ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆಗೆ ಇಷ್ಟು ವರ್ಷ ಕಾಯಲೇಬೇಕು: ಹಾಗಾದ್ರೆ ಬೇರೆ ಕಾರುಗಳು..

ಭಾರತದಲ್ಲಿ ಟೊಯೊಟಾದ ಇನೋವಾ ಹೈಕ್ರಾಸ್ ಕಾರುಗಳು ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು, ಅವುಗಳಿಗೆ ಸರಿ ಸಾಟಿಯೇ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಆದರೆ, ನೀವು ಈ ಕಾರನ್ನು ಬುಕ್ ಮಾಡಿದರೆ, ವಿತರಣೆ ಪಡೆಯಲು ಕನಿಷ್ಠವೆಂದರೂ 1.5 ವರ್ಷಕ್ಕಿಂತ ಹೆಚ್ಚಿನ ಸಮಯ ಕಾಯಲೇಬೇಕು. ಅಷ್ಟರಮಟ್ಟಿಗೆ ಬೇಡಿಕೆಯನ್ನು ಪಡೆದುಕೊಂಡಿದೆ.

ಫ್ರಂಟ್ ವೀಲ್ಸ್ ಡ್ರೈವ್ (FWD) ಆಯ್ಕೆಯೊಂದಿರುವ ಈ ಇನೋವಾ ಹೈಕ್ರಾಸ್ ಎಂಪಿವಿ, ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 2.0 - ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 - ಲೀಟರ್ TNGA ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಇದು 21 kmpl ಇಂಧನ ದಕ್ಷತೆಯನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಲ್ಲದೆ, ಸುರಕ್ಷತಾ ದೃಷ್ಟಿಯಿಂದ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ)ಯನ್ನು ಪಡೆದಿದ್ದು, ಸಾಕಷ್ಟು ಹೊಸ ಖರೀದಿದಾರರನ್ನು ಸೆಳೆಯುತ್ತದೆ.

ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆಗೆ ಇಷ್ಟು ವರ್ಷ ಕಾಯಲೇಬೇಕು: ಹಾಗಾದ್ರೆ ಬೇರೆ ಕಾರುಗಳು..

ಟೊಯೊಟಾ ಇನೋವಾ ಹೈಕ್ರಾಸ್ ಕೆಲವು ರೂಪಾಂತರಗಳನ್ನು ವಿತರಣೆ ಪಡೆಯಲು ಗ್ರಾಹಕರು ಕನಿಷ್ಠ 18 ತಿಂಗಳು ಕಾಯಬೇಕು. ಎರಡನೇ ಸ್ಥಾನದಲ್ಲಿ ಯುವಕರ ಹಾಟ್ ಫೆವರೇಟ್ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ ಇದ್ದು, ಬುಕ್ ಮಾಡಿ, ಬರೋಬ್ಬರಿ 17 ತಿಂಗಳ ಬಳಿಕ ನಿಮಗೆ ಸಿಗಲಿದೆ. ಇತ್ತೀಚೆಗೆ, ಥಾರ್ RWD (ರೇರ್ ವೀಲ್ ಡ್ರೈವ್) ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಅತ್ಯಧಿಕ ಬೇಡಿಕೆಯನ್ನು ಪಡೆದುಕೊಂಡಿದ್ದು, ರೂ.10.99 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಎಂಜಿನ್, ಪ್ಲಾಟ್‌ಫಾರ್ಮ್ ಹಾಗೂ ವೈಶಿಷ್ಟ್ಯಗಳು ಬಹುತೇಕ ಹೋಲಿಕೆಯಾಗುತ್ತವೆ. ಆದರೆ, ಇವುಗಳ ವಿತರಣೆಯ ಕಾಯುವಿಕೆ ಅವಧಿ ಬೇರೆ - ಬೇರೆಯಾಗಿದ್ದು, ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ನಿಮಗೆ ಸಿಗಲು 15 ತಿಂಗಳಾದರೂ ಬೇಕಾಗಲಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾತ್ರ ಕೇವಲ 7 ತಿಂಗಳಲ್ಲೇ ವಿತರಣೆಯಾಗಲಿದೆ. ಇವರೆಡು ಎಸ್‌ಯುವಿಗಳನ್ನು ನಮ್ಮದೇ ರಾಜ್ಯದ ಬಿಡದಿಯ ಟೊಯೊಟಾ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.

ಇಷ್ಟೇಅಲ್ಲದೆ, ಮಹೀಂದ್ರಾದ ಬಹುನಿರೀಕ್ಷಿತ ಸ್ಕಾರ್ಪಿಯೊ ಎನ್ ಎಸ್‌ಯುವಿಯನ್ನು ವಿತರಣೆ ಪಡೆಯಲು ಕನಿಷ್ಠವೆಂದರೂ
15 ತಿಂಗಳು ಕಾಯಬೇಕು. ಅಲ್ಲದೆ, ಹೆಚ್ಚಿನ ಬೇಡಿಕೆ ಹೊಂದಿರುವ XUV700 ಬುಕ್ ಮಾಡಿದರೆ, 11 ತಿಂಗಳ ಬಳಿಕವಷ್ಟೇ ನಿಮ್ಮ ಮನೆ ಸೇರಲಿದೆ. ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಕಿಯಾ, ಒಂದು ವರ್ಷದ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಕ್ಯಾರೆನ್ಸ್ ಎಸ್‌ಯುವಿಯನ್ನು ಲಾಂಚ್ ಮಾಡಿತ್ತು. ಇದು ಭಾರೀ ಬೇಡಿಕೆಯನ್ನು ಪಡೆದುಕೊಂಡಿದ್ದು, ಇದರ ಕೆಲವು ರೂಪಾಂತರಗಳ ವಿತರಣೆ ಪಡೆಯಲು 11 ತಿಂಗಳು ಕಾಯಬೇಕು.

ಮಾರುತಿ ಸುಜುಕಿಯ ಮತ್ತೊಂದು ಬೇಡಿಕೆಯಲ್ಲಿರುವ ಬ್ರೆಜ್ಜಾ ಎಸ್‌ಯುವಿಯು ಗರಿಷ್ಠ ಕಾಯುವಿಕೆಯ ಸಮಯವನ್ನು ಒಳಗೊಂಡಿದೆ. ಇದರ ಕೆಲವು ರೂಪಾಂತರಗಳಿಗಾಗಿ ಗ್ರಾಹಕರು 9 ತಿಂಗಳು ಕಾಯಲೇಬೇಕು. ಇದರ ಪ್ರತಿಸ್ಪರ್ಧಿಯಾಗಿರುವ ಕಿಯಾ ಸೊನೆಟ್ ಕೂಡ ಇದರಷ್ಟೇ ಅಂದರೆ, ಬರೋಬ್ಬರಿ 9 ತಿಂಗಳು ಕಾಯುವಿಕೆಯ ಅವಧಿಯನ್ನು ಒಳಗೊಂಡಿದ್ದು, ಹ್ಯುಂಡೈ ಕ್ರೆಟಾ ಮಿಡ್ ಸೈಜ್ ಎಸ್‌ಯುವಿಯನ್ನು ವಿತರಣೆ ಪಡೆಯಲು ಕನಿಷ್ಠವೆಂದರೂ ಎಂಟು ತಿಂಗಳು ಹೊಸ ಖರೀದಿದಾರರು ಕಾಯಲೇಬೇಕು. ಅಷ್ಟರಮಟ್ಟಿಗೆ ಇವು ಬೇಡಿಕೆ ಪಡೆದುಕೊಂಡಿವೆ.

ಬಹುಬೇಡಿಕೆಯನ್ನು ಪಡೆದುಕೊಂಡಿರುವ ಇನೋವಾ ಹೈಕ್ರಾಸ್ ಬೆಲೆ ಹಾಗೂ ಒಂದಷ್ಟು ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ರೂ.18.30 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 8 ರೂಪಾಂತರ ಹಾಗೂ 7 ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ದೊಡ್ಡದಾದ 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಕರ್ಷಕ ಸನ್‌ರೂಫ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, February 14, 2023, 10:56 [IST]
English summary
Top 10 cars with highest waiting period details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+