Tata Punch: ಟಾಟಾ ಪಂಚ್ ಕಾರಿಗೆ ಭಾರೀ ಬೇಡಿಕೆ.. ಬಿಡುಗಡೆಯಾಗಿ 2 ವರ್ಷವಾದರೂ ಇದೇ ಎಲ್ಲರಿಗೂ ಅಚ್ಚುಮೆಚ್ಚು!
ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಜನಪ್ರಿಯತೆ ಗಳಿಸಿದೆ. ಕಂಪನಿಯು ಪಂಚ್ (Punch) ಮೂಲಕ ಮೆಕ್ರೋ ಎಸ್‌ಯುವಿ ವಿಭಾಗವನ್ನು ಪ್ರವೇಶಿಸಿತು. ಈ ಪಂಚ್ ಕಾರು, ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಅದರ ಖ್ಯಾತಿ ಒಂದಿಷ್ಟು ಕಡಿಮೆಯಾಗಿಲ್ಲ. ಈಗಲೂ ದೀರ್ಘಕಾಲ ಕಾಯುವಿಕೆ ಅವಧಿಯನ್ನು ಹೊಂದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ನೀವು ಪಂಚ್ ಎಸ್‌ಯುವಿಯ ಸಿಎನ್‌ಜಿ ರೂಪಾಂತರವನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 12 ವಾರಗಳು ಕಾಯಬೇಕು. ಅದೇ ರೀತಿಯಲ್ಲಿ ಪೆಟ್ರೋಲ್ ವೇರಿಯೆಂಟ್ ಡಿಲೆವರಿಯಾಗಲು 4 ವಾರಗಳು ಬೇಕಾಗುತ್ತದೆ. ಇದು, ಮುಂಬೈಗೆ ಮಾತ್ರ ಅನ್ವಯಿಸುತ್ತದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಕಾಯುವಿಕೆ ಅವಧಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಡೀಲರ್ ಶಿಪ್ ಸಂಪರ್ಕಿರಿ.

ಭಾರತದ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮೊದಲಿಗೆ ಪೆಟ್ರೋಲ್ ರೂಪಾಂತರದ ಬಗ್ಗೆ ಮಾತನಾಡೋಣ. ಇದು 1.2-ಲೀಟರ್, 3-ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ, 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಈ ಕಾರು, ವಿನ್ಯಾಸದ ದೃಷ್ಟಿಯಿಂದ ಸಾಕಷ್ಟು ಅತ್ಯಾಧುನಿಕವಾಗಿದ್ದು, ಮುಂಭಾಗ, ಸಿಗ್ನೇಚರ್ ಗ್ರಿಲ್ ಆಕರ್ಷಕ ಹೆಡ್‌ಲೈಟ್ ಹಾಗೂ ಫಾಗ್ ಲೈಟ್ ಹೊಂದಿದೆ. ಇದರೊಟ್ಟಿಗೆ, ಫೋರ್-ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ಟರ್ನ್ ಇಂಡಿಕೇಟರ್ ಪಡೆದಿದೆ. ಮೈಲೇಜ್ ವಿಷಯವಾಗಿ ಹೇಳುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ, 18.8 - 20.09 kmpl ಇಂಧನ ದಕ್ಷತೆ ಹೊಂದಿದೆ.
ಈ ಕಾರು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಪಂಚ್ ಖರೀದಿದಾರರಿಗೆ ಉತ್ತಮ ಆಯ್ಕೆಯಾಗುತ್ತದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್, ರೇರ್ ವ್ಯೂ ಕ್ಯಾಮೆರಾ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ.
ಟಾಟಾ ಪಂಚ್ ಸಿಎನ್‌ಜಿ ಆವೃತ್ತಿ ಬಗ್ಗೆ ಹೇಳುವುದಾದರೆ, ಇದು, 1.2 ಲೀಟರ್, 3-ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ, ಕೊಂಚ ಕಡಿಮೆ 74 bhp ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಗ್ರಾಹಕರಿಗೆ ಸಿಗಲಿದ್ದು, ಯಾವ ಬೈಕಿಗೂ ಕಮ್ಮಿ ಇಲ್ಲದಂತಹ ಮೈಲೇಜ್ ನೀಡಲಿದ್ದು, 26.9 km/kg ಇಂಧನ ದಕ್ಷತೆ ಒಳಗೊಂಡಿದೆ.
ಟಾಟಾ ಕಂಪನಿ ಎಲೆಕ್ಟ್ರಿಕ್ ರೂಪದಲ್ಲಿಯೂ ಪಂಚ್ ಕಾರನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಈಗಾಗಲೇ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ದೊಡ್ಡದಾದ ಬ್ಯಾಟರಿ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 350 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ರೂ.12 ಲಕ್ಷ ಬೆಲೆಗೆ ಸಿಗಬಹುದು.
ಇನ್ನು, ದೇಶದಲ್ಲಿ ಮಾರಾಟವಾಗುವ ಪ್ರಮುಖ ಎಸ್‌ಯುವಿ ಪಟ್ಟಿಯಲ್ಲಿ ಟಾಟಾ ಪಂಚ್ ಸ್ಥಾನ ಪಡೆದಿರುತ್ತದೆ. ಕಳೆದ ಸೆಪ್ಟೆಂಬರ್ (2023) ತಿಂಗಳಲ್ಲಿ ಮಾರಾಟ ವರದಿಯಲ್ಲಿ ಕಂಪನಿಯು 13,036 ಯುನಿಟ್ ಪಂಚ್ ಕಾರು ಸೇಲ್ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 6% ಬೆಳವಣಿಗೆ ಕಂಡಿದೆ. ಕೆಲವೇ ದಿನದಲ್ಲಿ ದಸರಾ ಹಬ್ಬ ಬರಲಿದ್ದು, ಆಗ ಪಂಚ್ ಕಾರಿಗೆ ಮತ್ತಷ್ಟು ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications