Tata: ಅವಳಿ ಸಿಲಿಂಡರ್‌ ತಂತ್ರಜ್ಞಾನದೊಂದಿಗೆ ಟಾಟಾ ಟಿಯಾಗೊ, ಟಿಗೊರ್ iCNG ಬಿಡುಗಡೆ

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಸಖತ್ ಬೇಡಿಕೆಯಿದೆ, ಪ್ರತಿಯೊಂದು ಬ್ರಾಂಡ್ ಕೂಡ ಸಿಎನ್‌ಜಿ ಮಾದರಿಗಳಿಗೆ ಪ್ರಮುಖ್ಯತೆ ನೀಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಟಾಟಾ ಮೋಟಾರ್ಸ್ ಬಗ್ಗೆ ಹೇಳಲೇಬೇಕು, ವಾಹನ ತಯಾರಕರು ಈ ವರ್ಷದ ಆರಂಭದಲ್ಲಿ ಆಲ್ಟ್ರೊಜ್‌ನಲ್ಲಿ ಪರಿಚಯಿಸಿದ ಅವಳಿ ಸಿಎನ್‌ಜಿ ಟ್ಯಾಂಕ್‌ಗಳ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.

ಈಗ ತನ್ನ ಇತರ ಮಾದರಿಗಳಿಗೂ ಈ ಟ್ವಿನ್ ಸಿಲಿಂಡರ್ ಟೆಕ್ನಾಲಜಿ ಮೂಲಕ ಸಿಎನ್‌ಜಿ ವಿಭಾಗವನ್ನು ಆಳಲು ಟಾಟಾ ಟಿಯಾಗೋ ಹಾಗೂ ಟಾಟಾ ಟಿಗೋರ್ ಐಸಿಎನ್‌ಜಿ ಕಾರುಗಳನ್ನು ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ನವೀಕರಿಸಲಾಗಿದೆ. ಕಾರ್ಖಾನೆಯಲ್ಲೇ ಅಳವಡಿಸಲಾದ (ಫ್ಯಾಕ್ಟರಿ ಫಿಟೆಡ್) CNG ಟ್ಯಾಂಕ್‌ಗಳು ಪ್ರಾಯೋಗಿಕ ಸರಕು ಸಾಮರ್ಥ್ಯಕ್ಕೂ ಹೆಚ್ಚಿನ ಸ್ಥಳವನ್ನು ಒದಗಿಸುತ್ತವೆ ಎಂದು ಕಂಪನಿ ತಿಳಿಸಿದೆ.

tata-tiago-tigor-icng-updated-with-twin-cylinders

ಟಾಟಾದ ಅವಳಿ-ಸಿಲಿಂಡರ್ ತಂತ್ರಜ್ಞಾನವು 70 ಲೀ. ಸಾಮರ್ಥ್ಯದ ಎರಡು ಇಂಧನ ಟ್ಯಾಂಕ್‌ಗಳನ್ನು ಬೂಟ್‌ ಜಾಗದಲ್ಲಿ ಸ್ಪೇರ್ ವೀಲ್ ಬದಲಿಗೆ ಟ್ಯಾಂಕ್‌ಗಳನ್ನು ಇರಿಸಲಾಗಿದೆ. ಹಾಗೆಯೇ ಸ್ಪೇರ್ ವೀಲ್ ಅನ್ನು ಎರಡೂ ವಾಹನಗಳಲ್ಲಿ ಕಾರಿನ ಹಿಂಭಾಗದ ಒಳಭಾಗಕ್ಕೆ ಸರಿಸಲಾಗಿದೆ. ಈ ಮೂಲಕ ಸೂಟ್‌ಕೇಸ್, ಬ್ಯಾಗ್‌ಗಳು ಮತ್ತು ಹೆಚ್ಚಿನ ಸರಕುಗಳನ್ನು ಇರಿಸಿಕೊಳ್ಳಲು ಬಳಸಬಹುದಾದ ಸ್ಥಳಾವಕಾಶವಿದೆ.

ಟಾಟಾ ಟಿಯಾಗೊ ಮತ್ತು ಟಿಗೊರ್ ಸಿಎನ್‌ಜಿ 1.2-ಲೀಟರ್ ನ್ಯಾಚುರಲ್ಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. CNG-ಚಾಲಿತ ಆವೃತ್ತಿಯಲ್ಲಿ 76 bhp ಪವರ್ ಮತ್ತು 97 Nm ಪೀಕ್ ಟಾರ್ಕ್ ಉತ್ಪಾದಿಸಲು ಮೋಟಾರ್ ಅನ್ನು ಡಿಟ್ಯೂನ್ ಮಾಡಲಾಗಿದೆ. ಆದರೆ ಇದನ್ನು ಕೇವಲ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

tata-tiago-tigor-icng-updated-with-twin-cylinders

ಟಾಟಾ ಟಿಯಾಗೊ ಮತ್ತು ಟಾಟಾ ಟಿಗೋರ್ CNG ಎರಡು ಮಾದರಿಗಳ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಸೆಲೆರಿಯೊ, ಮಾರುತಿ ಸುಜುಕಿ ಡಿಜೈರ್ ಮತ್ತು ಹುಂಡೈ ಔರಾಗೆ ಹೋಲಿಸಿದರೆ Tiago ಮತ್ತು Tigor CNG ಯೋಗ್ಯವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಹಾಗಾಗಿಯೇ ಬಿಡುಗಡೆಯಾದಾಗಿನಿಂದ ಇಲ್ಲಿಯವೆರೆಗೆ ಬರೋಬ್ಬರಿ 50,000 ಕ್ಕೂ ಹೆಚ್ಚು CNG ಆವೃತ್ತಿಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿದೆ.

ಟಾಟಾ ಟಿಯಾಗೊ ಮತ್ತು ಟಿಗೊರ್ iCNG ಅನ್ನು ಜನವರಿ 2022 ರಲ್ಲಿ ಪರಿಚಯಿಸಲಾಯಿತು. ಇತ್ತೀಚಿನ ನವೀಕರಣವು ಮಾದರಿಗಳನ್ನು ಹೆಚ್ಚು ಪ್ರಾಯೋಗಿಕವಾಗಿಸಿದೆ. ಟಾಟಾದ CNG ಶ್ರೇಣಿಯು ಖಾಸಗಿ ಖರೀದಿದಾರರಿಗೆ ಲಭ್ಯವಿದೆ, ಹೊಸ ನವೀಕರಿಸಿದ CNG ಲೈನ್‌ಅಪ್‌ನ ವಿತರಣೆಗಳು ಇಂದಿನಿಂದ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.

tata-tiago-tigor-icng-updated-with-twin-cylinders

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ನ ಹೆಡ್-ಮಾರ್ಕೆಟಿಂಗ್ ವಿನಯ್ ಪಂತ್, "Altroz iCNG ಯೊಂದಿಗೆ ನಮ್ಮ ಯಶಸ್ಸಿನ ಮೇಲೆ ಮತ್ತಷ್ಟು ನಿರ್ಮಾಣ ಮತ್ತು CNG ವಿಭಾಗವನ್ನು ಇನ್ನಷ್ಟು ಶಕ್ತಗೊಳಿಸಲು ನಾವು ಅವಳಿ-ಸಿಲಿಂಡರ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಉತ್ತಮ ಮಾರುಟ ತಂದುಕೊಡುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಇಂದು ಕೇವಲ ಒಂದಲ್ಲ ಮೂರು ಉತ್ಪನ್ನಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗಿದೆ. Tiago, Tigor ಮತ್ತು ಬಹು ನಿರೀಕ್ಷಿತ ಮತ್ತು ನಮ್ಮ ನಿಮ್ಮೆಲ್ಲರ ಪ್ರೀತಿಪಾತ್ರ ಸಬ್‌ಕಾಂಪ್ಯಾಕ್ಟ್ SUV ಟಾಟಾ ಪಂಚ್ ಕುಡ ಈ ತಂತ್ರಜ್ಞಾನದೊಂದಿಗೆ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ. ಈ ಪರಿಚಯಗಳು ಒಟ್ಟಾಗಿ ನಮ್ಮ ಸಿಎನ್‌ಜಿ ಶ್ರೇಣಿಯನ್ನು ಆಕರ್ಷಕವಾಗಿ, ಸಮಗ್ರವಾಗಿ ಮತ್ತು ಎಂದಿಗಿಂತಲೂ ಬಲವಾಗಿ ಮಾಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, August 4, 2023, 16:31 [IST]
English summary
Tata tiago tigor icng updated with twin cylinders
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+