Tesla: ಭಾರತದಲ್ಲಿ ಟೆಸ್ಲಾ ಕಾರುಗಳ ಬೆಲೆಯೆಷ್ಟು ಗೊತ್ತಾ?; ಪ್ರಮುಖ ಕಾರು ತಯಾರಿಕಾ ಕಂಪನಿಗಳು ಗಡಗಡ
ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ಭಾರತಕ್ಕೆ ಕಾಲಿಡುವುದು ಈಗಾಗಲೇ ಖಚಿತವಾಗಿದೆ. ಇನ್ನೇನು ಕೆಲವೇ ತಿಂಗಳುಗಳ ಸಮಯದಲ್ಲಿ ಟೆಸ್ಲಾ ಭಾರತದಲ್ಲಿ ತನ್ನ ಕಾರ್ಯವನ್ನು ಆರಂಭಿಸಲಿದೆ ಎಂಬುದು ಸ್ವತಃ ಟೆಸ್ಲಾ ಸಂಸ್ಥಾಪಕ, ಎಲಾನ್ ಮಸ್ಕ್ ಇತ್ತೀಚೆಗಷ್ಟೇ ಅಮೇರಿಕಾದ ಮಾಧ್ಯಮಗಳಿಗೆ ತಮ್ಮ ಹೇಳಿಕೆಯನ್ನು ನೀಡಿದ್ದರು.
ಪ್ರಧಾನಿ ಮೋದಿ ಕೆಲವು ವಾರಗಳ ಹಿಂದೆ ಅಮೇರಿಕಾದ ಪ್ರವಾಸದಲ್ಲಿದ್ದಾಗ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಭಾರತದ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಭಾರತಕ್ಕೆ ಟೆಸ್ಲಾವನ್ನು ತರುವ ಯೋಜನೆ ಇದೆಯೆಂದು, ಇದಕ್ಕೆ ನಿಮ್ಮ ಸಹಕಾರ ಅಗತ್ಯ ಹಾಗಾಗಿ ನಿಮ್ಮಿಂದ ಎಲ್ಲಾ ಬೆಂಬಲವನ್ನೂ ಎದುರು ನೋಡುತ್ತಿದ್ದೇವೆ ಎಂದು ನರೇಂದ್ರ ಮೋದಿಯವರಿಗೆ ತಿಳಿಸಿದ್ದರು.

ಇದೀಗ ಮಾಹಿತಿಗಳ ಪ್ರಕಾರ ಕೆಲವೇ ತಿಂಗಳುಗಳಲ್ಲಿ ಭಾರತಕ್ಕೆ ಟೆಸ್ಲಾ ಬರಲಿದ್ದು ಈ ಕಾರುಗಳ ಬೆಲೆಯ ಕುರಿತಾಗಿ ಮಾಹಿತಿಗಳು ಹೊರ ಬಿದ್ದಿವೆ. ವರದಿಗಳ ಪ್ರಕಾರ ಟೆಸ್ಲಾ (Tesla) ಕಾರುಗಳು ಭಾರತದಲ್ಲಿ ಸುಮಾರು ಇಪ್ಪತ್ತು ಲಕ್ಷದ ಆಸುಪಾಸಿನಿಂದ ಬೆಲೆಗಳು ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಾರತೀಯ ಕಾರು ಪ್ರೇಮಿಗಳಲ್ಲಿ ಟೆಸ್ಲಾ ಕಾರುಗಳ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದೆ.
ರಾಯ್‌ಟರ್‌ನ ವರದಿಯಲ್ಲಿ ಈ ಮಾಹಿತಿ ಹೊರ ಬಿದ್ದಿದ್ದು, ಈ ಕುರಿತು ಮಾತನಾಡಲು ಟೆಸ್ಲಾ ಪ್ರತಿನಿಧಿಗಳು ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಲಿದೆ ಎಂದು ಸಹ ವರದಿಯಲ್ಲಿ ತಿಳಿದು ಬಂದಿದೆ. ಇದರ ಜೊತೆಗೆ ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕವನ್ನು ಸಹ ಆರಂಭಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರಿನ ಉತ್ಪಾದನಾ ಘಟಕವನ್ನು ಆರಂಭಿಸುವುದರಿಂದ ಹಲವು ಗುಣಗಳಿವೆ.

ಇದರಲ್ಲಿ ಟೆಸ್ಲಾಗೆ ಇರುವ ಗುಣವೆಂದರೆ ಅದು ಅಧಿಕ ತೆರಿಗೆಗಳಿಂದ ವಿನಾಯಿತಿ ಹೊಂದುತ್ತದೆ ಎಂಬುದು. ಹೌದು, ಭಾರತಕ್ಕೆ ಟೆಸ್ಲಾ ಕಾರು ವಿದೇಶದಿಂದ ರಫ್ತು ಮಾಡುವುದಾದರೆ ಭಾರತ ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆಯನ್ನು ನೀಡಬೇಕಾಗುತ್ತದೆ. ಆದರೆ ಇಲ್ಲೇ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಿದರೆ ಅದರಿಂದ ಪಾರಾಗಬಹುದು. ಇನ್ನು ಇದರಿಂದ ಭಾರತೀಯರಿಗೆ ಆಗುವ ಉಪಯೋಗಗಳನ್ನು ನೊಡೋಣ.
ಟೆಸ್ಲಾ ತನ್ನ ಕಾರು ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಿದಾಗ ಭಾರತೀಯರಿಗೆ ಆಗುವ ಪ್ರಮುಖ ಉಪಯೋಗ ಇದರ ಬೆಲೆ. ಹೌದು, ಅಗ್ಗದ ಬೆಲೆಗೆ ಟೆಸ್ಲಾ ಕಾರುಗಳನ್ನು ಭಾರತೀಯರು ಪಡೆಯಬಹುದಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಟೆಸ್ಲಾವು ಚೀನಾದಲ್ಲಿ ತನ್ನ ಸೆಡಾನ್ 3 ಕಾರುಗಳನ್ನು ಸುಮಾರು 26 ಲಕ್ಷ ರೂಗಳಿಗೆ ಲಾಂಚ್ ಮಾಡಿದ್ದು, ಸಹಜವಾಗಿಯೇ ಭಾರತದಲ್ಲಿ ಈ ಕಾರುಗಳು ಸುಮಾರು 20 ಲಕ್ಷದಿಂದ ಆರಂಭವಾಗಲಿದೆ ಎಂದರೆ ಆಶ್ಚರ್ಯ ಆಗಲಾರದು.
ಇನ್ನು ಟೆಸ್ಲಾವು ಭಾರತದಲ್ಲಿ ತನ್ನ ಕಾರುಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಭಾರತೀಯ ಮಾರುಕಟ್ಟೆಗೆ ಬೇಕಾದ ಕಾರುಗಳನ್ನು ನಿರ್ಮಿಸಿ ಗ್ರಾಹಕರಿಗೆ ತಲುಪಿಸುವುದು ಮಾತ್ರವಲ್ಲದೇ ಇಲ್ಲಿಂದ ಕಾರುಗಳನ್ನು ವಿದೇಶಕ್ಕೂ ರಫ್ತು ಮಾಡುವ ಯೋಜನೆಯಲ್ಲಿದೆ. ಇದೊಂದು ಹಬ್ ರೀತಿಯಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ ಮತ್ತುಇದಕ್ಕಾಗಿ ಬೇಕಾದ ಎಲ್ಲಾ ಪೂರ್ವ ಸಿದ್ದತೆಯನ್ನು ಟೆಸ್ಲಾ ಕೈಗೊಂಡಿದೆಯೂ ಸಹ.
ಸದ್ಯ, ಬೃಹತ್ ಕಾರ್ಖಾನೆ ಸ್ಥಾಪಿಸಲು ಹೂಡಿಕೆ ಮಾಡುವ ಸಂಬಂಧ ಟೆಸ್ಲಾ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ. ಟೆಸ್ಲಾ ಬಂಡವಾಳ ಹಾಕುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರತಿಯೊಂದು ರಾಜ್ಯವು ಕಂಪನಿಯನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಅಂತಿಮ ತೆರೆ ಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








