ಸವಾಲೆಸೆದ ಬ್ರಾಂಡ್‌ಗಳಿಗೆ ಸರಿಯಾಗಿ ಉತ್ತರ ಕೊಟ್ಟ TATA... ಹತ್ತಿರವು ಸುಳಿಯಲಿಲ್ಲ, ಅಜಗಜಾಂತರ ವ್ಯತ್ಯಾಸ!
ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಟಾಟಾ ಟಿಯಾಗೋ ಇವಿಗೆ ನೇರ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿದ್ದ ಎಂಜಿ ಕಾಮೆಟ್ ಈಗ ಮಾರಾಟದಲ್ಲಿ ಟಿಯಾಗೊವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. 2023 ರ ಎರಡನೇ ತ್ರೈಮಾಸಿಕದಲ್ಲಿ, ಟಾಟಾ Tiago EV 10,695 ಯುನಿಟ್‌ಗಳ ಪ್ರಭಾವಶಾಲಿ ಮಾರಾಟದ ಅಂಕಿಅಂಶವನ್ನು ದಾಖಲಿಸಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದೆ.
ಪ್ರತಿ ಬಾರಿ ಅಗ್ರಸ್ಥಾನದಲ್ಲಿರುತ್ತಿದ್ದ Nexon EV 5,072 ಕಾರುಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. 3,257 ಯುನಿಟ್‌ಗಳೊಂದಿಗೆ ಟಾಟಾ ಟಿಗೊರ್ ಇವಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ಮಹೀಂದ್ರಾ XUV400, 2,234 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, MG ಕಾಮೆಟ್ ಮತ್ತು MG ZS EV ಕ್ರಮವಾಗಿ 1,914 ಮತ್ತು 1,747 ಯುನಿಟ್‌ಗಳನ್ನು ಮಾರಾಟ ಮಾಡಿ ಐದನೇ ಮತ್ತು ಆರನೇ ಸ್ಥಾನದಲ್ಲಿವೆ.

ಟಾಪ್ 10 ಪಟ್ಟಿಯಲ್ಲಿ ಸಿಟ್ರೊಯೆನ್ eC3, BYD ಅಟ್ಟೊ 3, Kia EV6, ಮತ್ತು ಹುಂಡೈ ಕೋನಾ EV ಕೂಡ ಸ್ಥಾನ ಪಡೆದಿವೆ. Tiago EV ಒಂದು ಗೇಮ್-ಚೇಂಜರ್ ಆಗಿದ್ದು, ಬಜೆಟ್ ಸ್ನೇಹಿ ಪರ್ಯಾಯವನ್ನು ಗ್ರಾಹಕರಿಗೆ ಒದಗಿಸುತ್ತದೆ. 8.69 ಲಕ್ಷದಿಂದ ಪ್ರಾರಂಭವಾಗುವ ಇದರ ಬೆಲೆಗಳು, ಟಾಪ್-ಎಂಡ್ ರೂಪಾಂತರಕ್ಕಾಗಿ 11.99 ಲಕ್ಷದವರೆಗೆ ಹೋಗುತ್ತದೆ.
ಟಾಟಾ ಟಿಯಾಗೊ vs ಎಂಜಿ ಕಾಮೆಟ್ ಭೀಕರ ಟ್ರೋಲ್‌ಗಳು: ಎಂಜಿ ಕಾಮೆಟ್ ಬಿಡುಗಡೆಗೂ ಮುನ್ನ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಇವಿ ಕಾರೆಂದು ಟಾಟಾ ಟಿಯಾಗೋ ಇವಿ ಜನಪ್ರಿಯತೆ ಪಡೆದಿತ್ತು. ಆದರೆ ಎಂಜಿ ಕಾಮೆಟ್ ಬಿಡುಗಡೆ ಬಳಿಕ ಅತ್ಯಂತ ಕೈಗೆಟುಕುವ ಇವಿ ಎಂಬ ಬಿರುದು ಕಾಮೆಟ್ ಧಕ್ಕಿಸಿಕೊಂಡಿತು. ಇಲ್ಲೇ ನೋಡಿ ಎರಡು ಕಾರುಗಳ ನಡುವೆ ಟ್ರೋಲ್‌ಗಳು ಆರಂಭವಾಗಿದ್ದು.

ಟಾಟಾ ಡೀಲರ್ ಒಬ್ಬರು ಎಂಜಿ ಕಾಮೆಟ್ ಅನ್ನು ಕಾರ್ಟೂನ್‌ಗೆ ಹೋಲಿಸಿ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎಂಜಿ ಕಡೆಯಿಂದ ಪೋಸ್ಟರ್ ಒಂದು ಹೊರಹೊಮ್ಮಿತ್ತು, ಇದರಲ್ಲಿ ಟಾಟಾ ಟಿಯಾಗೊವನ್ನು ಐಸ್ ಏಜ್‌ಗೆ ಹೋಲಿಸಲಾಗಿತ್ತು. ವಿಚಿತ್ರವೆಂದರೆ ಈ ವಿಚಾರದಲ್ಲಿ ಯಾವುದೇ ಬ್ರಾಂಡ್‌ಗಳು ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಕೇವಲ ಡೀಲರ್‌ಗಳಿಂದ ಟ್ರೋಲ್‌ಗಳು ವೈರಲ್ ಆಗಿದ್ದವು.
ಫೇಸ್ ಬುಕ್‌ನಲ್ಲಿ ಟಾಟಾ ಡೀಲರ್‌ಶಿಪ್ ಹಂಚಿಕೊಂಡ MG ಕಾಮೆಟ್ ಕುರಿತ ಪೋಸ್ಟರ್ ನಲ್ಲಿ ಎಂಜಿ ಕಾಮೆಟ್ ಹಾಗೂ ಟಾಟಾ ಟಿಯಾಗೋವನ್ನು ನೋಡಬಹುದು. "ಇದು ಕಾರ್ ಕಾರ್ಟೂನ್ ಅಲ್ಲ" ಎಂಬ ಸಂದೇಶವನ್ನು ನೀಡುತ್ತಾ "ಕಾರ್" ಎಂಬ ಪದವು ಟಾಟಾ ಕಾನೂನುಬದ್ಧ ಸಾರಿಗೆ ವಿಧಾನವನ್ನು ನೀಡುತ್ತಿದೆ ಎಂದು ಸೂಚಿಸುತ್ತದೆ. ಹಾಗೆಯೇ "ಕಾರ್ಟೂನ್" ಎಂಬ ಪದವು MG ಕಾಮೆಟ್ ಗಂಭೀರವಾದ ಆಯ್ಕೆಯಾಗಿಲ್ಲ ಎಂದು ಸೂಚಿಸುತ್ತದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಎಂಜಿ ಕಾಮೆಟ್ ಪೋಸ್ಟರ್ ಹೊರಬಂದಿತ್ತು. ಇದರಲ್ಲಿ ಟಾಟಾ ಕಾರುಗಳನ್ನು "ಐಸ್ ಏಜ್" ಎಂದು ಉಲ್ಲೇಖಿಸಲಾಗಿದ್ದು, ಎಂಜಿ ಕಾಮೆಟ್ ಅನ್ನು "ನ್ಯೂ ಏಜ್" ಎಂದು ತೋರಿಸಲಾಗಿದೆ. ಅಂದರೆ ಟಾಟಾ ಕಾರುಗಳನ್ನು ಹಳೆಯ ಜಮಾನಕ್ಕೆ ಹೊಲಿಸಿದ್ದು, ಎಂಜಿಯನ್ನು ಆಧುನಿಕ ಮತ್ತು ತಾಂತ್ರಿಕವಾಗಿ ಸುಧಾರಿತ ಕಾರುಗಳೆಂದು ಬಿಂಬಿಸಲಾಗಿದೆ. ಜನಸಂದಣಿಯಿಂದ ಎದ್ದು ಕಾಣುವ ಸ್ಟೈಲಿಶ್ ಕಾರನ್ನು ಹುಡುಕುತ್ತಿರುವ ಗ್ರಾಹಕರನ್ನು ಎಂಜಿ ಗುರಿಯಾಗಿಸಿಕೊಂಡಿದೆ ಎಂಬ ಅರ್ಥವನ್ನು ನೀಡುತ್ತದೆ.
ಈ ಟ್ರೋಲ್‌ಗಳು ಒಂದೆರಡು ದಿನಗಳು ಆಟೋ ವಲಯದಲ್ಲಿ ಸದ್ದು ಮಾಡಿದ್ದವು, ಎಂಜಿ ಕಾಮೆಟ್ ಇವಿ ವಲಯದಲ್ಲಿ ಕ್ರಾಂತಿ ಸೃಷ್ಟಿಸಲಿದೆ ಎಂದು ಎಲ್ಲರು ಊಹಿಸಿದ್ದರು. ಆರಂಭದಲ್ಲಿ ಗ್ರಾಹಕರಿಂದ ಪ್ರತಿಕ್ರಿಯೆ ಕೂಡ ಉತ್ತಮವಾಗಿಯೇ ಲಭಿಸಿತ್ತು. ಆದರೆ ಈಗ ಮಾರಾಟದಲ್ಲಿ ಟಿಯಾಗೋ ಇವಿಯನ್ನು ಹಿಂದಿಕ್ಕುವಲ್ಲಿ ಅಜಗಜಾಂತರ ವ್ಯತ್ಯಾಸವನ್ನು ತೋರಿರುವುದು ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ.
ಒಟ್ಟಾರೆ ಟಾಟಾ ಕಾರುಗಳೆ ಇವಿ ವಲಯದ ಟಾಪ್ 3 ಸ್ಥಾನಗಳನ್ನು ಆಕ್ರಿಸಿರುವುದು ಅಚ್ಚರಿಗೊಳಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಹಾಗಾಗಿ ನಮ್ಮ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications