ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಆಟೋಮ್ಯಾಟಿಕ್ ಕಾರುಗಳಿವು...

ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ವಿಧದ ಕಾರುಗಳು ಲಭ್ಯವಿದೆ. ಗ್ರಾಹಕರಿಗೆ ತಮ್ಮ ಆದ್ಯತೆಗೆ ಅನುಗುಣವಾಗಿ ಕಾರುಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಕಳೆದ ಕೆಲವು ವರ್ಷಗಳಿಂದ ಹಲವಾರು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಈ ಹೊಸ ಆಗಮನಗಳಲ್ಲಿ ಹಲವು ಅದ್ಭುತ ಕಾರುಗಳು, ವಿವಿಧ ವಿಭಾಗಗಳು ಮತ್ತು ಕೈಗೆಟುಕುವ ಬೆಲೆಯಲ್ಲಿಯು ಕಾರುಗಳು ಬಿಡುಗಡೆಯಾಗಿವೆ.

ಇದರಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಹಲವು ಮಾದರಿಗಳಿವೆ. ಭಾರತದಂತಹ ಜನನಿಬಿಡ ದೇಶದಲ್ಲಿ, ಹೆಚ್ಚಿನ ನಗರಗಳು ಟ್ರಾಫಿಕ್ ಸಿಗ್ನಿಲ್ ಗಳನ್ನು ಹೊಂದಿದ್ದು, ಇಂತಹ ಸಂದರ್ಭಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳು ಉತ್ತಮವ ಆಯ್ಕೆಯಾಗಿದೆ. ಬಜೆಟ್ ಬೆಲೆಯಲ್ಲಿಯು ಕೂಡ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳಿವೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೈಗೆಟುಕುವ ಬೆಲೆಯ ಆಟೋಮ್ಯಾಟಿಕ್ ಕಾರುಗಳ ಮಾಹಿತಿ ಇಲ್ಲಿದೆ.

ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಆಟೋಮ್ಯಾಟಿಕ್ ಕಾರುಗಳಿವು...

ಮಾರುತಿ ಸುಜುಕಿ ಆಲ್ಟೋ K10 : ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಆಟೋಮ್ಯಾಟಿಕ್ ಕಾರ್ ಆಗಿದೆ. ಈ ಮಾರುತಿ ಆಲ್ಟೋ K10 VXI AGS ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5.59 ಲಕ್ಷವಾಗಿದೆ. ಈ ಕಾರಿನಲ್ಲಿ 1.0-ಲೀಟರ್, 3-ಸಿಲಿಂಡರ್, ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 65.7 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಇದು ಎಸ್‌ಯುವಿ ಸ್ಟೈಲಿಂಗ್‌ನೊಂದಿಗಿನ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ ಮತ್ತು ಮಾರುತಿ ಎಸ್-ಪ್ರೆಸ್ಸೊದ ಆಟೋಮ್ಯಾಟಿಕ್ ರೂಪಾಂತರವು ವಿಎಕ್ಸ್‌ಐ (ಒ) ಎಜಿಎಸ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.75 ಲಕ್ಷವಾಗಿದೆ. ಈ ಎಸ್-ಪ್ರೆಸ್ಸೊ ಕಾರಿನಲ್ಲಿ 1.0-ಲೀಟರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 68 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ರೆನಾಲ್ಟ್ ಕ್ವಿಡ್: ಈ ರೆನಾಲ್ಟ್ ಕ್ವಿಡ್ ಕಾರಿನ RXT 1.0 EASY-R ರೂಪಾಂತರದ ಬೆಲೆಯು ಎಕ್ಸ್ ಶೂರೂಂ ಪ್ರಕಾರ ರೂ.6.12 ಲಕ್ಷವಾಗಿದೆ. ಈ ಕ್ವಿಡ್ ಭಾರತದಲ್ಲಿ ರೆನಾಲ್ಟ್‌ನ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದ್ದು, ರೆನಾಲ್ಟ್ ಕ್ವಿಡ್ ಪ್ರಾರಂಭವಾದಾಗಿನಿಂದಲೂ ಸಣ್ಣ ಕಾರು ಖರೀದಿದಾರರ ಮೆಚ್ಚಿನ ಆಯ್ಕೆಯಲ್ಲಿ ಇದು ಕೂಡ ಒಂದಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ: ಇದು ನೀವು ಖರೀದಿಸಬಹುದಾದ ಅತ್ಯುತ್ತಮ ಸಿಟಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಆಟೋಮ್ಯಾಟಿಕ್ ಆವೃತ್ತಿ ಬೆಲೆಯು ಎಕ್ಸ್ ಶೋರೂಂ ಪ್ರಾಕರ ರೂ.6.37 ಲಕ್ಷದಿಂದ ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರಿನಲ್ಲಿ 1.0-ಲೀಟರ್ NA ಪೆಟ್ರೋಲ್ ಎಂಜಿನ್ ಹೊಂದಿದೆ, ಈ ಎಂಜಿನ್ 66.6 ಬಿಹೆಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ಆರ್: ಈ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದು ಮಾರುತಿ ಸುಜುಕಿ ಸ್ವಿಫ್ಟ್‌ನಂತಹ ಇತರ ಉನ್ನತ-ವಿಭಾಗದ ಕಾರುಗಳಿಗೆ ಆಧಾರವಾಗಿದೆ. ಇದರ ಆಟೋಮ್ಯಾಟಿಕ್ ರೂಪಾಂತರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.53 ಲಕ್ಷದಿಂದ ಪ್ರಾರಂಭವಾಗುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಗಳಿವೆ.

ಮಾರುತಿ ಸುಜುಕಿ ವ್ಯಾಗನ್ಆರ್ 5-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

Article Published On: Sunday, February 26, 2023, 17:00 [IST]
English summary
Top 5 most affordable automatic cars in india details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+