Tata ಕಾರುಗಳಿಗೆ ಭಾರೀ ಬೇಡಿಕೆ: ವಿತರಣೆಗೆ ಇಷ್ಟು ಸಮಯ ಕಾಯಲೇಬೇಕು

ಭಾರತದಲ್ಲಿ ಟಾಟಾ (Tata) ಮೋಟಾರ್ಸ್ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಂಪನಿ ಕಾರುಗಳು ವಿಶ್ವಾಸಾರ್ಹವಾಗಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಅದರಲ್ಲೂ ಈ ಮೇ ತಿಂಗಳಲ್ಲಿ ವಿವಿಧ ಮಾದರಿಗಳು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಟಾಟಾದ ಜನಪ್ರಿಯ ಎಸ್‌ಯುವಿಗಳಲ್ಲಿ ನೆಕ್ಸಾನ್ ಪ್ರಮುಖವಾಗಿದೆ. ಫ್ಯುಯೆಲ್ ಹಾಗೂ ಎಲೆಕ್ಟ್ರಿಕ್ ಪವರ್ ಟ್ರೈನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ಇದರ ಕೆಲವೊಂದು ರೂಪಾಂತರಗಳನ್ನು ಇವತ್ತು ಬುಕಿಂಗ್ ಮಾಡಿದರೂ ಕನಿಷ್ಠ 14 ವಾರಗಳ ಬಳಿಕ ವಿತರಣೆಯಾಗಲಿದೆ. ನೆಕ್ಸಾನ್ ಪೆಟ್ರೋಲ್ MT, ನೆಕ್ಸಾನ್ EV ಪ್ರೈಮ್, ನೆಕ್ಸಾನ್ EV ಮ್ಯಾಕ್ಸ್ 4 ರಿಂದ 6 ವಾರ ಕಾಯುವಿಕೆ ಅವಧಿಯನ್ನು ಹೊಂದಿವೆ.

Tata ಕಾರುಗಳಿಗೆ ಭಾರೀ ಬೇಡಿಕೆ: ವಿತರಣೆಗೆ ಇಷ್ಟು ಸಮಯ ಕಾಯಲೇಬೇಕು

ನೆಕ್ಸಾನ್ ಡೀಸೆಲ್ MT 3 ರಿಂದ 4 ವಾರ, ನೆಕ್ಸಾನ್ ಡೀಸೆಲ್ AMT ಆವೃತ್ತಿ 6 ರಿಂದ 10 ವಾರಗಳ ಬಳಿಕ ವಿತರಣೆಯಾಗಲಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇಂಧನ ಚಾಲಿತ ನೆಕ್ಸಾನ್ ಎಸ್‌ಯುವಿ, ರೂ.7.80 ರಿಂದ 14.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ನೆಕ್ಸಾನ್ EV ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ದರವನ್ನು ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 453 km ರೇಂಜ್ ನೀಡಲಿದೆ.

ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಯ ಎಲ್ಲ ರೂಪಾಂತರಗಳು ಕೇವಲ 3 ರಿಂದ 4 ವಾರ ಕಾಯುವಿಕೆ ಅವಧಿಯನ್ನು ಹೊಂದಿವೆ. ಆದರೆ, ರೆಡ್ ಡಾರ್ಕ್ ಎಡಿಷನ್ ವಿತರಣೆ ಪಡೆಯಲು ಕನಿಷ್ಠವೆಂದರೂ 10 ರಿಂದ 12 ವಾರ ಬೇಕಾಗುತ್ತದೆ. ಹ್ಯಾರಿಯರ್ ರೂ.15 ಲಕ್ಷದಿಂದ ರೂ. 24.07 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದ್ದು,14.6 - 16.35 kmpl ಮೈಲೇಜ್ ನೀಡುತ್ತದೆ. ಸಫಾರಿ ಎಸ್‌ಯುವಿ ರೂ.15.65 ಲಕ್ಷದಿಂದ ರೂ.25.02 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಟಾಟಾ ಕಂಪನಿ ಪ್ರಮುಖ ಕಾರುಗಳಲ್ಲಿ ಅಲ್ಟ್ರೋಜ್ ಕೂಡ ಒಂದಾಗಿದೆ. ಇದರ ​​ಪೆಟ್ರೋಲ್ ಮತ್ತು ಡೀಸೆಲ್ ಮ್ಯಾನುವಲ್ ರೂಪಾಂತರಗಳು 3 ರಿಂದ 4 ವಾರಗಳಲ್ಲಿ ವಿತರಣೆಯಾಗಲಿದೆ. ಆದರೆ, ಪೆಟ್ರೋಲ್ DCA ಆವೃತ್ತಿಗಾಗಿ ಕನಿಷ್ಠವೆಂದರೂ 5 ರಿಂದ 7 ವಾರ ಕಾಯಬೇಕು. ಈ ಕಾರು, ಸದ್ಯ, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ರೂ.6.60 - ರೂ.10.50 ಲಕ್ಷ ಬೆಲೆಯಲ್ಲಿ ಲಭ್ಯವಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾದ ಪಂಚ್ ಎಸ್‌ಯುವಿಯನ್ನು ಹೆಚ್ಚಿನ ಭಾರತದ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದರ ಪೆಟ್ರೋಲ್ ರೂಪಾಂತರಗಳಿಗೆ ಕನಿಷ್ಠವೆಂದರೂ 10 ರಿಂದ 12 ವಾರ ಕಾಯಬೇಕು. ಈ ಕಾರು, ರೂ.6 ಲಕ್ಷದಿಂದ ರೂ.9.52 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 86 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಟಿಯಾಗೊ ಕಂಪನಿಯ ಅತ್ಯಂತ ಕೈಗೆಟುಕುವ ಕಾರಾಗಿದೆ. ಇದರ XE CNG ರೂಪಾಂತರ 10 ರಿಂದ 12 ವಾರ ಕಾಯುವಿಕೆ ಅವಧಿಯನ್ನು ಹೊಂದಿದೆ. ಉಳಿದೆಲ್ಲ ರೂಪಾಂತರಗಳು 3 ರಿಂದ 5 ವಾರಗಳಲ್ಲಿ ವಿತರಣೆಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಟಿಯಾಗೊ ಇವಿ 8 ವಾರಗಲ್ಲಿ ಗ್ರಾಹಕರ ಕೈಸೇರಲಿದೆ. ಈ ಎಲೆಕ್ಟ್ರಿಕ್ ಕಾರು, ರೂ.8.69 ಲಕ್ಷದಿಂದ ರೂ.11.99 ಬೆಲೆಯಲ್ಲಿ ಸಿಗಲಿದ್ದು, 250 km ರೇಂಜ್ ನೀಡುತ್ತದೆ.

ಟಿಗೂರ್ ಕಾರು, ಕೇವಲ 4 ವಾರಗಳಲ್ಲಿ ವಿತರಣೆಯಾಗಲಿದೆ. ಮುಂದಿನ ಆಗಸ್ಟ್ ವೇಳೆಗೆ ಟಾಟಾ ಕಂಪನಿ ನವೀಕರಿಸಿದ ನೆಕ್ಸಾನ್ ಎಸ್‌ಯುವಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಡೆಲಿವರಿ ಅವಧಿಯನ್ನು ಗಮನಿದಾಗ ಟಾಟಾ ಕಾರುಗಳು ಎಷ್ಟರಮಟ್ಟಿಗೆ ಬೇಡಿಕೆ ಹೊಂದಿವೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಅದರಲ್ಲಿ ಕಂಪನಿಯ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

Article Published On: Tuesday, May 9, 2023, 20:47 [IST]
English summary
Tata waiting period may nexon harrier details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+