ಮೈಲೇಜ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಸೆಡ್ಡು ಹೊಡೆಯಬಲ್ಲ 5 ಇಂಧನ-ಸಮರ್ಥ ಕಾರುಗಳು!
ಭಾರತದಲ್ಲಿ ಬಹುತೇಕ ಜನರು ಮೈಲೇಜ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಹಾಗಾಗಿ ಸದ್ಯ ಭಾರತದಲ್ಲಿ ಕೈಗೆಟುಕುವ ಬೆಲೆಯ ಅತ್ಯಂತ ಇಂಧನ ದಕ್ಷತೆ ಹೊಂದಿರುವ ಟಾಪ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಜೊತೆಗೆ ಈ ಕಾರುಗಳು ಉತ್ತಮವಾದ ವೈಶಿಷ್ಟ್ಯಗಳು ಮತ್ತು ಅನುಕೂಲತೆಯ ಜೊತೆಗೆ ಪ್ರಭಾವಶಾಲಿ ಕಾರ್ಯಕ್ಷಮತೆ ಕೂಡ ನೀಡುವ ಮಾದರಿಗಳಾಗಿವೆ.
1. ಮಾರುತಿ ಸುಜುಕಿ ವ್ಯಾಗನ್ಆರ್: ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆಯು ರೂ. 4.45 ಲಕ್ಷದಿಂದ ಆರಂಭವಾಗಿ ರೂ. 5.95 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಇದು 1.0-ಲೀಟರ್, ಮೂರು-ಸಿಲಿಂಡರ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಎಎಮ್‌ಟಿ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದರ AMT 25.19 ಕಿ.ಮೀ ಮತ್ತು ಮ್ಯಾನುವಲ್‌ನಲ್ಲಿ 24.35 ಕಿ.ಮೀ ಮೈಲೇಜ್ ಪಡೆಯಬಹುದು.

2. ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ ಆರಂಭಿಕ ಬೆಲೆ 4.90 ಲಕ್ಷ ರೂ. ನಿಂದ ಆರಂಭವಾಗಿ 5.67 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ. ಇದರ AMT ಅಥವಾ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾದ 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದರ AMT ರೂಪಾಂತರವು 26.68 ಕಿ.ಮೀ ಮತ್ತು 5-ಸ್ಪೀಡ್ ಮ್ಯಾನುವಲ್ ರೂಪಾಂತರ 25.24 ಕಿ.ಮೀ ಮೈಲೇಜ್ ಹೊಂದಿದೆ.
3. ಹೋಂಡಾ ಸಿಟಿ ಇ: HEV: ಹೋಂಡಾ ಸಿಟಿ e:HEV, 1.5-ಲೀಟರ್ ಅಟ್ಕಿನ್ಸನ್-ಸೈಕಲ್ ಎಂಜಿನ್ ಮತ್ತು eCVT ಗೇರ್‌ಬಾಕ್ಸ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾಗಿದೆ. ಇದರ ಹೈಬ್ರಿಡ್ ಪವರ್‌ಟ್ರೇನ್ 124.2 hp ಮತ್ತು 253 Nm ಟಾರ್ಕ್ ಉತ್ಪಾದಿಸುತ್ತದೆ. ಸಿಟಿಯ ಹೈಬ್ರಿಡ್ ಪವರ್‌ಟ್ರೇನ್ e:HEV 27.13 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ.

4. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 1.5-ಲೀಟರ್, ಮೂರು-ಸಿಲಿಂಡರ್, ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಅನ್ನು ಒಳಗೊಂಡಿದೆ. 115 PS ಪವರ್ ಮತ್ತು 122 Nm ಟಾರ್ಕ್‌ನ ಗರಿಷ್ಠ ಪವರ್ ಹೊರಹಾಕುತ್ತದೆ. 27.93 ಕಿ.ಮೀನ ಅತ್ಯುತ್ತಮ ಇಂಧನ ದಕ್ಷತೆಯ ಮೈಲೇಜ್‌ನೊಂದಿಗೆ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಿದೆ.
5. ಟೊಯೋಟಾ ಹೈರೈಡರ್: ಟೊಯೋಟಾ ಹೈರೈಡರ್ 27.93 ಕಿ.ಮೀ ನಷ್ಟು ಇಂಧನ ದಕ್ಷತೆಯನ್ನು ಹೊಂದಿದೆ. ಇದು CVT ಗೇರ್‌ಬಾಕ್ಸ್‌ನೊಂದಿಗೆ ಹೊಂದಿಕೆಯಾಗುವ 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಹೈರೈಡರ್‌ನ ಎಂಜಿನ್ ಅಟ್ಕಿನ್ಸನ್ ಸೈಕಲ್ ಅನ್ನು ಆಧರಿಸಿದೆ. 115 PS ಮತ್ತು 122 Nm ಟಾರ್ಕ್ ಉತ್ಪಾದಿಸುತ್ತದೆ. ಈ ಹೈಬ್ರಿಡ್ 1.8 kWh ಬ್ಯಾಟರಿಯೊಂದಿಗೆ ಎಂಜಿನ್ ಕಾರ್ಯನಿರ್ವಹಿಸುತ್ತದೆ.

ಭಾರತೀಯ ಗ್ರಾಹಕರು ಕಾರು ಖರೀದಿಸುವಾಗ ಗಣನೆಗೆ ತೆಗೆದುಕೊಳ್ಳುವ ಪ್ರಮುಖ ಅಂಶವೆಂದರೆ ಕಾರಿನ ಮೈಲೇಜ್, ಹಾಗಾಗಿಯೇ ಪ್ರತಿ ವರ್ಷ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಮೈಲೇಜ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಪ್ರಮಾಣಿತ ಕಾರುಗಳನ್ನು ಉತ್ಪಾದಿಸುವಲ್ಲಿ ಮಾರುತಿ, ಹೋಂಡಾ, ಟೊಯೊಟಾ ಕಂಪನಿಗಳು ಅಗ್ರ ಸ್ಥಾನದಲ್ಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications