ಭೀಕರ ಅಪಘಾತ ಡ್ಯಾಷ್ ಕ್ಯಾಮ್‌ನಲ್ಲಿ ಸೆರೆ... ನಿರ್ಮಾಣ ಗುಣಮಟ್ಟದಿಂದ ಬದುಕುಳಿದ ಚಾಲಕ
ಟಾಟಾ ಟಿಯಾಗೋ ಕಾರಿನ ಭೀಕರ ಅಪಘಾತವೊಂದು ಡ್ಯಾಷ್ ಕ್ಯಾಮ್‌ನಲ್ಲಿ ಸೆರೆಯಾಗಿದೆ. ಅತಿ ವೇಗದಲ್ಲಿ ತನ್ನ ಸುತ್ತಮುತ್ತಲಿನ ವಾಹನಗಳನ್ನು ಓವರ್ ಟೇಕ್ ಮಾಡುತ್ತಾ ಬಂದ ಟಾಟಾ ಟಿಯಾಗೋ ಜಂಕ್ಷನ್‌ವೊಂದರ ಬಳಿ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ಸಂಪೂರ್ಣ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ರೆಕಾರ್ಡ್ ಆಗಿರುವುದು ಮತ್ತೊಂದು ವಾಹನದಲ್ಲಿನ ಡ್ಯಾಷ್ ಕ್ಯಾಮ್‌ನಲ್ಲಿ, ಟಿಯೋಗೋ ಚಾಲಕ ಬೇಕಂತಲೇ ಓವರ್ ಟೇಕ್ ಮಾಡಿದ್ದಾನಾ ಇಲ್ಲವೇ ವಾಹನದಲ್ಲಿ ಇತರೆ ಸಮಸ್ಯೆಗಳಿಂದ ಹೀಗಾಗಿದೆಯಾ ಅಥವಾ ನಿಯಂತ್ರಣ ತಪ್ಪಿ ಘಟನೆ ನಡೆದಿದೆಯೇ ಎಂಬುದರ ಕುರಿತು ತಿಳಿದುಬಂದಿಲ್ಲ. ವಿಡಿಯೋದಲ್ಲಿನ ದೃಷ್ಯಗಳನ್ನು ನೋಡಿ ಹೇಳುವುದಾದರೆ, ಟಿಯಾಗೊ ತನ್ನ ಮುಂದಿರುವ ವಾಹನವನ್ನು ಹಿಂದಿಕ್ಕಲು ಅತಿ ವೇಗದ ಎಡ ತಿರುವು ತೆಗೆದುಕೊಂಡ ನಂತರ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ಬಲಕ್ಕೆ ತಿರುಗುತ್ತದೆ.

ಇದಾದ ಬಳಿಕ ಟಿಯಾಗೊ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡು ಕಾಂಕ್ರೀಟ್ ಡಿವೈಡರ್‌ಗೆ ಹೆಚ್ಚಿನ ವೇಗದಲ್ಲಿ ಹೊಡೆಯುವುದನ್ನು ಡ್ಯಾಶ್‌ಬೋರ್ಡ್ ಕ್ಯಾಮೆರಾ ಫೂಟೇಜ್ ತೋರಿಸುತ್ತದೆ. ಡಿಕ್ಕಿಯ ಪರಿಣಾಮ ಟಿಯಾಗೊದ ಮುಂಭಾಗವು ಸಂಪೂರ್ಣವಾಗಿ ನಾಶವಾಗಿದ್ದು, ಹೊಡೆತಕ್ಕೆ ವಾಹನವು ಹಿಂದಕ್ಕೆ ಬೌನ್ಸ್ ಆಗಿದೆ. ಕಾರಿನಲ್ಲಿ ಯಾರಿಗೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಅತಿ ವೇಗವು ನಿಯಂತ್ರಣ ಕಳೆದುಕೊಂಡು ಹೇಗೆ ಹಾನಿಯುಂಟು ಮಾಡುತ್ತದೆ ಎಂಬುದನ್ನು ಈ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.
ಟಾಟಾ ಟಿಯಾಗೊ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಅನ್ನು ಒದಗಿಸುವುದಿಲ್ಲ. ಒಂದು ವೇಳೆ ESP ಇದ್ದಿದ್ದರೆ ಕಾರು ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೇಳಬಹುದು. ಆದರೆ, ನಗರ ವ್ಯಾಪ್ತಿಯಲ್ಲಿ ಈ ರೀತಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಆಗುವುದು ಖಚಿತ. ಈ ರೀತಿಯ ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಗಳನ್ನು ಅನುಸರಿಸಬೇಕು. ರಸ್ತೆಯ ವಿನ್ಯಾಸವನ್ನು ಅಧ್ಯಯನ ಮಾಡಿದ ನಂತರವೇ ನಿರ್ದಿಷ್ಟ ರಸ್ತೆಗಳಿಗೆ ವೇಗ ಮಿತಿಗಳನ್ನು ನಿಗದಿಪಡಿಸಲಾಗಿರುತ್ತದೆ.

ಅತ್ಯಂತ ಸುರಕ್ಷಿತ ಕಾರು:
ಟಾಟಾ ಕಾರುಗಳ ಅನೇಕ ಮಾಲೀಕರು ಈ ಹಿಂದೆ ಅಪಘಾತವಾದಾಗ ಯಾವುದೇ ಹಾನಿಯಿಲ್ಲದೇ ಎದ್ದುಬಂದು ವಾಹನಗಳ ನಿರ್ಮಾಣ ಗುಣಮಟ್ಟಕ್ಕೆ ಮೆಚ್ಚಿ ಧನ್ಯವಾದ ಹೇಳಿದ್ದಾರೆ. ಅನೇಕ ಜನರು ತಾವು ಅನುಭವಿಸಿದ ಅಪಘಾತಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡುತ್ತಾರೆ. ಟಾಟಾ ಮೋಟಾರ್ಸ್ ಪ್ರಸ್ತುತ 4 ಸ್ಟಾರ್ ಮತ್ತು 5 ಸ್ಟಾರ್ ಸುರಕ್ಷತೆಯ ರೇಟಿಂಗ್‌ಗಳೊಂದಿಗೆ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ನೀಡುತ್ತಿದೆ.
ಗ್ಲೋಬಲ್ ಎನ್‌ಸಿಎಪಿಯ ರೇಟಿಂಗ್‌ಗಳ ಪ್ರಕಾರ ಟಿಯಾಗೊ ಈ ವಿಭಾಗದಲ್ಲಿ ಅತ್ಯಂತ ಸುರಕ್ಷಿತ ಕಾರೆಂದು ಖ್ಯಾತಿ ಪಡೆದಿದೆ. ಇದು ನಾಲ್ಕು ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಆದರೂ ಫುಟ್‌ವೆಲ್ ಮತ್ತು ವಾಹನದ ರಚನೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ. ಉಳಿದಂತೆ ಟಾಟಾ ಮೋಟಾರ್ಸ್ ಭಾರತದಲ್ಲಿ ಅತ್ಯುತ್ತಮ ಸುರಕ್ಷತ ರೇಟೆಡ್ ಮಾಡೆಲ್ ಲೈನ್- ಅಪ್‌ಗಳನ್ನು ಹೊಂದಿದೆ. ಟಾಟಾ ಟಿಯಾಗೊ ಮತ್ತು ಟಿಗೊರ್ ನಾಲ್ಕು- ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಪ್ರಮಾಣಿತವಾಗಿ ಹೊಂದಿವೆ.
ಟಾಟಾ ಆಲ್ಟ್ರೋಜ್ ಮತ್ತು ಟಾಟಾ ನೆಕ್ಸಾನ್ ಸಂಪೂರ್ಣ 5 ಸ್ಟಾರ್ ಸುರಕ್ಷತೆ ರೇಟಿಂಗ್‌ಗಳನ್ನು ಹೊಂದಿವೆ. ಹ್ಯಾರಿಯರ್‌ನಂತಹ ಇತರ ವಾಹನಗಳನ್ನು ಸುರಕ್ಷತಾ ರೇಟಿಂಗ್ ಏಜೆನ್ಸಿಯು ಇನ್ನೂ ಪರೀಕ್ಷಿಸಬೇಕಾಗಿದೆ. ಆದರೆ ಈಗಾಗಲೇ ಹ್ಯಾರಿಯರ್ ಕೆಲ ಅಪಘಾತಗಳಿಗೆ ಸಿಲುಕಿದ್ದು, ಉತ್ತಮ ಗುಣಮಟ್ಟ ಹೊಂದಿದೆ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ಸರ್ಕಾರವು ಪ್ರಸ್ತಾಪಿಸಿದಂತೆ ಕ್ರ್ಯಾಶ್ ಟೆಸ್ಟ್ ಕಡ್ಡಾಯವಾಗುತ್ತದೆ. ಪ್ರಸ್ತಾವನೆಯು ಕಾನೂನಾದರೆ ಸುರಕ್ಷತಾ ಸ್ಟಾರ್ ರೇಟಿಂಗ್ ಪಡೆಯಲು ಎಲ್ಲಾ ತಯಾರಕರು ಕಾರುಗಳನ್ನು ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸಬೇಕಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications