ಮಾಹಿತಿ ಬಹಿರಂಗವಾಗಿದೆ. ಸ್ಕೂಟರ್, ಬೈಕ್‌ಗಳಿಗೆ ಹೋಲಿಸಿದರೆ ಇದೇ ಬೆಸ್ಟ್ ಅಂತೇ..

ಟಾಟಾ ಪಂಚ್ ಸಿಎನ್‌ಜಿ ಸುಮಾರು 26.9 km/kg (ARAI) ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ. ಅದರ ಸಮೀಪದ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ (27.1 km/kg) ಕೂಡ ಹೆಚ್ಚುಕಮ್ಮಿ ಅಷ್ಟೇ ಇಂಧನ ದಕ್ಷತೆಯನ್ನು ಹೊಂದಿದೆ. ಇದು, ಕೊಂಚ ಮಟ್ಟಿಗೆ ಗ್ರಾಹಕರನ್ನು ಗೊಂದಲಕ್ಕೆ ತಳ್ಳಿದೆ. ಆದರೆ, ಮೈಲೇಜ್ ವಿಚಾರದಲ್ಲಿ ದ್ವಿಚಕ್ರ ವಾಹನಗಳಿಗಿಂತ ಇವೇ ಸೂಕ್ತವೆಂಬಂತೆ ಭಾಸವಾಗುತ್ತಿದೆ.

Tata Punch: ಟಾಟಾ ಪಂಚ್ ಸಿಎನ್‌ಜಿ ಕಾರಿನ ಮೈಲೇಜ್ ಬಹಿರಂಗ, ಸ್ಕೂಟರ್, ಬೈಕ್‌ಗಳಿಗಿಂತ ಇದೇ ಬೆಸ್ಟ್!

ಸಿಎನ್‌ಜಿ ಚಾಲಿತ ಟಾಟಾ ಪಂಚ್ ಎಸ್‌ಯುವಿ, 1.2 ಲೀಟರ್, 3 ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 74 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.7.10 ಲಕ್ಷ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಟಾಟಾ ಪಂಚ್ ಸಿಎನ್‌ಜಿ ಎಸ್‌ಯುವಿ ಯುವ ಗ್ರಾಹಕರನ್ನು ಆಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. 7.0 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮೆಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್ಸ್ ಪಡೆದಿದೆ. ವಿನ್ಯಾಸದ ದೃಷ್ಟಿಯಿಂದ 16 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ ಸಿಗ್ನೇಚರ್ ಗ್ರಿಲ್, ಎರಡು ಬದಿಯಲ್ಲಿ ಅತ್ಯಾಧುನಿಕ ಹೆಡ್‌ಲೈಟ್ ಇದೆ.

ಟಾಟಾ ಕಂಪನಿಯು ಬಹುತೇಕ ಎಲ್ಲ ಪಂಚ್ ಎಸ್‌ಯುವಿಯ ಪೆಟ್ರೋಲ್ ರೂಪಾಂತರಗಳಲ್ಲಿ ಸನ್‌ರೂಫ್ ಅನ್ನು ಪರಿಚಯಿಸಿದೆ. ಇದನ್ನು ಹೊಂದಿರುವ ವೇರಿಯೆಂಟ್ಸ್ ಬೆಲೆ ರೂ.8.25 ಲಕ್ಷದಿಂದ ಆರಂಭವಾಗಲಿದೆ. ಇದರ ಹೊರತಾಗಿ ಪಂಚ್ ಕಾರಿನ ವಿವಿಧ ರೂಪಾಂತರಗಳು ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಟಾಟಾ ಪಂಚ್ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ.

ಪೆಟ್ರೋಲ್ ಚಾಲಿತ ಟಾಟಾ ಪಂಚ್ ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು, 1.2 - ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 87 hp ಪವರ್ ಹಾಗೂ 115 Nm ಪೀಕ್ ಟಾರ್ಕ್ ಹೊರ ಹಾಕುತ್ತದೆ. 5 ಸ್ವೀಡ್ ಮ್ಯಾನುವಲ್/ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 18.8 - 20.09 kmpl ಮೈಲೇಜ್ ನೀಡುತ್ತದೆ.

ಟಾಟಾ ಪಂಚ್, ಮೈಕ್ರೋ ಎಸ್‌ಯುವಿಯಾಗಿದ್ದರೂ ಸುರಕ್ಷತೆಯ ವಿಷಯದಲ್ಲಿ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಟಾಟಾ, ಪಂಚ್ ಕಾರನ್ನು ಬಿಡುಗಡೆಗೊಳಿಸಿ, ಎರಡು ವರ್ಷ ಕಳೆಯುವುದರಲ್ಲಿ 2 ಲಕ್ಷ ಯುನಿಟ್‌ ಉತ್ಪಾದಿಸಿ, ದಾಖಲೆ ಬರೆದಿದೆ.

ಟಾಟಾ, ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿಯೂ ಕೆಲವೇ ತಿಂಗಳಲ್ಲಿ ಬಿಡುಗಡೆಗೊಳಿಸಬಹುದು. ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದ್ದು ಸಂಪೂರ್ಣ ಚಾರ್ಜಿನಲ್ಲಿ 350 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಇಂಧನ ಚಾಲಿತ ಕಾರಿನಂತೆ ಎಲೆಕ್ಟ್ರಿಕ್ ಪಂಚ್ ಕೂಡ ಟಚ್‌ಸ್ಕ್ರೀನ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ ಸಿಎನ್‌ಜಿ ಎಸ್‌ಯುವಿ 1.2 - ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 68 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.6 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

Article Published On: Thursday, August 10, 2023, 17:10 [IST]
English summary
Tata punch cng suv mileage revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+