ಆಪಲ್ ಇವಿ ಕಾರಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಸೋನಿ-ಹೋಂಡಾ ಜಂಟಿ ಉದ್ಯಮದ "ಅಫೀಲಾ"

ಲಾಸ್ ವೇಗಾಸ್‌ನಲ್ಲಿ ಬುಧವಾರ ನಡೆದ ಸೋನಿಯ ಸಿಇಎಸ್ ಪ್ರಸ್ತುತಿಯಲ್ಲಿ ಹೋಂಡಾ ಮತ್ತು ಸೋನಿಯ ಜಂಟಿ ಉದ್ಯಮವು ಹೊಸ ಇವಿ ಮೂಲಮಾದರಿಯನ್ನು ಬಹಿರಂಗಪಡಿಸಿದೆ. ಈ ಮೂಲಮಾದರಿಯನ್ನು ಅಫೀಲಾ ಎಂದು ಕರೆಯಲಾಗುತ್ತಿದ್ದು, ಜಂಟಿ ಉದ್ಯಮದ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಉತ್ತರ ಅಮೆರಿಕಾದಲ್ಲಿ ಮೂರು ವರ್ಷಗಳಲ್ಲಿ (2026) ಮಾರಾಟಕ್ಕೆ ಸಿಗಲಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ಹೊಸ EV ಕೊಡುಗೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ, ಆದರೆ ಸೋನಿ ಹೋಂಡಾ ಮೊಬಿಲಿಟಿನ CEO Yasuhide Mizuno ಪ್ರಕಾರ, ಕಾರು ಮನರಂಜನೆ, AI, ವರ್ಧಿತ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿ ವೈಶಿಷ್ಟ್ಯಗಳನ್ನು ಒಳಗೊಂಡಿರುವ ವಿಶಿಷ್ಟ ಕೊಡುಗೆಯಾಗಿದೆ. ಜೊತೆಗೆ ಇದು ಸ್ವಯಂ ಚಾಲಿತವಾಗಿರುವ ಸಾಧ್ಯತೆಯಿದೆ. ಮುಂದಿನ ತಂತ್ರಜ್ಞಾನ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೇ ವಾಹನವನ್ನು ಸಜ್ಜುಗೊಳಿಸಲಾಗುತ್ತಿದ್ದು, ಮುಂಬರುವ ನಮ್ಮ ವಾಹನ ಪಕ್ಕಾ ಪರಿಸರ ಸ್ನೇಹಿಯಾಗಿರಲಿದೆ ಹೇಳಿದರು.

ಆಪಲ್ ಇವಿ ಕಾರಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಸೋನಿ-ಹೋಂಡಾ ಜಂಟಿ ಉದ್ಯಮದ ಅಫೀಲಾ

ಅಫೀಲಾ ವಿನ್ಯಾಸ ವೈಶಿಷ್ಟ್ಯ
ಕಾರಿನ ವಿನ್ಯಾಸವನ್ನು ನೋಡುವುದಾದರೆ ನಯವಾದ ಮೇಲ್ಛಾವಣಿ, ಡಿಜಿಟಲ್ ಮಿರರ್‌ಗಳು ಮತ್ತು ಏರೋಡೈನಾಮಿಕ್ 21-ಇಂಚಿನ ವೀಲ್‌ಗಳನ್ನು ಕಪ್ಪು ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ. ಒಟ್ಟಾರೆಯಾಗಿ, ಕಾರು 4,895 ಎಂಎಂ ಉದ್ದ, 1,900 ಎಂಎಂ ಅಗಲ ಮತ್ತು 1,460 ಎಂಎಂ ಎತ್ತರವನ್ನು ಹೊಂದಿದೆ. ಗಾತ್ರವು ಹ್ಯುಂಡೈ Ioniq 6 EV ಗೆ ಹೋಲುತ್ತದೆ. ಒಳಗೆ ಸೆಡಾನ್ ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿ ಪನಾರಮಿಕ್ ಡಿಜಿಟಲ್ ಸ್ಕ್ರೀನ್‌ನೊಂದಿಗೆ ಕನಿಷ್ಠ ಕ್ಯಾಬಿನ್ ಅನ್ನು ಒದಗಿಸುತ್ತದೆ.

ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ. ಸನ್‌ರೂಫ್ ಅಡಿಯಲ್ಲಿ ಐದು ಪ್ರಯಾಣಿಕರಿಗೆ ಕ್ಯಾಬಿನ್ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಪ್ರತಿ ಸೀಟಿನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಸ್ಕ್ರೀನ್‌ಗಳು ಆಕರ್ಷಣೀಯವಾಗಿ ಕಾಣುತ್ತವೆ. ಅಫೆಲಾ EV ಮೂಲಮಾದರಿಯು ಟಚ್‌ಪ್ಯಾಡ್‌ಗಳು ಮತ್ತು ಬಟನ್‌ಗಳೊಂದಿಗೆ ಯೋಕ್ಡ್ ಸ್ಟೀರಿಂಗ್ ವೀಲ್ ಸಹ ಹೊಂದಿದೆ. ಮೂಲಮಾದರಿಗಾಗಿ ಕಂಪನಿಯು ಇನ್ನೂ ಪವರ್‌ಟ್ರೇನ್ ವಿವರಗಳನ್ನು ಒದಗಿಸಿಲ್ಲ. ಆದರೆ ಮುಂಭಾಗದಲ್ಲಿ ಡಬಲ್-ವಿಶ್ಬೋನ್ ಸಸ್ಪೆನ್ಷನ್, ಹಿಂಭಾಗದಲ್ಲಿ ಮಲ್ಟಿ-ಲಿಂಕ್ ಸಸ್ಪೆನ್ಷನ್ ಜೊತೆಗೆ ಆಲ್-ವೀಲ್ ಡ್ರೈವ್ ಇರುವುದು ದೃಢೀಕರಿಸಿದೆ.

ಆಪಲ್ ಇವಿ ಕಾರಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಸೋನಿ-ಹೋಂಡಾ ಜಂಟಿ ಉದ್ಯಮದ ಅಫೀಲಾ

ಉತ್ಪಾದನಾ ಮಾದರಿಯು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ ಡಿಜಿಟಲ್ ಚಾಸಿಸ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಸೋನಿ ಹೋಂಡಾ ಮೊಬಿಲಿಟಿ ಹೇಳಿದೆ. ಇದು ಡ್ರೈವರ್‌ಗಳಿಗೆ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ, ವರ್ಧಿತ ವೈಯಕ್ತೀಕರಣ ಮತ್ತು ಇತರ ತಂತ್ರಜ್ಞಾನಗಳನ್ನು ಒದಗಿಸುತ್ತದೆ. ಅಲ್ಲದೆ, ವಾಹನದಲ್ಲಿ ಸೆಕೆಂಡಿಗೆ 800 ಟ್ರಿಲಿಯನ್ ಕಾರ್ಯಾಚರಣೆಗಳನ್ನು ಪ್ರಕ್ರಿಯೆಗೊಳಿಸಬಹುದು. 45 ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ಅದರ ಲೆವೆಲ್ 3 ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್‌ಗಳಿಗೆ ಶಕ್ತಿ ತುಂಬಲು ಅಳವಡಿಸಲಾಗಿದೆ.

90ರ ದಶಕದ ಮಕ್ಕಳು ಇಷ್ಟಪಡುವ ಪ್ಲೇ ಸ್ಟೇಷನ್‌ನೊಂದಿಗೆ ಕಾರು ಬರಲಿದೆ ಎಂಬ ಸುದ್ದಿ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಸೋನಿ ಹೋಂಡಾ ಮೊಬಿಲಿಟಿ ಹೇಳುವಂತೆ ಇದು ನೈಜ ಮತ್ತು ವರ್ಚುವಲ್ ಪ್ರಪಂಚಗಳನ್ನು ಮನಬಂದಂತೆ ಸಂಯೋಜಿಸುತ್ತದೆ. ಮೆಟಾವರ್ಸ್‌ನಂತಹ ಡಿಜಿಟಲ್ ಆವಿಷ್ಕಾರಗಳ ಮೂಲಕ ಹೊಸ ಮನರಂಜನೆಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ. ಅಫೆಲಾ ಮೂಲಮಾದರಿಯ ನಿಖರವಾದ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದನ್ನು ಬಿಡುಗಡೆ ಸನಿಹವಾದಾಗ ಬಹಿರಂಗ ಪಡಿಸಲು ಯೋಜಿಸಲಾಗಿದೆ.

ಆದರೆ ಸೋನಿ ಹೋಂಡಾ ಮೊಬಿಲಿಟಿ 2025 ರ ಮೊದಲಾರ್ಧದಲ್ಲಿ ಪ್ರೀ-ಬುಕಿಂಗ್ ಲಭ್ಯವಿರುತ್ತದೆ ಎಂದು ದೃಢಪಡಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿತರಣೆಗಳು 2026 ರ ಆರಂಭದಲ್ಲಿ ಪ್ರಾರಂಭವಾಗಬಹುದು. ಸೋನಿ ಹೋಂಡಾ ಮೊಬಿಲಿಟಿ ಈ ಕಾರನ್ನು 2026 ರಿಂದ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇವಿಗಳ ಆನ್‌ಲೈನ್ ಮಾರಾಟಕ್ಕೆ ಅವರು ಮೊದಲ ಆದ್ಯತೆ ನೀಡುತ್ತಾರೆ. ಸದ್ಯ ಈ ಕಾರಿನ ಮೇಲೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊದಲು ಪರಿಚಯಿಸಲಾಗುವುದು.

ಈ ಕಾರುಗಳನ್ನು ಯುಎಸ್‌ಗೆ ಮತ್ತು ನಂತರ ಹೋಂಡಾದ ತವರು ದೇಶವಾದ ಜಪಾನ್ ಮತ್ತು ಇತರ ದೇಶಗಳಿಗೆ ರಫ್ತು ಮಾಡಲು ನಿರ್ಧರಿಸಲಾಗಿದೆ. ಆದರೆ ಈ ಕಾರು ಭಾರತಕ್ಕೆ ಬರುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಏಕೆಂದರೆ ಇದರ ಬೆಲೆಯು ಪ್ರಸ್ತುತ ಇರುವ ಭಾರತದಲ್ಲಿನ ಇತರ ಇವಿಗಳಿಗೆ ಹೋಲಿಸಿಕೊಂಡಿರೆ ಅಧಿಕವಾಗಿರಲಿದೆ. ಹಾಗಾಗಿ ಬಿಡುಗಡೆ ವೇಳೆಗೆ ದೇಶದಲ್ಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ವಾಹನವನ್ನು ಪರಿಚಯಿಸಲಾಗುವುದು.

Article Published On: Friday, January 6, 2023, 14:19 [IST]
English summary
Tech giant sony honda joint ventures new ev car afeela unveiled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+