Tata - Maruti Suzuki: ಕಡಿಮೆ ಬೆಲೆ ಕಾರು ಮಾರಾಟ.. ಜಿದ್ದಜಿದ್ದಿಗೆ ಬಿದ್ದಿವೆ ಟಾಟಾ, ಮಾರುತಿ ಸುಜುಕಿ ಕಂಪನಿಗಳು

ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದ ಜನರು ವಾಸಿಸುತ್ತಾರೆ. ಅವರಿಗೆ ಜೀವನದಲ್ಲಿ ಒಮ್ಮೆಯಾದರೂ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಬಹುತೇಕರು ಟಾಟಾ, ಮಾರುತಿಯ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಗಳನ್ನು ಖರೀದಿಸುತ್ತಾರೆ. ಸದ್ಯ, ಜುಲೈ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಯಾವ ಕಂಪನಿ ಎಷ್ಟು ಹ್ಯಾಚ್‌ಬ್ಯಾಕ್ ಮಾರಿದೆ. ಇಲ್ಲಿದೆ ಮಾಹಿತಿ.

ಮೊದಲಿಗೆ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಬಗ್ಗೆ ಮಾತನಾಡೋಣ. ಕಳೆದ ತಿಂಗಳು 17,896 ಯುನಿಟ್ ಕಾರುಗಳು ಮಾರಾಟವಾಗಿವೆ. ಹೋದ ವರ್ಷದ ಇದೇ ಅವಧಿಗೆ (17,539 ಯುನಿಟ್) ಹೋಲಿಸಿದರೆ, ಕಂಪನಿಯು ಸ್ವಿಫ್ಟ್ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 2% ಪ್ರಗತಿ ಸಾಧಿಸಿದೆ. ಈ ಕಾರು, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಆಯ್ಕೆಯಲ್ಲಿ ಸಿಗುತ್ತದೆ.

Tata - Maruti Suzuki: ಕಡಿಮೆ ಬೆಲೆ ಕಾರು ಮಾರಾಟ.. ಜಿದ್ದಜಿದ್ದಿಗೆ ಬಿದ್ದಿವೆ ಟಾಟಾ, ಮಾರುತಿ ಸುಜುಕಿ ಕಂಪನಿಗಳು

ಹಬ್ಬದ ಸೀಸನ್ ಇಲ್ಲದ ಕಾರಣ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಮಾರಾಟದಲ್ಲಿ ಮಾರುತಿ ಸುಜುಕಿ ನಷ್ಟ ಅನುಭವಿದೆ. ಜುಲೈನಲ್ಲಿ ಕಂಪನಿಯು 16,725 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2022ರ ಅದೇ ತಿಂಗಳಿಗೆ (17,960 ಯುನಿಟ್) ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ -7% ಹಿನ್ನೆಡೆ ಅನುಭವಿದೆ. ವ್ಯಾಗನ್ ಆರ್ ಮಾರಾಟದಲ್ಲೂ ಇಂತಹ ಪರಿಸ್ಥಿತಿಯೇ ಮುಂದುವರಿದೆ.

ಕಳೆದ ತಿಂಗಳು 12,970 ಯುನಿಟ್ ಕಾರುಗಳನ್ನು ಮಾತ್ರ ಸೇಲ್ ಮಾಡಿ, ಶೇಕಡ -43% ಹಿನ್ನೆಡೆ ಅನುಭವಿಸಿದೆ. ಆದರೆ, ಟಾಟಾ ಮಾತ್ರ ಭರ್ಜರಿ ಲಾಭ ಮಾಡಿದೆ. ಜುಲೈ (2023)ನಲ್ಲಿ 8,982 ಟಿಯಾಗೊ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ 46% ಪ್ರಗತಿ ಸಾಧಿಸಿದೆ. ಪ್ರಸ್ತುತ, ಭಾರತದಲ್ಲಿ ಟಾಟಾ ಟಿಯಾಗೊ ರೂ.5.60 - ರೂ.8.20 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Tata - Maruti Suzuki: ಕಡಿಮೆ ಬೆಲೆ ಕಾರು ಮಾರಾಟ.. ಜಿದ್ದಜಿದ್ದಿಗೆ ಬಿದ್ದಿವೆ ಟಾಟಾ, ಮಾರುತಿ ಸುಜುಕಿ ಕಂಪನಿಗಳು

ಟಾಟಾ ಆಲ್ಟ್ರೋಜ್ ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಕಳೆದ ತಿಂಗಳು, ಕಂಪನಿಯು 7,817 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2022ರ ಇದೇ ಅವಧಿಗೆ (5,678 ಯುನಿಟ್) ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 38% ಪ್ರಗತಿ ಸಾಧಿಸಿದೆ. ಟಾಟಾ ಆಲ್ಟ್ರೋಜ್ ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್, ಡೀಸೆಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.

ಆಲ್ಟೊ ಹ್ಯಾಚ್‌ಬ್ಯಾಕ್ ಮಾರಾಟದಲ್ಲೂ ಮಾರುತಿ ಸುಜುಕಿ ಕಂಪನಿ ತೀವ್ರ ಹಿನ್ನೆಡೆ ಅನುಭವಿಸಿದೆ. ಜುಲೈ (2023)ನಲ್ಲಿ ಯುನಿಟ್ ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ (9,065 ಯುನಿಟ್) ಹೋಲಿಸಿದರೆ, ಶೇಕಡ -22% ಕುಸಿತ ಕಂಡಿದೆ. ಸದ್ಯ, ಆಲ್ಟೊ ಕೆ10 ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿದ್ದು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಹುಂಡೈ ಕಂಪನಿಯು ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ . ಕಳೆದ ತಿಂಗಳು 5,337 ಯುನಿಟ್ ಕಾರುಗಳನ್ನು ಸೇಲ್ ಮಾಡಿ, 2022ರ ಇದೇ ಅವಧಿಗೆ (10,000 ಯುನಿಟ್) ಹೋಲಿಸಿದರೆ, ಶೇಕಡ -47% ಇಳಿಕೆಯಾಗಿದೆ. ಹುಂಡೈ ಐ20 ಮಾರಾಟವು ಕಡಿಮೆಯಾಗಿದ್ದು, ಜುಲೈ ತಿಂಗಳಲ್ಲಿ 5,001 ಯುನಿಟ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಲ್ಲಿ ಶೇಕಡ -27% ಕುಂಠಿತವಾಗಿದೆ.

ಟೊಯೊಟಾ ಕಂಪನಿ ಮಾತ್ರ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಸೇಲ್ಸ್ ನಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಜುಲೈನಲ್ಲಿ 4,902 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, 2022ರ ಇದೇ ಅವಧಿಗೆ (2,960 ಯುನಿಟ್) ವರ್ಷದಿಂದ ವರ್ಷಕ್ಕೆ 66% ಪ್ರಗತಿ ಸಾಧಿಸಿದೆ. ಮಾರುತಿ ಸುಜುಕಿ ಇಗ್ನಿಸ್ ಸೇಲ್ ಕೂಡ ಕುಸಿತವಾಗಿದ್ದು, ಕಳೆದ ತಿಂಗಳು 3,223 ಯುನಿಟ್ ಸೇಲ್ ಮಾಡಿ, ಶೇಕಡ -47% ನಷ್ಟ ಅನುಭವಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 15, 2023, 9:30 [IST]
English summary
Top 10 hatchbacks sold july 2023 maruti suzuki tata toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+