ಭಾರತದಲ್ಲಿ ಪ್ರಮುಖ ಕಂಪನಿಗಳ ಮೂರು CNG ಕಾರುಗಳು ಶೀಘ್ರ ಬಿಡುಗಡೆ.. ಹೇಗಿವೆ ಗೊತ್ತಾ?

ಪೆಟ್ರೋಲ್, ಡಿಸೇಲ್ ಬೆಲೆ ದುಬಾರಿಯಾಗಿರುವುದರಿಂದ ಬಹುತೇಕರು ಸಿಎನ್‌ಜಿ ಚಾಲಿತ ಹೊಸ ಕಾರುಗಳನ್ನು ಖರೀಸಲು ಇಷ್ಟಪಡುತ್ತಿದ್ದಾರೆ. ಈ ಕಾರುಗಳು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಹಲವು ವಾಹನ ತಯಾರಕ ಕಂಪನಿಗಳು ವಿವಿಧ ಸಿಎನ್‌ಜಿ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತವೆ.

ದೆಹಲಿ ನಡೆದ ಆಟೋ ಎಕ್ಸ್‌ಪೋದಲ್ಲಿ, ಟಾಟಾ ಮೋಟಾರ್ಸ್, ಆಲ್ಟ್ರೋಜ್ ಮತ್ತು ಪಂಚ್ ಸಿಎನ್‌ಜಿ ಆವೃತ್ತಿಯನ್ನು ಅನಾವರಣಗೊಳಿಸಿತ್ತು. ಮಾರುತಿ ಸುಜುಕಿ ತನ್ನ ಡುಯೆಲ್-ಫ್ಯುಯೆಲ್ ಸಾಮರ್ಥ್ಯದ ಬ್ರೆಜ್ಜಾ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪ್ರದರ್ಶಿಸಿತ್ತು. ಟಾಟಾ ಪಂಚ್ ಸಿಎನ್‌ಜಿ ಮತ್ತು ಬ್ರೆಜ್ಜಾ ಸಿಎನ್‌ಜಿ ಆವೃತ್ತಿಗಳು ಮುಂಬರುವ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಸಿಎನ್‌ಜಿ ಆವೃತ್ತಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕೂಡ ಶೀಘ್ರದಲ್ಲೇ ದೇಶದ ಶೋರೂಂಗಳನ್ನು ತಲುಪಲಿದೆ.

ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ (Brezza CNG):
ಮಾರುತಿ ಸುಜುಕಿ ಕಂಪನಿ ಇತ್ತೀಚೆಗೆ 'ಗ್ರಾಂಡ್ ವಿಟಾರಾ' ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಮುಂಬರುವ ದಿನಗಳಲ್ಲಿ ಬ್ರೆಝಾ ಸಿಎನ್‌ಜಿ ಆವೃತ್ತಿಯನ್ನು ಭಾರತದ ಗ್ರಾಹಕರಿಗೆ ಖರೀದಿಗೆ ನೀಡಬಹುದು ಇದರ ಬೆಲೆ ಪೆಟ್ರೋಲ್ ಆವೃತ್ತಿಗಿಂತ ಸುಮಾರು 70,000 ದುಬಾರಿಯಾಗಿರಬಹುದು. ನೂತನ ಬ್ರೆಝಾ ಸಿಎನ್‌ಜಿ LXi, VXi, ZXi ಮತ್ತು ZXi+ ಎಂಬ ನಾಲ್ಕು ರೂಪಾಂತರಗಳಲ್ಲಿ ಸಿಗಲಿದೆ.

ಇದು 1.5-ಲೀಟರ್, 4 ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಸುಮಾರು 87 hp ಗರಿಷ್ಠ ಪವರ್ ಉತ್ಪಾದಿಸಲಿದೆ. ಈ ಬ್ರೆಝಾ, ಡುಯೆಲ್-ಫ್ಯುಯೆಲ್ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಎಸ್‌ಯುವಿ ಆಗಿರುವುದರಿಂದ ಪ್ರತಿ ಕೆಜಿ ಸಿಎನ್‌ಜಿ ಇಂಧನ ದಹಿಸಿ ಸುಮಾರು 28 ಕಿಮೀ ಮೈಲೇಜ್ ನೀಡಲಿದೆ. ಇದರ ಟಾಪ್-ಎಂಡ್ ರೂಪಾಂತರವು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಸಿಎನ್‌ಜಿ (Toyota Urban Cruiser Hybrid CNG):
ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ರೂ.10.48 ಲಕ್ಷ ಮತ್ತು ರೂ.19 ಲಕ್ಷ (ಎಕ್ಸ್ ಶೋರೂಂ) ಇದೆ. ಮುಂಬರುವ ಸಿಎನ್‌ಜಿ ರೂಪಾಂತರವು ಸುಮಾರು ರೂ.75,000 ದುಬಾರಿಯಾಗಿರಬಹುದು. ಈ ಎಸ್‌ಯುವಿಗಾಗಿ ಈಗಾಗಲೇ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ ಆರಂಭವಾಗಿದ್ದು, ಅಧಿಕೃತ ಬೆಲೆಯನ್ನು ಕಂಪನಿಯು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಸಿಎನ್‌ಜಿ ಆವೃತ್ತಿ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮಾರುತಿ ಗ್ರಾಂಡ್ ವಿಟಾರಾ ಸಿಎನ್‌ಜಿಗೆ ಹೋಲುತ್ತದೆ. ಭಾರತದಲ್ಲಿ ಈ ಕಾರು, ಸಿಎನ್‌ಜಿ ಪವರ್‌ಟ್ರೇನ್ ಹೊಂದಿರುವ ಎರಡನೇ ಟೊಯೊಟಾ ಮಾಡೆಲ್ ಆಗಲಿದೆ. ಎರ್ಟಿಗಾ, XL6 ಮತ್ತು ಗ್ರಾಂಡ್ ವಿಟಾರಾ ಸಿಎನ್‌ಜಿ ಆವೃತ್ತಿಗಳಲ್ಲಿ ಬಳಸಲಾದ ಅದೇ 1.5-ಲೀಟರ್ 4 - ಸಿಲಿಂಡರ್ K15C ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಸುಮಾರು 87 hp ಗರಿಷ್ಠ ಪವರ್ ಮತ್ತು 98.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಪಂಚ್ ಸಿಎನ್‌ಜಿ (Tata Punch CNG):
ಟಾಟಾ ಮೋಟಾರ್ಸ್ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಪಂಚ್ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಆ ಮೇಲೆ ಇದಕ್ಕೆ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಕಾರುಗಳೇ ಇಲ್ಲ ಎಂದು ಹೇಳಬಹುದು. ಹೊಸ ಪಂಚ್ ಸಿಎನ್‌ಜಿ ಕಾರಿನ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್, 3-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 86 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸಿಎನ್‌ಜಿ ಮೋಡ್‌ನಲ್ಲಿ 72 bhp ಪವರ್ ಮತ್ತು 95 Nm ಪಿಕ್ ಟಾರ್ಕ್‌ ಉತ್ಪಾದಿಸಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇದು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಏರ್‌ಬ್ಯಾಗ್‌ಗಳು, ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Most Read Articles

Kannada
English summary
Three cng cars from leading companies in India launched soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X