ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಗರಿಷ್ಠ ಮೈಲೇಜ್ ನೀಡುವ 3 CNG ಕಾರುಗಳು ಬರಲಿವೆ!

ಭಾರತದ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳಿಗೆ ಒಳ್ಳೆಯ ಬೇಡಿಕೆಯಿದೆ. ಅವುಗಳು ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ದೇಶದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸುತ್ತಿವೆ. ಗ್ರಾಹಕರು ಸಹ ಸಿಎನ್‌ಜಿ ಚಾಲಿತ ಕಾರುಗಳನ್ನು ಖರೀದಿ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಇದರಿಂದಾಗಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳು, ಸಿಎನ್‌ಜಿ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಮುಂದಾಗಿದೆ. ಅದರಲ್ಲೂ ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಬಹುದು. ಮಾರುತಿ ಸುಜುಕಿ ಈಗಾಗಲೇ ಅನೇಕ ರೀತಿಯ ಸಿಎನ್‌ಜಿ ಕಾರಿನ ಮಾದರಿಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಜೊತೆಗೆ ನವೀನ ವೈಶಿಷ್ಟ್ಯಗಳೊಂದಿಗೆ ಕೆಲವು ಹೊಸ ಸಿಎನ್‌ಜಿ ಕಾರುಗಳನ್ನು ಗ್ರಾಹಕರಿಗೆ ಖರೀದಿಗೆ ನೀಡಲು ಯೋಜಿಸುತ್ತಿದೆ.

ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಗರಿಷ್ಠ ಮೈಲೇಜ್ ನೀಡುವ 3 CNG ಕಾರುಗಳು ಬರಲಿವೆ!

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ 'ಬ್ರೆಝಾ ಸಿಎನ್‌ಜಿ' ಕಾರನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಟಾಟಾ ಮೋಟಾರ್ಸ್ ಕೂಡ ದೊಡ್ಡ ಯೋಜನೆಯನ್ನು ರೂಪಿಸಿದ್ದು, ಕೆಲವು ಸಿಎನ್‌ಜಿ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ತನ್ನ ಆಲ್ಟ್ರಾಜ್ ಮತ್ತು ಪಂಚ್ ಕಾರಿನ ಸಿಎನ್‌ಜಿ ಆವೃತ್ತಿಗಳನ್ನು ಖರೀದಿಗೆ ಕೊಡಲಿದೆಯಂತೆ. ಎಲ್ಲಾ ಮೂರು ಮಾದರಿಗಳು 1 ಕೆಜಿ ಸಿಎನ್‌ಜಿ ಇಂಧನವನ್ನು ದಹಿಸಿ, 20 ಕಿಮೀ ಮೈಲೇಜ್ ನೀಡಲಿವೆ ಎನ್ನಲಾಗಿದೆ.

ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ (Maruti Brezza CNG):
'ಬ್ರೆಝಾ' ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇದೀಗ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಬ್ರೆಝಾ ಸಿಎನ್‌ಜಿ ಆವೃತ್ತಿಯನ್ನು ಅನಾವರಣ ಮಾಡಲಾಯಿತು. ಕಂಪನಿಯು ಜನವರಿ 2022ರಿಂದಲೇ ಬ್ರೆಝಾ ಸಿಎನ್‌ಜಿ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಖರೀದಿಗೂ ಲಭ್ಯವಾಗಬಹುದು. ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ, ಬ್ರೆಝಾ ಸಿಎನ್‌ಜಿ ದರ 95,000 ರೂ. ಹೆಚ್ಚಿರಬಹುದು.10.97 ಲಕ್ಷ ರೂ.ದಿಂದ ಆರಂಭವಾಗಬಹುದು.

ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಗರಿಷ್ಠ ಮೈಲೇಜ್ ನೀಡುವ 3 CNG ಕಾರುಗಳು ಬರಲಿವೆ!

ಎರ್ಟಿಗಾ ಸಿಎನ್‌ಜಿ ಕಾರಿನಲ್ಲಿರುವ ಅದೇ 1.5-ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಎಂಜಿನ್‌ ಅನ್ನು ಬ್ರೆಝಾ ಸಿಎನ್‌ಜಿಯು ಹೊಂದಿರುವ ಸಾಧ್ಯತೆ ಇದ್ದು, ಗರಿಷ್ಠ 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆಯಂತೆ. ಈ ಕಾರು, 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದ್ದು, ಸಾಮಾನ್ಯ ಬ್ರೆಝಾದಲ್ಲಿರುವಂತೆ ಅದೇ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಸಿಎನ್‌ಜಿ ಆವೃತ್ತಿಯು ಹೊಂದಿರಲಿದೆ.

ಟಾಟಾ ಆಲ್ಟ್ರೋಜ್ ಸಿಎನ್‌ಜಿ (Tata Altroz CNG):
ಆಟೋ ಎಕ್ಸ್‌ಪೋದಲ್ಲಿ ಟಾಟಾ ಆಲ್ಟ್ರೋಜ್ ಐ ಸಿಎನ್‌ಜಿ ಆವೃತ್ತಿಯನ್ನು ಪ್ರದರ್ಶಿಸಲಾಯಿತು. ಕಂಪನಿಯು ಈ ಕಾರನ್ನು ಹಲವಾರು ತಿಂಗಳು ಪರೀಕ್ಷೆಗೆ ಒಳಪಡಿಸಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಆದರೆ, ಅಧಿಕೃತ ಲಾಂಚ್ ಡೇಟ್ ಅನ್ನು ಟಾಟಾ ಮೋಟಾರ್ಸ್ ಈವರೆಗೆ ಪ್ರಕಟಿಸಿಲ್ಲ. ಇದು ಪ್ರೀಮಿಯಂ ಸಿಎನ್‌ಜಿ ಕಾರು ಎಂಬುದು ಗಮನಾರ್ಹ ಅಂಶವಾಗಿದ್ದು, ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಈ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರು, 1.2 ಲೀಟರ್ ರೆವಟ್ರಾನ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 77 ಬಿಎಚ್‌ಪಿ ಗರಿಷ್ಠ ಪವರ್ ಮತ್ತು 97 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರಿನ ವೈಶಿಷ್ಟ್ಯಗಳು ಪೆಟ್ರೋಲ್ ಮಾದರಿಯಂತೆಯೇ ಇರಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿರಲಿದೆ.

ಹೊಸ ಕಾರು ಖರೀದಿಸಬೇಕೇ? ಸ್ವಲ್ಪ ಕಾಯಿರಿ.. ಗರಿಷ್ಠ ಮೈಲೇಜ್ ನೀಡುವ 3 CNG ಕಾರುಗಳು ಬರಲಿವೆ!

ಟಾಟಾ ಪಂಚ್ ಸಿಎನ್‌ಜಿ (Tata Punch CNG):
ಟಾಟಾ ಮೋಟಾರ್ಸ್‌ನ ಕೈಗೆಟುಕುವ ಕಾರುಗಳಲ್ಲಿ 'ಪಂಚ್' ಪ್ರಮುಖವಾಗಿದೆ. ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪಂಚ್ ಐ ಸಿಎನ್‌ಜಿ ಅನಾವರಣ ಮಾಡುವ ಮೂಲಕ ಆದಷ್ಟು ಬೇಗ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಕಾರಿನಲ್ಲಿ ಟ್ವಿನ್ - ಸಿಲಿಂಡರ್ ತಂತ್ರಜ್ಞಾನವನ್ನು ಟಾಟಾ ಬಳಕೆ ಮಾಡಿದ್ದು, ಇದು 30 ಲೀಟರ್ ಸಿಎನ್‌ಜಿಯ ಎರಡು ಸಿಲಿಂಡರ್ ಟ್ಯಾಂಕ್‌ಗಳನ್ನು ಪಡೆದಿದೆ.

ಈ ಕಾರು, 1,199 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಸಿಎನ್‌ಜಿ ಆವೃತ್ತಿಯು 73.5 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಂಧನ ಚಾಲಿತ ಕಾರಿಗಿಂತ 50,000-70,000 ರೂ. ಹೆಚ್ಚು ದುಬಾರಿಯಾಗಬಹುದು. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್‌ ಬೆಲೆ ರೂ.6 ಲಕ್ಷದಿಂದ ರೂ.9.54 ಲಕ್ಷದವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ.

Most Read Articles

Kannada
English summary
Top 3 cng cars launching soon in india details kannada
Story first published: Thursday, January 19, 2023, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X