ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಧೂಳೆಬ್ಬಿಸಲು ಬರಲಿವೆ ಈ ಕಾರುಗಳು

ಭಾರತದ ಮಾರುಕಟ್ಟೆಯಲ್ಲಿ ಈ ತಿಂಗಳು ವಿವಿಧ ಕಂಪನಿಯ ಕಾರುಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ಹೋಂಡಾ, ಸಿಟಿ ಫೇಸ್‌ಲಿಫ್ಟ್ ಲಾಂಚ್ ಮಾಡಿದ್ದು, ಇದು ಮಾರ್ಚ್‍ನ ಮೊದಲ ಕಾರಾಗಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಜೊತೆಗೆ ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಪ್ರಮುಖ ಐದು ಕಾರುಗಳು ಬಿಡುಗಡೆಯಾಗಲಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.

ಹ್ಯುಂಡೈ ವೆರ್ನಾ: ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹ್ಯುಂಡೈ, ತನ್ನ ಬಹುನೀರಿಕ್ಷಿತ ಸೆಡಾನ್ 'ವೆರ್ನಾ'ವನ್ನು ಮಾರ್ಚ್ 21ರಂದು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಿದೆ. ಇದು ನೋಡಲು ಆಕರ್ಷಕ ಲುಕ್ ಹೊಂದಿದ್ದು, ಸ್ಪ್ಲಿಟ್ ಹೆಡ್‌ಲ್ಯಾಂಪ್, ಫ್ರಂಟ್, ರೇರ್ ಎಲ್ಇಡಿ ಲೈಟ್ ಬಾರ್‌ಗಳನ್ನು ಪಡೆದಿದೆ. 160 bhp ಪವರ್ ಉತ್ಪಾದಿಸುವ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಧೂಳೆಬ್ಬಿಸಲು ಬರಲಿವೆ ಈ ಕಾರುಗಳು

ಹ್ಯುಂಡೈ ಅಲ್ಕಾಜರ್ (ಟರ್ಬೊ ಪೆಟ್ರೋಲ್): ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಹ್ಯುಂಡೈ ಅಲ್ಕಾಜರ್ ಟರ್ಬೊ ಪೆಟ್ರೋಲ್‌ ಆವೃತ್ತಿಗಾಗಿ ಬುಕಿಂಗ್ ಆರಂಭವಾಗಿದೆ. ಇದರ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಂದು ಜಾರಿಗೊಳಿಸುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಅಲ್ಕಾಜರ್ ಕಾರಿನಲ್ಲಿ ಅಳವಡಿಕೆ ಮಾಡಿರುವ ನೂತನ ಎಂಜಿನ್, 157.8 bhp ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದುವ ಮೂಲಕ ಪವರ್ ಫುಲ್ ಆಗಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ (ಡೀಸೆಲ್): ಬಹುನೀರಿಕ್ಷಿತ ಇನ್ನೋವಾ ಹೈಕ್ರಾಸ್ ಜೊತೆಯಲ್ಲಿಯೇ ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಟೊಯೊಟಾ ಕಂಪನಿ ಈಗಾಗಲೇ ಘೋಷಣೆ ಮಾಡಿದೆ. ಇದರ ಎಂಜಿನ್ ಅನ್ನು ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. 2.4-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಧೂಳೆಬ್ಬಿಸಲು ಬರಲಿವೆ ಈ ಕಾರುಗಳು

ಈ ಟೊಯೊಟಾ ಇನ್ನೋವಾ ಕ್ರಿಸ್ಟಾ,ರೂ.20 ಲಕ್ಷದಿಂದ ರೂ.23 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿರಲಿದೆ. ಅಲ್ಲದೆ, ಖರೀದಿದಾರರನ್ನು ಆಕರ್ಷಿಸುವಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್. ಸುರಕ್ಷತೆ ದೃಷ್ಟಿಯಿಂದ ಆರು ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಪಡೆದಿರಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್: ಈ ಎಸ್‌ಯುವಿಯನ್ನು ಕಂಪನಿಯು ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿತ್ತು. ಅಂದಿನಿಂದಲೇ ಬುಕಿಂಗ್ ಕೂಡ ಆರಂಭಿಸಿತ್ತು. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಬರೋಬ್ಬರಿ 12,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಫ್ರಾಂಕ್ಸ್ ಎಸ್‌ಯುವಿ, ಈಗಾಗಲೇ ದೇಶಾದ್ಯಂತ ನೆಕ್ಸಾ ಡೀಲರ್‌ಶಿಪ್‌ಗಳಿಗೆ ತಲುಪುತ್ತಿದೆ. ಇದು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಧೂಳೆಬ್ಬಿಸಲು ಬರಲಿವೆ ಈ ಕಾರುಗಳು

ಮಾರುತಿ ಸುಜುಕಿ ಬ್ರೆಝಾ (ಸಿಎನ್‌ಜಿ): ಇದು ಗ್ರಾಹಕರು ಬಹಳ ಕಾತರದಿಂದ ಎದುರು ನೋಡುತ್ತಿರುವ ಸಿಎನ್‌ಜಿ ಕಾರಾಗಿದೆ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಈ ಕಾರು ಬಿಡುಗಡೆಯಾದ ಮೇಲೆ ದೇಶದಲ್ಲೇ ಆಟೋಮೆಟಿಕ್ ಗೇರ್‌ಬಾಕ್ಸ್‌ ಪಡೆದಿರುವ ಮೊದಲ ಸಿಎನ್‌ಜಿ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು, 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 bhp ಗರಿಷ್ಠ ಪವರ್ ಹಾಗೂ 122 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಒಟ್ಟಾರೆ, ಈ ತಿಂಗಳು ಐದು ಕಾರುಗಳು ಭಾರತದ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, ಟೊಯೊಟಾ ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಮಾರುತಿ ಸುಜುಕಿ ಕಂಪನಿ ಬ್ರೆಝಾ ಸಿಎನ್‌ಜಿ ಆವೃತ್ತಿಯನ್ನು ಲಾಂಚ್ ಮಾಡುತ್ತಿದ್ದು, ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪಡೆದಿದೆ. ಜೊತೆಗೆ ಹ್ಯುಂಡೈ ಕಂಪನಿ ವೆರ್ನಾ ಹಾಗೂ ಅಲ್ಕಾಜರ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ಹೊರಟ್ಟಿದ್ದು, ಇವು ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಬಹುದು.

Article Published On: Friday, March 3, 2023, 13:30 [IST]
English summary
Top 5 car launches march 2023 details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+