ಟಾಪ್-5 ಅತ್ಯತ್ತಮ ಮೈಲೇಜ್ ಕಾರುಗಳು... 10 ಲಕ್ಷ ರೂ.ದೊಳಗಿನ ಪೆಟ್ರೋಲ್, ಸಿಎನ್‌ಜಿ ಮಾದರಿಗಳು

ಭಾರತದಲ್ಲಿ ಇಂಧನ ಬೆಲೆಗಳ ಏರಿಕೆಯು ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ಸಾಗುವಂತೆ ಮಾಡಿವೆ. ಇನ್ನೊಂದೆಡೆ ಇವಿಗಳ ಬೆಲೆ ಹೆಚ್ಚಿರುವುದರಿಂದ ಇನ್ನೂ ಕೆಲವರು ಇಂಧನ ದಕ್ಷತೆಯ ಕಾರುಗಳತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗೆಯೇ ತಮ್ಮ ಗ್ರಾಹಕರನ್ನು ಕೈಬಿಡದೇ ಕೆಲವೇ ಕಂಪನಿಗಳು ಅತ್ಯಧಿಕ ಮೈಲೇಜ್ ನೀಡುವ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ನಾವು ಭಾರತದಲ್ಲಿ 10 ಲಕ್ಷ ರೂಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೈಲೇಜ್ ಕಾರುಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ. ಕೆಳಗೆ ತಿಳಿಸಲಾದ ಕಾರುಗಳ ಮೈಲೇಜ್ ಅಂಕಿಅಂಶಗಳನ್ನು ವಾಹನ ತಯಾರಕರು ಅಧಿಕೃತವಾಗಿ ಹೇಳಿರುವುದು ಎಂಬುದನ್ನು ಗಮನಿಸಬೇಕು. ಈ ಪಟ್ಟಿಯಲ್ಲಿ ಬಹುತೇಕ ಮಾರುತಿ ಕಾರುಗಳೇ ಇದ್ದು, ಇದರಲ್ಲಿ ಸಿಎನ್‌ಜಿ ಆವೃತ್ತಿಗಳನ್ನು ಕೂಡ ಉಲ್ಲೇಖಿಸಲಾಗಿದೆ. ಸದ್ಯ ಭಾರತದಲ್ಲಿ ಟಾಪ್ ಮೈಲೇಜ್ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ 5 ಕಾರುಗಳನ್ನು ಇಲ್ಲಿ ನೋಡೋಣ.

ಟಾಪ್-5 ಅತ್ಯತ್ತಮ ಮೈಲೇಜ್ ಕಾರುಗಳು... 10 ಲಕ್ಷ ರೂ.ದೊಳಗಿನ ಪೆಟ್ರೋಲ್, ಸಿಎನ್‌ಜಿ ಮಾದರಿಗಳು

ಹುಂಡೈ ಔರಾ:
ನವೀಕರಿಸಿದ ಹುಂಡೈ ಔರಾ ಐದು ಪೆಟ್ರೋಲ್ ಮತ್ತು ಎರಡು CNG ರೂಪಾಂತರಗಳಲ್ಲಿ ಬರುತ್ತದೆ. ಸಾಮಾನ್ಯ 1.2L ಪೆಟ್ರೋಲ್ ಮೋಟಾರ್ 83bhp ಮತ್ತು 114Nm ಟಾರ್ಕ್ ಹೊರಹಾಕುತ್ತದೆ. ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ CNG ಕಿಟ್‌ನೊಂದಿಗೆ, ಇದು 69bhp ಮತ್ತು 95Nm ಟಾರ್ಕ್ ಹೊರಹಾಕುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಔರಾ CNG 25kmpl ಮೈಲೇಜ್ ನೀಡುತ್ತದೆ. S ಮತ್ತು SX CNG ರೂಪಾಂತರಗಳನ್ನು ಕ್ರಮವಾಗಿ 8.10 ಲಕ್ಷ ರೂ. ನಿಂದ 8.87 ಲಕ್ಷ ರೂ. ಬೆಲೆಗಳಲ್ಲಿ ನೀಡಲಾಗುತ್ತಿದೆ.

ಟಾಟಾ ಟಿಯಾಗೊ:
ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಆರು ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಎಲ್ಲಾ ರೂಪಾಂತರಗಳು 1.2L, 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿವೆ. ಇದು 86bhp ಮತ್ತು 113Nm ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ಗಳೆರಡೂ ಆಫರ್‌ನಲ್ಲಿವೆ. CNG ಕಿಟ್‌ನೊಂದಿಗೆ, ಪೆಟ್ರೋಲ್ ಮೋಟಾರ್ 73bhp ಮತ್ತು 95Nm ಟಾರ್ಕ್ ಹೊರಹಾಕುತ್ತದೆ. Tiago CNG 26.49km/kg ಇಂಧನ ದಕ್ಷತೆಯನ್ನು ನೀಡುತ್ತದೆ. ಹ್ಯಾಚ್ ಮಾದರಿಯ ಶ್ರೇಣಿಯು ಐದು CNG ರೂಪಾಂತರಗಳನ್ನು ಹೊಂದಿದೆ. ಬೆಲೆಗಳು ರೂ. 6.44 ಲಕ್ಷ ದಿಂದ ರೂ. 8.05 ಲಕ್ಷದವೆರೆಗೆ ಇದೆ.

ಮಾರುತಿ ಸುಜುಕಿ ಸೆರಿಯೊ:
ಮಾರುತಿ ಸೆಲೆರಿಯೊ ನಾಲ್ಕು ಟ್ರಿಮ್‌ಗಳಲ್ಲಿ ಬರುತ್ತದೆ. ಹೊಸ 1.0L, 3-ಸಿಲಿಂಡರ್ K10C ಡ್ಯುಯಲ್‌ಜೆಟ್ ಪೆಟ್ರೋಲ್‌ನಿಂದ ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್‌ನೊಂದಿಗೆ ಇದನ್ನು ಬೂಸ್ಟ್ ಮಾಡಲಾಗಿದೆ. ಇದರ ಮೋಟಾರ್ 67bhp ಮತ್ತು 89Nm ಟಾರ್ಕ್‌ನ ಗರಿಷ್ಠ ಶಕ್ತಿಯನ್ನು ಹೊರಹಾಕುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್‌ನೊಂದಿಗೆ ಪಡೆಯಬಹುದು. ಸೆಲೆರಿಯೊ VXi AMT ರೂಪಾಂತರವು 26.68kmpl ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ, ಇದರ ಬೆಲೆ 6.37 ಲಕ್ಷ ರೂ. ಇದೆ. ಹ್ಯಾಚ್‌ಬ್ಯಾಕ್ ಮಾಡೆಲ್ ಪ್ರಸ್ತುತ ರೂ. 5.35 ಲಕ್ಷದಿಂದ ರೂ. 7.13 ಲಕ್ಷ ಬೆಲೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಬಲೆನೊ:
ಕಳೆದ ವರ್ಷ ಬಿಡುಗಡೆಯಾದ ಮಾರುತಿ ಸುಜುಕಿ ಬಲೆನೊ CNG, 1.2L, 4-ಸಿಲಿಂಡರ್ K12N ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಮತ್ತು ಫ್ಯಾಕ್ಟರಿ-ಫಿಟ್ಡ್ CNG ಕಿಟ್‌ನೊಂದಿಗೆ ಲಭ್ಯವಿದೆ. 77.5bhp ಮತ್ತು 98.5Nm ಟಾರ್ಕ್‌ನ ಹೊರಹಾಕುತ್ತದೆ. ಬಲೆನೊ CNG 30.61km/kg ಮೈಲೇಜ್ ನೀಡುತ್ತದೆ ಎಂದು ಕಾರು ತಯಾರಕರು ಹೇಳುತ್ತಾರೆ. ಹ್ಯಾಚ್‌ಬ್ಯಾಕ್ 55-ಲೀಟರ್‌ಗಳ CNG ಟ್ಯಾಂಕ್ ಅನ್ನು ಹೊಂದಿದೆ. ಡೆಲ್ಟಾ ಮತ್ತು ಝೀಟಾ ಎಂಬ ಎರಡು CNG ರೂಪಾಂತರಗಳಿದ್ದು, ಇವು ರೂ. 8.30 ಲಕ್ಷ ಮತ್ತು ರೂ. 9.23 ಲಕ್ಷ ಬೆಲೆ ಹೊಂದಿವೆ.

ಮಾರುತಿ ಸುಜುಕಿ ವ್ಯಾಗನ್-R:
ಮಾರುತಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಪ್ರಸ್ತುತ ಎರಡು ಪೆಟ್ರೋಲ್ ಎಂಜಿನ್‌ಗಳೊಂದಿಗೆ ಲಭ್ಯವಿದೆ. ಹಾಗೆಯೇ 1.0L ಗ್ಯಾಸೋಲಿನ್ ಮೋಟಾರ್ ಸಹ CNG ಕಿಟ್‌ನೊಂದಿಗೆ ಲಭ್ಯವಿದೆ. ಫ್ಯಾಕ್ಟರಿ-ಅಳವಡಿಕೆಯ CNG ಆಯ್ಕೆಯನ್ನು ಪ್ರವೇಶ ಮಟ್ಟದ LXi ಮತ್ತು ಮಿಡ್-ಸ್ಪೆಕ್ VXi ಟ್ರಿಮ್‌ಗಳೊಂದಿಗೆ ಹೊಂದಬಹುದು. ವ್ಯಾಗನ್ಆರ್ 1.0L ಪೆಟ್ರೋಲ್ 24.35kmpl (ಮ್ಯಾನುಯಲ್) ಮತ್ತು 25.19kmpl (ಆಟೋಮ್ಯಾಟಿಕ್) ಮೈಲೇಜ್ ನೀಡುತ್ತದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ. ಇದರ 1.2L ಪೆಟ್ರೋಲ್ ಆವೃತ್ತಿಯು 23.56kmpl (ಮ್ಯಾನುಯಲ್) ಮತ್ತು 24.43kmpl (ಆಟೋಮ್ಯಾಟಿಕ್) ಮೈಲೇಜ್ ನೀಡುತ್ತದೆ. ವ್ಯಾಗನ್ಆರ್ ಸಿಎನ್‌ಜಿ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ರೂಪಾಂತರಗಳು 34.05 ಕಿಮೀ/ಕೆ.ಜಿ ಮೈಲೇಜ್ ನೀಡುತ್ತವೆ. ಇದರ ಬೆಲೆಯು 6.43 ಲಕ್ಷ ಹಾಗೂ 6.88 ಲಕ್ಷ ರೂ. ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, March 24, 2023, 9:42 [IST]
English summary
Top 5 best mileage cars under 10 lakh details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+