ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆ ಹೊಂದಿರುವ ಟಾಪ್-10 ಕಾರುಗಳು

ಭಾರತದಲ್ಲಿ ಕಾರನ್ನು ಖರೀದಿಸುವುದು ಮಧ್ಯಮ ಹಗೂ ಬಡ ವರ್ಗದವರ ಕನಸಾಗಿರುತ್ತದೆ. ಅಂತೆಯೇ ಶ್ರೀಮಂತರು ಕೂಡ ತಮ್ಮ ಪ್ರತಿಷ್ಟೆಗಾಗಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇನ್ನೂ ವಿಶ್ವದ ಬಹುತೇಕ ಶ್ರೀಮಂತರು ತಮ್ಮ ಗಳಿಕೆಯ ಬಹುಪಾಲು ಭಾಗವನ್ನು ಐಷಾರಾಮಿ ಕಾರುಗಳ ಖರೀದಿಗೆ ವ್ಯಯಿಸುತ್ತಾರೆ. ಪ್ರಸ್ತುತ ವಿಶ್ವದಲ್ಲಿನ ಟಾಪ್ 10 ಅತ್ಯಂತ ದುಬಾರಿ ಕಾರುಗಳುನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

10. Lamborgini Veneno: ಬೆಲೆ - $ 4.5 ಮಿಲಿಯನ್ (ಸುಮಾರು 34.5 ಕೋಟಿ)
2013ರ ಜಿನೀವಾ ಮೋಟಾರ್ ಶೋನಲ್ಲಿ ಈ ಕಾರನ್ನು ಮೊದಲು ಪರಿಚಯಿಸಲಾಯಿತು. ಲಂಬೋರ್ಘಿನಿ ವೆನೆನೊವನ್ನು 6.5-ಲೀಟರ್ ವಿ 12 ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ, ಇದು 740 ಬಿಎಚ್‌ಪಿ ಪವರ್‌ನೊಂದಿಗೆ ಬರುತ್ತದೆ. ವೆನೆನೊ 3 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲದು, ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಹೈಪರ್‌ಕಾರ್‌ಗಳಲ್ಲಿ ಒಂದಾಗಿದೆ.

ಇನ್ನೋವಾ ಹೈಬ್ರಿಡ್‌ಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ C-MPV ಹೈಬ್ರಿಡ್

9. Bugatti Bolide: ಬೆಲೆ - $ 4.7 ಮಿಲಿಯನ್ (ಸುಮಾರು 36 ಕೋಟಿ)
ಈ ವರೆಗೆ ವಿಶ್ವದಾದ್ಯಂತ ಬುಗಾಟ್ಟಿ ಬೋಲೈಡ್‌ನ 40 ಘಟಕಗಳನ್ನು ಮಾತ್ರ ಉತ್ಪಾದಿಸಲಾಗಿದೆ, ಇದು ಆರಂಭದಲ್ಲಿ ಭಾರೀ ಬೆಲೆಯಿದ್ದ ಕಾರಣದಿಂದಾಗಿ ಸೀಮಿತ ಕಾರುಗಳನ್ನು ಉತ್ಪಾದನೆ ಮಾಡಲಾಗಿದೆ. ಇದು ತನ್ನ ಚಿರೋನ್ ಸೂಪರ್ ಸ್ಪೋರ್ಟ್ 300+ ಮಾದರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ನೂರ್ಜಿಂಗ್‌ನಂತಹ ಟ್ರ್ಯಾಕ್‌ನ ಸುತ್ತಲೂ ತ್ವರಿತ ಲ್ಯಾಪ್‌ಗೆಂದು ಹೆಚ್ಚು ತೀವ್ರವಾದ ಬಾಡಿವರ್ಕ್ ಅನ್ನು ಪಡೆದುಕೊಂಡಿದೆ.

8. Koenigsegg CCXR Trevita - ಬೆಲೆ $ 4.8 ಮಿಲಿಯನ್ (ಸುಮಾರು 36.8 ಕೋಟಿ ರೂಪಾಯಿಗಳು)
ಕೊಯೆನಿಗ್‌ಸೆಗ್ ಕೂಪ್ ಅನ್ನು ಕಾಂಪಿಟೇಷನ್‌ಗಾಗಿ ನಿರ್ಮಿಸಲಾಗಿದೆ. ಇದು ಸಾಕಷ್ಟು ಶಕ್ತಿಯುತವಾಗಿದ್ದು, ಇದನ್ನು ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬೃಹತ್ ಅಪ್‌ಗ್ರೇಡ್ ಮಾಡಿ ಸಿಸಿಎಕ್ಸ್‌ಆರ್ ಮಾದರಿಯನ್ನು ಹೊರತರಲಾಯಿತು. ನಂತರ ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದರ ಜೊತೆಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸಿ ಇದೀಗ ಕೊನೆಯ ಸಿಸಿಎಕ್ಸ್‌ಆರ್ ಟ್ರೆವಿಟಾವನ್ನು ತಯಾರಿಸಲಾಗಿದೆ.

7. Bugatti Divo - ಬೆಲೆ $ 5.8 ಮಿಲಿಯನ್ (ಸುಮಾರು 44.5 ಕೋಟಿ)
ಬುಗಾಟ್ಟಿ ಡಿವೊ ಕಂಪನಿಯ ಅಗ್ಗದ ಬುಗಾಟ್ಟಿ ಚಿರೋನ್ ಮಾದರಿಗಳೊಂದಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ, ಆದರೆ ಬೆಲೆ ವ್ಯತ್ಯಾಸವನ್ನು ಸಮರ್ಥಿಸಲು ಹೆಚ್ಚಿನ ವೈಶಿಷ್ಟ್ಯ ಮತ್ತು ವಿನ್ಯಾಸಗಳನ್ನು ಮಾಡಲಾಗಿದೆ. ಇದು ಲಘು ಚಕ್ರಗಳು, ಕಾರ್ಬನ್ ಫೈಬರ್ ಇಂಟರ್‌ಕೂಲರ್ ಹೊಂದುವ ಮೂಲಕ ಬುಗಾಟ್ಟಿ ಡಿವೊವನ್ನು ಬುಗಾಟ್ಟಿ ಚಿರೋನ್ ಗಿಂತ ಹಗುರಗೊಳಿಸುವ ಇತರ ಬದಲಾವಣೆಗಳನ್ನು ಮಾಡಲಾಗಿದೆ. ಇದು ತನ್ನ ಹಿಂದಿನ ಮಾದರಿಯಷ್ಟೇ 1,500 ಹಾರ್ಸ್‌ ಪವರ್‌ಅನ್ನು ಒದಗಿಸುತ್ತದೆ.

6. SP Automotive Chaos - ಬೆಲೆ $ 6.4 ಮಿಲಿಯನ್ (ಸುಮಾರು 49.07 ಕೋಟಿ)
ಅತೀ ವೇಗದ ಕಾರುಗಳ ವಿಭಾಗದಲ್ಲಿ ಸ್ಪಿರೋಸ್ ಪ್ಯಾನೊಪೊಲೊಸ್ ಆಟೋಮೋಟಿವ್ ಕೂಡ ಒಂದು. ಚೋಸ್ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 10 ಎಂಜಿನ್ ಅನ್ನು ಹೊಂದಿದೆ, ಇದು 2,000 ಎಚ್‌ಪಿ ಶಕ್ತಿಯನ್ನು ಹೊರ ಹಾಕುತ್ತದೆ. ಈ ಕಾರು ಹೆಚ್ಚು ದುಬಾರಿ ರೂಪಾಂತರವನ್ನು ಹೊಂದಿದ್ದು, ಇದು 3,000 ಎಚ್‌ಪಿ ಪವರ್‌ ಅನ್ನು ಒದಗಿಸುತ್ತದೆ.

5. Mercedes-Maybach Exelero - ಬೆಲೆ $ 8 ಮಿಲಿಯನ್ (ಸುಮಾರು 61.34 ಕೋಟಿ)
ಈ ಅಲ್ಟ್ರಾ-ಹೈ-ಪರ್ಫಾರ್ಮೆನ್ಸ್ ಕಾರು 690 ಬಿಎಚ್‌ಪಿ-ಪವರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 12 ಎಂಜಿನ್ ಅನ್ನು ಹೊಂದಿದೆ, ಇದು 4.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗವನ್ನು ತಲುಪುತ್ತದೆ. ಗಂಟೆಗೆ 349 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಅತ್ಯುತ್ತಮ ಐಷಾರಾಮಿಗಳೊಂದಿಗೆ ಬರುತ್ತದೆ.

4. Bugatti Centodieci - ಬೆಲೆ $ 9.0 ಮಿಲಿಯನ್ (ಸುಮಾರು 69 ಕೋಟಿ)
ಫ್ರೆಂಚ್ ಐಷಾರಾಮಿ ಸೂಪರ್‌ಕಾರ್ ತಯಾರಕರಿಂದ ನಿರ್ಮಿಸಲಾದ ಬುಗಾಟ್ಟಿ ಚಿರೋನ್‌ಗಿಂತ ಈ ಸೆಂಟೊಡೈಎಸಿ ಪರ್ಫಾಮೆನ್ಸ್‌ನಲ್ಲಿ ಹೆಚ್ಚು ಶಕ್ತಿಯುತವಾಗಿದೆ. ಇದು ಲೀಡಿಂಗ್ ದೃಷ್ಟಿಯಿಂದ ಮಾತ್ರವಲ್ಲ, ಬೆಲೆಯ ದೃಷ್ಟಿಯಿಂದಲೂ ಹೆಚ್ಚಾಗಿದೆ. ಇದು 8.0-ಲೀಟರ್ ಡಬ್ಲ್ಯು 16 ಎಂಜಿನ್ ಅನ್ನು ಪಡೆದುಕೊಂಡಿದೆ, ಇದು 1,600 ಎಚ್‌ಪಿ ಶಕ್ತಿಯನ್ನು ಒದಗಿಸುತ್ತದೆ. ಕೇವಲ 2.4 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ಗರಿಷ್ಟ ವೇಗ ಗಂಟೆಗೆ 378 ಕಿಮೀ ಇದೆ.

3. Rolls-Royce Sweptail - ಬೆಲೆ $ 12.8 ಮಿಲಿಯನ್ (ಸುಮಾರು 98.14 ಕೋಟಿ)
ರೋಲ್ಸ್ ರಾಯ್ಸ್ ಸ್ವೀಪ್ಟೇಲ್ ಅನ್ನು ವಿಶ್ವದ ಅತ್ಯಂತ ದುಬಾರಿ ಕಾರು ಎಂದು ಕರೆಯಲಾಗುತ್ತದೆ, ಇದನ್ನು ಕೈಯಿಂದ (ಹ್ಯಾಂಡ್‌ ಮೇಡ್) ತಯಾರಿಸಲಾಗುತ್ತದೆ. ಇದನ್ನು 2013 ರಲ್ಲಿ ಸೂಪರ್ ವಿಹಾರ ಮತ್ತು ವಿಮಾನ ತಜ್ಞರು ತಯಾರಿಸಿದರು. ಇದು 453 ಬಿಎಚ್‌ಪಿ ಶಕ್ತಿಯೊಂದಿಗೆ 6.75-ಲೀಟರ್ ವಿ-12 ಎಂಜಿನ್ ಹೊಂದಿದೆ.

2. Bugatti La Voiture Noire - ಬೆಲೆ $ 13.4 ಮಿಲಿಯನ್ (ಸುಮಾರು 102.74 ಕೋಟಿ)
ಇದು ಬುಗಾಟ್ಟಿ ಚಿರೋನ್, ಚಿರೋನ್ ಸ್ಪೋರ್ಟ್ ಮತ್ತು ಬುಗಾಟ್ಟಿ ಡಿವೊಗೆ ಹೋಲುವ ಕ್ವಾಡ್-ಟರ್ಬೊ ಡಬ್ಲ್ಯು 16 8.0-ಲೀಟರ್ ಎಂಜಿನ್ ಅನ್ನು ಬಳಸುತ್ತದೆ, ಇದು 1,500 ಎಚ್‌ಪಿ ಪವರ್ ಮತ್ತು 1,600 ಎನ್‌ಎಂ ಟಾರ್ಕ್ ನೀಡುವ ಮೂಲಕ ತನ್ನ ಹಿಂದನ ಮಾದರಿಗಳಿಗಿಂತ ಹೆಚ್ಚು ಪವರ್ ಅನ್ನು ಪಡೆದುಕೊಂಡಿದೆ.

1. Rolls-Royce Boat Tail - ಬೆಲೆ $ 28 ಮಿಲಿಯನ್ (ಅಂದಾಜು) (ಸುಮಾರು 214.59 ಕೋಟಿ ರೂ.)
ರೋಲ್ಸ್ ರಾಯ್ಸ್ ಬೋಟ್ ಟೈಲ್ ಒಳಗಿನ ಕಸ್ಟಮ್ ಒಂದು 'ಹೋಸ್ಟಿಂಗ್ ಸೂಟ್' ಆಗಿದ್ದು, ಷಾಂಪೇನ್ ಫ್ರಿಜ್ ಅನ್ನು ಕಸ್ಟಮ್ ಹೈ-ಎಂಡ್ ಫಿನ್ನಿಷ್ ಮತ್ತು ಸನ್ ಆಂಬ್ರೆಲ್ಲಾ ಹೊಂದಿದೆ. ರೋಲ್ಸ್ ರಾಯ್ಸ್ ತಮ್ಮ ಕಾರುಗಳಲ್ಲಿನ ಅಧಿಕೃತ ಬೆಲೆಯನ್ನು ಘೋಷಿಸುವುದಿಲ್ಲ. ಏಕೆಂದರೆ ಅದು ಸಾಕಷ್ಟು ಬೆಸ್ಪಾಕ್ ಅನ್ನು ಹೊಂದಿದೆ, ಹಾಗಾಗಿ ಅಂದಾಜು ಬೆಲೆಯಿಂದ ರೋಲ್ಸ್ ರಾಯ್ಸ್ ಬೋಟ್ ಟೇಲ್‌ ಅನ್ನು ಪಟ್ಟಿಯ ಅಗ್ರ ಸ್ಥಾನದಲ್ಲಿ ಇಡಲಾಗಿದೆ.

Article Published On: Monday, January 2, 2023, 17:06 [IST]
English summary
Top 10 most expensive cars in the world
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+