Tata Zeeta Plus: ಟಾಟಾದ ಅಗ್ಗದ ಬೆಲೆಯ ಇ ಬೈಕ್ ಬಿಡುಗಡೆ, ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ

ದೇಶದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸದ್ಯ, ಟಾಟಾ (Tata) ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಸ್ಟ್ರೈಡರ್ ಜೀಟಾ ಸರಣಿಯ ಹೊಚ್ಚ ಹೊಸ ಇ ಬೈಕ್ ಬಿಡುಗಡೆ ಮಾಡಿದೆ. ಇದು ಪರಿಸರ ಸ್ನೇಹಿ ವಾಹನವಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಸ್ಟ್ರೈಡರ್ ಜೀಟಾ ಪ್ಲಸ್ ರೂ.26,995 ಬೆಲೆಗೆ ಸಿಗಲಿದೆ. ಇದು ಪರಿಚಯಾತ್ಮಕ ದರವಾಗಿದ್ದು, ಸೀಮಿತ ಅವಧಿ ಬಳಿಕ, ರೂ.32,995 ಬೆಲೆಯಲ್ಲಿ ಲಭ್ಯವಾಗಲಿದೆ. ಸ್ಟ್ರೈಡರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಈ ಇ ಬೈಕ್ ಆರ್ಡರ್ ಮಾಡಿದರೆ, ಕಂಪನಿ ಕಡೆಯಿಂದ ಹೋಂ ಡೆಲೆವರಿ ಮಾಡಲಾಗುತ್ತದೆ. ಎರಡು ವರ್ಷಗಳ ವಾರಂಟಿ ಇದ್ದು, ಇಎಂಐ ಆಯ್ಕೆಯನ್ನು ಒಳಗೊಂಡಿದೆ.

Tata Zeeta Plus: ಟಾಟಾದ ಅಗ್ಗದ ಬೆಲೆಯ ಇ ಬೈಕ್ ಬಿಡುಗಡೆ, ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ

ಈ ಜೀಟಾ ಪ್ಲಸ್ ಇ ಬೈಕ್ ಪೆಡಲ್ ಆಯ್ಕೆಯೊಂದಿಗೆ 6-volt/6 Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. 216 Wh ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಂತಹ ಭೂ ಪ್ರದೇಶದಲ್ಲಿ ಬೇಕಾದರೂ ಚಲಿಸುವ ಶಕ್ತಿಯನ್ನು ಪಡೆದಿದೆ. ಇತರೆ ಜೀಟಾ ಸರಣಿ ಇ ಬೈಕ್ ಗಳಿಗೆ ಹೋಲಿಸಿದರೆ, ಜೀಟಾ ಪ್ಲಸ್ ಬ್ಯಾಟರಿ ಕೊಂಚ ಪವರ್ ಫುಲ್ ಆಗಿದೆ.

ಪರಿಸರ ಸ್ನೇಹಿಯಾಗಿರುವ ಸ್ಟ್ರೈಡರ್ ಜೀಟಾ ಪ್ಲಸ್ ಇ ಬೈಕ್, 25 kmph ಟಾಪ್ ಸ್ವೀಡ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 30 km ವರೆಗೆ ಸುಲಭವಾಗಿ ಚಲಿಸಬಲ್ಲದು. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿ ಮನೆಯ ವಿದ್ಯುತ್ ಬಳಕೆಯಲ್ಲಿ ಮೂರರಿಂದ ನಾಲ್ಕು ಗಂಟೆ ಚಾರ್ಜ್ ಆಗಲಿದ್ದು, ನಗರ ಪ್ರದೇಶಗಳಿಗೆ ಹೇಳಿ ಮಾಡಿಸಿದ ರೀತಿಯಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸ್ಟ್ರೈಡರ್ ಜೀಟಾ ಪ್ಲಸ್ ಇ ಬೈಕ್ ಅನ್ನು ಸ್ಟೀಲ್ ಹಾರ್ಡ್‌ಟೈಲ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದ್ದು, ಆಕರ್ಷಕ ಡಿಸೈನ್ ಕೂಡ ಪಡೆದಿದೆ. ಇದು ಶಕ್ತಿಯುತ ಆಟೋ ಕಟ್ ಬ್ರೇಕ್ಸ್ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ನೀವು ಒಂದು ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆಯನ್ನು ಖರ್ಚು ಮಾಡಬೇಕು. ಇನ್ನುಳಿದಂತೆ ಸ್ಟ್ರೈಡರ್ ಇ ಬೈಕ್ ಗಳು, ದೇಶಾದ್ಯಂತ 4,000ಕ್ಕೂ ಹೆಚ್ಚು ರಿಟೇಲ್ ಸ್ಟೋರ್ ಗಳಲ್ಲಿ ಲಭ್ಯವಿವೆ.

ಸ್ಟ್ರೈಡರ್ ಜೀಟಾ ಪ್ಲಸ್ ಇ ಬೈಕ್ ಬಿಡುಗಡೆ ಬಗ್ಗೆ ಮಾತನಾಡಿರುವ ಕಂಪನಿಯ ಬ್ಯುಸಿನೆಸ್ ಹೆಡ್ ರಾಹುಲ್ ಗುಪ್ತ ಅವರು, 'ದೇಶದಲ್ಲಿ 'ಪರ್ಯಾಯ ಚಲನಶೀಲತೆ ವಾಹನ (alternate mobility) ವಾಹನಗಳನ್ನು ಬಳಕೆ ಮಾಡುವಂತೆ ಜನರನ್ನು ಪ್ರೇರಿಪಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜೀಟಾ ಪ್ಲಸ್ ಇ ಬೈಕ್ ಅದ್ಬುತ ಮಾದರಿಯಾಗಿದೆ. ವೆಚ್ಚವು ಕಡಿಮೆ ಇದ್ದು, ಪರಿಸರ ಸ್ನೇಹಿಯಾಗಿದೆ' ಎಂದು ಹೇಳಿದ್ದಾರೆ.

ಸ್ಟ್ರೈಡರ್ ಜೀಟಾ ಪ್ಲಸ್ ಇ ಬೈಕ್ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದ್ದು, ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವುದರಿಂದ ಹೆಚ್ಚಿನ ಯುವ ಗ್ರಾಹಕರಿಗೆ ಇಷ್ಟವಾಗಬಹುದು. ಮೊದಲೇ ಟಾಟಾ ನಂಬಿಕೆಗೆ ಹೆಸರಾಗಿದ್ದು, ಅದರ ಇ ಬೈಕ್ ಆಗಿರುವುದರಿಂದ ಬಹುತೇಕ ಖರೀದಿದಾರರು ಲೈಕ್ ಮಾಡಬಹುದು. ಶೂನ್ಯ ಹೊರಸೂಸುವಿಕೆ ವಾಹನವಾಗಿರುವುದರಿಂದ ಕೊಂಡುಕೊಳ್ಳುವವರ ಸಂಖ್ಯೆಯು ಅಧಿಕಗೊಳ್ಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 6, 2023, 18:46 [IST]
English summary
Tata stryder zeeta plus e bike launched india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+