Electric Cars: ಈ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ.. ಬೆಂಗಳೂರಿನಲ್ಲೇ ಇಷ್ಟು ದಿನಬೇಕಂತೆ!

ಭಾರತದಲ್ಲಿ ಕಳೆದ ಒಂದೆರಡು ವರ್ಷದಿಂದ ಎಲೆಕ್ಟ್ರಿಕ್ ಕಾರುಗಳು (Electric Cars) ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಜುಲೈನಲ್ಲಿ ಟಾಟಾ, ಮಹೀಂದ್ರಾ ಹಾಗೂ ಎಂಜಿ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ತಿಂಗಳು ಗಟ್ಟಲೇ ಕಾಯುವಿಕೆ ಅವಧಿಯನ್ನು ಹೊಂದಿವೆ.

ಮೊದಲಿಗೆ ಟಾಟಾ ನೆಕ್ಸಾನ್ ಇವಿ ಬಗ್ಗೆ ಮಾತನಾಡೋಣ. ಇದು, ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ದೇಶದ ದೊಡ್ಡ ನಗರಗಳನ್ನು ಆಧರಿಸಿ, ಬೇರೆ, ಬೇರೆ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ಇವತ್ತು ನೆಕ್ಸಾನ್ ಇವಿಯನ್ನು ಬುಕ್ಕಿಂಗ್ ಮಾಡಿದರೆ, ಬೆಂಗಳೂರಿನಲ್ಲಿ 2-3 ತಿಂಗಳು, ದೆಹಲಿಯಲ್ಲಿ 2 ತಿಂಗಳು, ಮುಂಬೈನಲ್ಲಿ 1.5-2 ತಿಂಗಳು ಹಾಗೂ ಹೈದರಾಬಾದಿನಲ್ಲಿ 2-3 ತಿಂಗಳೊಳಗೆ ವಿತರಣೆಯಾಗಲಿದೆ.

Electric Cars: ಈ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ.. ಬೆಂಗಳೂರಿನಲ್ಲೇ ಇಷ್ಟು ದಿನಬೇಕಂತೆ!

ನೆಕ್ಸಾನ್ ಇವಿ ಪ್ರೈಮ್ ರೂ.14.49 ಲಕ್ಷದಿಂದ ರೂ.17.19 ಲಕ್ಷ, ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನೆಕ್ಸಾನ್ ಇವಿ ಪ್ರೈಮ್ ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಿದರೆ, ನೆಕ್ಸಾನ್ ಇವಿ ಮ್ಯಾಕ್ಸ್ 453 km ರೇಂಜ್ ಕೊಡುತ್ತದೆ. ಜೊತೆಗೆ ಇವೆರೆಡು ರೂಪಾಂತರಗಳು ಗ್ರಾಹಕರನ್ನು ಆಕರ್ಷಿಸುವ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ಟಾಟಾದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಯಾಗೊ ಇವಿಗೂ ಭರ್ಜರಿ ಬೇಡಿಕೆಯಿದ್ದು, ಬೆಂಗಳೂರಿನಲ್ಲಿ 2-3 ತಿಂಗಳು, ದೆಹಲಿಯಲ್ಲಿ 2 ತಿಂಗಳು, ಮುಂಬೈನಲ್ಲಿ 1.5-2 ತಿಂಗಳು, ಪುಣೆಯಲ್ಲಿ 2-3 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.12.04 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

Electric Cars: ಈ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ.. ಬೆಂಗಳೂರಿನಲ್ಲೇ ಇಷ್ಟು ದಿನಬೇಕಂತೆ!

ಈ ಟಿಯಾಗೊ ಎಲೆಕ್ಟ್ರಿಕ್ ಕಾರಿನಲ್ಲಿ 19.2 kWh ಹಾಗೂ 24 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇದರ ಬ್ಯಾಟರಿ ಶೇಕಡ 10-80% ಚಾರ್ಜ್ ಆಗಲು ಕೇವಲ 57 ನಿಮಿಷಬೇಕು. ಟಿಯಾಗೊ ಇವಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ ಕಂಪನಿಯ ಏಕೈಕ ಎಲೆಕ್ಟ್ರಿಕ್ ಕಾರು 'XUV400' ಕೂಡ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಕಾರನ್ನು ಗ್ರಾಹಕರು, ಇವತ್ತು ಕಾಯ್ದಿರಿಸಿದರೂ ಬೆಂಗಳೂರಿನಲ್ಲಿ 2-3 ತಿಂಗಳು, ದೆಹಲಿಯಲ್ಲಿ 3-4 ತಿಂಗಳು, ಮುಂಬೈನಲ್ಲಿ 2-4 ತಿಂಗಳು ಹಾಗೂ ಜೈಪುರದಲ್ಲಿ 3-4 ತಿಂಗಳೊಳಗೆ ಡಿಲೆವರಿಯಾಗಲಿದೆ. XUV400ನ್ನು ರೂ.15.99 ಲಕ್ಷದಿಂದ ರೂ.18.99 ಎಕ್ಸ್ ಶೋರೂಂ ದರದಲ್ಲಿ ಖರೀದಿದಾರರು ಕೊಂಡುಕೊಳ್ಳಬಹುದು.

Electric Cars: ಈ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ.. ಬೆಂಗಳೂರಿನಲ್ಲೇ ಇಷ್ಟು ದಿನಬೇಕಂತೆ!

ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು, 34.5 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 375 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 150 PS ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 50 kW ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಈ ಕಾರಿನ ಬ್ಯಾಟರಿ ಶೇಕಡ 0-80% ಚಾರ್ಜ್ ಆಗಲು 50 ನಿಮಿಷ ಸಾಕು.

ಕಡೆಯದಾಗಿ ಪುಟ್ಟ 2 ಡೋರ್ ಆಯ್ಕೆ ಪಡೆದಿರುವ ಎಂಜಿ ಕಾಮೆಟ್ ಇವಿ ಬಗ್ಗೆ ತಿಳಿಯೋಣ. ಇದು, ಬೆಂಗಳೂರಿನಲ್ಲಿ 2 ತಿಂಗಳು, ದೆಹಲಿಯಲ್ಲಿ 2-3 ತಿಂಗಳು, ಹಾಗೂ ಮುಂಬೈನಲ್ಲಿ 2-3 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಎಂಜಿ ಕಾಮೆಟ್ ಇವಿ ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡುತ್ತದೆ.

Article Published On: Thursday, July 20, 2023, 12:19 [IST]
English summary
Top 4 electric cars waiting period in july details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+