New Cars: ಆಕರ್ಷಕ ಸನ್‌ರೂಫ್‌ನೊಂದಿಗೆ ಸಿಗುವ ಟಾಟಾ, ಹ್ಯುಂಡೈ ಕಾರುಗಳು.. ಭಾರತೀಯರು ಮೆಚ್ಚಿದ್ದಾರೆ, ರೇಟು ಕಮ್ಮಿ

ದೇಶೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿರುವ ಕಾರುಗಳು ಬಂದು ವರ್ಷಗಳೇ ಕಳೆದಿವೆ. ಅದರಲ್ಲೂ ಸನ್‌ರೂಫ್‌ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋದಾಗ, ಈ ಫೀಚರ್ಸ್ ಅದ್ಬುತವೆನಿಸುತ್ತದೆ. ಸದ್ಯ, ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಸೇರಿದಂತೆ ಪ್ರಮುಖ ಕಾರುಗಳ ವಿವರ ಇಲ್ಲಿದೆ.

ಮೊದಲಿಗೆ ಟಾಟಾ ನೆಕ್ಸಾನ್ ಬಗ್ಗೆ ಮಾತನಾಡೋಣ. ಇದು, ಆಕರ್ಷಕ ಸನ್‌ರೂಫ್ ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದೆ. XM (S) ರೂಪಾಂತರ ರೂ.9.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ (ಸನ್‌ರೂಫ್ ಒಳಗೊಂಡು) ಲಭ್ಯವಿದೆ. ಇದರ 1.2-ಲೀಟರ್, 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್, 120 PS ಪವರ್, 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಸಿಗಲಿದೆ.

New Cars: ಆಕರ್ಷಕ ಸನ್‌ರೂಫ್‌ನೊಂದಿಗೆ ಸಿಗುವ ಟಾಟಾ, ಹ್ಯುಂಡೈ ಕಾರುಗಳು.. ಭಾರತೀಯರು ಮೆಚ್ಚಿದ್ದಾರೆ, ರೇಟು ಕಮ್ಮಿ

ಟಾಟಾ ನೆಕ್ಸಾನ್ ಕಾರು, ರೂಪಾಂತರಗಳಿಗೆ ಅನುಗುಣವಾಗಿ ಸುಮಾರು 24.07 kmpl ಮೈಲೇಜ್ ನೀಡಲಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ABS, EBD ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಉತ್ತಮ ಹ್ಯಾಚ್‌ಬ್ಯಾಕ್ ಗಳಲ್ಲಿ ಹ್ಯುಂಡೈ ಐ20 ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಕಾರು, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಇದರ ಆಸ್ಟಾ ರೂಪಾಂತರ ಆಕರ್ಷಕ ಸನ್‌ರೂಫ್‌ನೊಂದಿಗೆ ರೂ.9.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಜೊತೆಗೆ 1.2-ಲೀಟರ್ ಎಂಜಿನ್, 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ.

New Cars: ಆಕರ್ಷಕ ಸನ್‌ರೂಫ್‌ನೊಂದಿಗೆ ಸಿಗುವ ಟಾಟಾ, ಹ್ಯುಂಡೈ ಕಾರುಗಳು.. ಭಾರತೀಯರು ಮೆಚ್ಚಿದ್ದಾರೆ, ರೇಟು ಕಮ್ಮಿ

ಹ್ಯುಂಡೈ ಐ20ಯು ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಏರ್ ಪ್ಯೂರಿಫೈಯರ್, ಕನೆಕ್ಟ್ದ್ ಕಾರ್ ಟೆಕ್, LED ಹೆಡ್‌ಲೈಟ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಹೋಂಡಾ ಜಾಝ್, ಟಾಟಾ ಆಲ್ಟ್ರೋಜ್, ಮಾರುತಿ ಸುಜುಕಿ ಬಲೆನೊಗೆ ಪ್ರತಿಸ್ಪರ್ಧಿಯಾಗಿದೆ.

ಮಹೀಂದ್ರಾ XUV300ನ W6 ರೂಪಾಂತರವು ಆಕರ್ಷಕ ಸನ್‌ರೂಫ್‌ನೊಂದಿಗೆ ರೂ.10 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಇದು ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ, ಸಿಗಲಿದ್ದು, 16.5 - 20.1 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

New Cars: ಆಕರ್ಷಕ ಸನ್‌ರೂಫ್‌ನೊಂದಿಗೆ ಸಿಗುವ ಟಾಟಾ, ಹ್ಯುಂಡೈ ಕಾರುಗಳು.. ಭಾರತೀಯರು ಮೆಚ್ಚಿದ್ದಾರೆ, ರೇಟು ಕಮ್ಮಿ

ದೇಶೀಯ ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್ ಅತ್ಯಾಕರ್ಷಕ ಸನ್‌ರೂಫ್ ಹೊಂದಿರುವ ಸಬ್ 4ಮೀಟರ್ ಎಸ್‌ಯುವಿಯಾಗಿದ್ದು, ಈ ವೈಶಿಷ್ಟ್ಯ ಪಡೆದಿರುವುದರಿಂದ ರೂ.10.49 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1-ಲೀಟರ್ ಟರ್ಬೊ ಪೆಟೋಲ್, 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಹ್ಯುಂಡೈ ವೆನ್ಯೂ SX ರೂಪಾಂತರ ಕೂಡ ಸನ್‌ರೂಫ್‌ನೊಂದಿಗೆ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿದ್ದು, ರೂ.10.93 ಲಕ್ಷ ಬೆಲೆಯನ್ನು ಪಡೆದಿದೆ. ಇದು, 1.2 ಲೀಟರ್ ಪೆಟ್ರೋಲ್, 1 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

Article Published On: Sunday, April 30, 2023, 8:30 [IST]
English summary
Top 5 affordable cars with sunroof details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+