Tata Safari: ಟಾಟಾದ 'ಬಲಭೀಮ' ಈ ಸಫಾರಿ, ಬಿಡುಗಡೆಯಾಗಿ 2 ತಿಂಗಳಾಗಿಲ್ಲ.. ತುಂಬಿಬಿಟ್ಟಿವೆ ಶೋರೂಂಗಳು!

ಟಾಟಾ ಮೋಟಾರ್ಸ್ (Tata Motors) ಈ ವರ್ಷದ ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಹೊಸ ಸಫಾರಿ (Safari Facelift) ಎಸ್‌ಯುವಿಯನ್ನು ಲಾಂಚ್ ಮಾಡಿತ್ತು. ಈ ಕಾರು, ರೂ.16.19 - ರೂ.27.34 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಬಿಡುಗಡೆಯಾಗಿ 2 ತಿಂಗಳು ಕಳೆಯುವುದರೊಳಗೆ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ನವೆಂಬರ್ ತಿಂಗಳು (2023) ಫೇಸ್‌ಲಿಫ್ಟ್ ಟಾಟಾ ಸಫಾರಿ ಮಾರಾಟ ದ್ವಿಗುಣಗೊಂಡಿದೆ. ಕಂಪನಿಯು 2,207 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿದೆ. ಹೋದ ವರ್ಷದ ಇದೇ ಅವಧಿಗೆ (1,437 ಯುನಿಟ್) ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 54% ಪ್ರಗತಿ ಸಾಧಿಸಿದೆ. ತಿಂಗಳ ಬೆಳವಣಿಗೆಯನ್ನು ಗಮನಿಸುವುದಾದರೆ, ಅಕ್ಟೋಬರ್‌ನಲ್ಲಿ 1,340 ಯುನಿಟ್ ಸಫಾರಿ ಎಸ್‌ಯುವಿ ಸೇಲ್ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ, ತಿಂಗಳಿಂದ ತಿಂಗಳಿಗೂ ಶೇಕಡ 65% ಮುಂದಿದೆ.

Tata Safari: ಟಾಟಾದ ಬಲಭೀಮ ಈ ಸಫಾರಿ, ಬಿಡುಗಡೆಯಾಗಿ 2 ತಿಂಗಳಾಗಿಲ್ಲ.. ತುಂಬಿಬಿಟ್ಟಿವೆ ಶೋರೂಂಗಳು!

ಫೇಸ್‌ಲಿಫ್ಟ್ ಟಾಟಾ ಸಫಾರಿ (facelift Tata Safari) ವೈಶಿಷ್ಟ್ಯಗಳಿಗೆ ಅನುಗುಣವಾಗಿ ಆಕರ್ಷಕ 10 ರೂಪಾಂತರದ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ಅವುಗಳಲ್ಲಿ ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಡಾರ್ಕ್ ಮುಖ್ಯವಾಗಿವೆ. ಜೊತೆಗೆ 7 ಬಣ್ಣದ ಆಯ್ಕೆಯಲ್ಲಿ ಸಿಗಲಿದೆ. ಮಾಹಿತಿ ಪ್ರಕಾರ, ಈ ಕಾರು 4 ರಿಂದ 6 ವಾರಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿದೆ.

ಟಾಟಾ ಸಫಾರಿ ಎಸ್‌ಯುವಿ ಪವರ್‌ಟ್ರೇನ್ ಬಗ್ಗೆ ಹೇಳುವದಾದರೆ, ಇದರ 2-ಲೀಟರ್ ಡೀಸೆಲ್ ಎಂಜಿನ್ 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, 16.30 ಕಿ.ಮೀ ಮೈಲೇಜ್ ಕೊಡಲಿದೆ.

Tata Safari: ಟಾಟಾದ ಬಲಭೀಮ ಈ ಸಫಾರಿ, ಬಿಡುಗಡೆಯಾಗಿ 2 ತಿಂಗಳಾಗಿಲ್ಲ.. ತುಂಬಿಬಿಟ್ಟಿವೆ ಶೋರೂಂಗಳು!

ಈ ಕಾರು ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ನವೀನ ಹೆಡ್‌ಲ್ಯಾಂಪ್‌ ಹಾಗೂ ಎಲ್ಇಡಿ ಲೈಟ್ ಬಾರ್, 9-ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್, ಆಪಲ್ ಕಾರ್‌ ಪ್ಲೇ, ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಟಾಟಾ ಸಫಾರಿ ಎಸ್‌ಯುವಿ ಅತ್ಯಾಧುನಿಕವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿದ್ದು, 7 ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.

Tata Safari: ಟಾಟಾದ ಬಲಭೀಮ ಈ ಸಫಾರಿ, ಬಿಡುಗಡೆಯಾಗಿ 2 ತಿಂಗಳಾಗಿಲ್ಲ.. ತುಂಬಿಬಿಟ್ಟಿವೆ ಶೋರೂಂಗಳು!

ಟಾಟಾ ಸಫಾರಿಯೊಂದಿಗೆ ಬಿಡುಗಡೆಯಾಗಿರುವ ಟಾಟಾ ಹ್ಯಾರಿಯರ್, ರೂ.15.49 ಲಕ್ಷದಿಂದ ರೂ.24.49 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 2.0-ಲೀಟರ್ ಡೀಸೆಲ್ ಎಂಜಿನ್, 170 hp ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಹೊಸ ಟಾಟಾ ಹ್ಯಾರಿಯರ್ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, ಯುವ ಗ್ರಾಹಕರನ್ನು ಆಕರ್ಷಿಸವಂತಹ ವಿನ್ಯಾಸವನ್ನು ಹೊಂದಿದೆ. ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಹಾಗೂ 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಜೊತೆಗೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

ಟಾಟಾ ಹ್ಯಾರಿಯರ್ ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌, ADAS, ಹಿಲ್ - ಹೋಲ್ಡ್ ಕಂಟ್ರೋಲ್ ಅನ್ನು ಒಳಗೊಂಡಿದೆ.

Article Published On: Wednesday, December 13, 2023, 10:35 [IST]
English summary
Tata safari facelift suv sales massively boost november rs 16 19 lakh starting price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+