ಸೋರಿಕೆಯಾಯ್ತು ಟಾಟಾ ಪಂಚ್‌ ಎಲೆಕ್ಟ್ರಿಕ್‌ ಡೀಟೇಲ್ಸ್‌: ಮಾರುಕಟ್ಟೆಗೆ ಬಂದರೆ ಇದರದ್ದೇ ಹವಾ!

ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸದ್ಯಕ್ಕೆ ಭಾರತದಲ್ಲಿ ಖ್ಯಾತಿಗಳಿಸಿರುವ ಕಾರೆಂದರೆ ಅದು ಟಾಟಾ ಪಂಚ್‌. ಕೆಲವು ವರ್ಷಗಳ ಹಿಂದೆಯಷ್ಟೇ ಟಾಟಾ ಪಂಚ್‌ ಮಾರುಕಟ್ಟೆಗೆ ಕಾಲಿಟ್ಟರೂ ಇದು ಮಧ್ಯಮ ವರ್ಗದ ಕಾರು ಪ್ರೀಯರ ನಡುವೆ ಗಳಿಸಿರುವ ಕೀರ್ತಿ ಮಾತ್ರ ಅಪಾರ. ಇದೀಗ ಈ ಕಾರಿಗೆ ಹೊಸ ಅಪ್‌ಡೇಟೊಂದು ಬರುತ್ತಿದೆ.

ಹೌದು, ಇದೀಗ ಟಾಟಾ ಪಂಚ್‌ (Tata Punch) ಬಹುದೊಡ್ಡ ಅಪ್‌ಡೇಟ್‌ ಒಂದು ಬರುತ್ತಿದ್ದು, ಇದು ಪಂಚ್‌ ಪ್ರೀಯರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಇಂದಿನ ಈ ಲೇಖನದಲ್ಲಿ ನಾವು ಟಾಟಾ ಪಂಚ್‌ ಯಾವ ದೊಡ್ಡ ಅಪ್‌ಡೇಟ್‌ ಅನ್ನು ಪಡೆಯಲಿದೆ ಎಂಬುದರ ಕುರಿತಾಗಿ ವಿವರವಾಗಿ ನೊಡಲಿದ್ದೇವೆ.

TATA Punch Electric

ಹೌದು, ಮಾಹಿತಿಗಳ ಪ್ರಕಾರ ಟಾಟಾ ಕಂಪನಿಯು ತನ್ನ ಮೈಕ್ರೋ ಎಸ್‌ಯುವಿ ಪಂಚ್‌ ಅನ್ನು ಎಲೆಕ್ಟ್ರಿಕ್‌ ಆಗಿಯೂ ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ. ಇದು ಬಹು ನಿರೀಕ್ಷಿತ ಅಪ್‌ಡೇಟ್‌ ಆಗಿದ್ದು, ಟಾಟಾ ಪಂಚ್‌ ಏನಾದರೂ ಎಲೆಕ್ಟ್ರಿಕ್‌ ರೂಪದಲ್ಲಿ ಬಂದರೆ ಅದು ಟಾಟಾ ಮೋಟಾರ್ಸ್‌ನ ಯಶಸ್ಸನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುವುದಂತೂ ಖಂಡಿತ.

ಇನ್ನು ಈ ವದಂತಿಗಳಿಗೆ ಮತ್ತಷ್ಟು ಇಂಬು ನೀಡುವ ರೀತಿಯಲ್ಲಿ ಟಾಟಾ ಪಂಚ್‌ನ ಹಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗುತ್ತಿದ್ದು, ಇವುಗಳ ಮೂಲಕ ಟಾಟಾ ಪಂಚ್‌ ಬಹುತೇಕ ಎಲೆಕ್ಟ್ರಿಕ್‌ ಆಗುವುದಂತೂ ಖಂಡಿತ ಎಂಬುದು ನೆಟ್ಟಿಗರ ಲೆಕ್ಕಾಚಾರ. ಈಗಾಗಲೇ ಪಂಚ್‌ ಎಲೆಕ್ಟ್ರಿಕ್‌ ಅನ್ನು ದೇಶದ ನಾನಾ ಭಾಗಗಳಲ್ಲಿ ಟೆಸ್ಟ್‌ ಡ್ರೈವ್‌ ಸಹ ನಡೆಸಲಾಗುತ್ತಿದೆ ಎಂಬುದಕ್ಕೆ ಸೋರಿಕೆಯಾಗಿರುವ ಚಿತ್ರಗಳೇ ಸಾಕ್ಷಿ.

TATA Punch Electric

ಮಾಹಿತಿಗಳ ಪ್ರಕಾರ ಮುಂದಿನ ವರ್ಷ ಆರಂಭದಲ್ಲಿ ಅಥವಾ ಮಧ್ಯ ವೇಳೆಯಲ್ಲಿ ಟಾಟಾ ಮೋಟಾರ್ಸ್‌ ಪಂಚ್‌ ಎಲೆಕ್ಟ್ರಿಕ್‌ ಅನ್ನು ಮಾರುಕಟ್ಟೆಗೆ ತರಲಿದ್ದಾರೆ. ಸೋರಿಕೆಯಾಗಿರುವ ಚಿತ್ರಗಳಲ್ಲಿ ಕ್ಯಾಮೋ ಫ್ಲ್ಯಾಗ್‌ ಸುತ್ತಿರುವುದರಿಂದ ಕಾರಿನ ವಿನ್ಯಾಸದ ಬದಲಾವಣೆಯಲ್ಲಿ ಬದಲಾವಣೆಗಳು ಇರಲಿವೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಇದರ ಸ್ಪೈ ವಿಡಿಯೋ ಅಂದರೆ ಸೋರಿಕೆಯಾದ ವಿಡಿಯೋಗಳು ಸಹ ಇದ್ದು, ವಿಡಿಯೋದಲ್ಲಿ ಕ್ಯಾಮೋ ಫ್ಲ್ಯಾಗ್‌ ಆವರಿಸಿದ ವಿಡಿಯೋವನ್ನು ಕಾಣಬಹುದಾಗಿದೆ. ವಿಡಿಯೋ ರೆಕಾರ್ಡ್‌ ಮಾಡಿದ ವ್ಯಕ್ತಿ ಮೊದಲಿಗೆ ಹಿಂಬಾಗದಿಂದ ವಿಡಿಯೋ ಮಾಡಿದ್ದು ನಂತರದಲ್ಲಿ ಮುಂಭಾಗವನ್ನೂ ರೆಕಾರ್ಡ್‌ ಮಾಡಿದ್ದಾನೆ. ಸಾಧರಣವಾಗಿ ಟಾಟಾ ಎಲೆಕ್ಟ್ರಿಕ್‌ ವಾಹನಗಳಲ್ಲಿ ಪೆಟ್ರೋಲ್‌/ಡೀಸೆಲ್‌ ವಾಹನಗಳಿಗಿಂತ ವಿಭಿನ್ನವಾದ ಡಿಸೈನ್ ಅನ್ನು ಕಾಣಬಹುದಾಗಿದೆ.

TATA Punch Electric

ಇನ್ನು ಈ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಚಿತ್ರಗಳನ್ನು ನೋಡಿದರೆ ಇದರ ಮುಂಭಾದಲ್ಲಿ ಯಾವುದೇ ಬದಲಾವಣೆ ಆದಂತೆ ಕಾಣಿಸುತ್ತಿಲ್ಲ. ಆದರೆ ಎಲೆಕ್ಟ್ರಿಕ್‌ ವಾಹನಗಳಲ್ಲಿ ಸಾಮಾನ್ಯವಾಗಿ ಕ್ಲೋಸ್ಡ್‌ ಅಥವಾ ಮುಚ್ಚಿದ ಗ್ರಿಲ್‌ ಇರುವುದರಿಂದ ಈ ಕಾರಿನಲ್ಲೂ ನಾವು ಅದನ್ನು ನಿರೀಕ್ಷಿಸಬಹುದಾಗಿದೆ. ಇದು ವಿನ್ಯಾಸದಲ್ಲಿ ಮಾಮೂಲಿ ಪಂಚ್‌ಗಿಂತ ಕೊಂಚ ವಿಭಿನ್ನವಾಗಿ ಕಾಣಿಸಲಿದೆ.

ಇನ್ನು ಈ ಕಾರಿನ ಸೈಡ್‌ ಡಿಸೈನ್‌ ಕುರಿತಾಗಿ ನೋಡುವಾಗ ಇಲ್ಲಿಯೂ ಸಹ ತೀರಾ ಹೆಚ್ಚಿನ ಸಂಖ್ಯೆಯ ಬದಲಾವಣೆಗಳು ಕಾಣ ಸಿಗುತ್ತಿಲ್ಲ. ಹೊಸ ಟಾಟಾ ನೆಕ್ಸಾನ್‌ನಲ್ಲಿ ಕಾಣ ಸಿಗುವ 5 ಸ್ಪೋಕ್‌ ಏರೋ ಅಲಾಯ್‌ ವ್ಹೀಲ್‌ಗಳನ್ನು ಕಾಣಬಹುದಾಗಿದೆ. ಇನ್ನು ಹಿಂಭಾಗದಲ್ಲಿ ಕ್ಯಾಮೋ ಫ್ಲ್ಯಾಗ್‌ ಆವರಿಸಿದ್ದುದರಿಂದ ಹಿಂಬಾಗದ ವಿನ್ಯಾಸದ ಕುರಿತಾಗಿ ಯಾವುದೇ ಮಾಹಿತಿ ಇಲ್ಲವಾದರೂ ಇದರಲ್ಲೂ ಸಹ ಕನೆಕ್ಟೆಡ್‌ ಟೇಲ್‌ ಲ್ಯಾಂಪ್ ಇರುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Wednesday, November 15, 2023, 18:04 [IST]
English summary
Tata punch electric new details leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+