Top 5 SUVs: ಮಾರುತಿ ಸುಜುಕಿ ಬ್ರೆಝಾ ಹಿಂದಿಕ್ಕಿ, ಮೊದಲ ಸ್ಥಾನಕ್ಕೇರಿದ ಟಾಟಾ ನೆಕ್ಸಾನ್!

ದೇಶದ ಕಾರು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಸ್‌ಯುವಿ (SUV) ವಿಭಾಗವೂ ಜನಪ್ರಿಯತೆ ಗಳಿಸುತ್ತಿದೆ. ಅದರಲ್ಲೂ ಟಾಟಾ (Tata) ಹ್ಯುಂಡೈ (Hyundai), ಮಾರುತಿ ಸುಜುಕಿ (Maruti Suzuki) ಜಿದ್ದಾಜಿದ್ದಿಗೆ ಬಿದ್ದಂತೆ ಇವುಗಳನ್ನು ಮಾರಾಟ ಮಾಡುತ್ತಿದ್ದು, ಸೆಪ್ಟೆಂಬರ್ (2023) ತಿಂಗಳಲ್ಲಿ ಮಾರಾಟವಾದ ಟಾಪ್ 5 ಎಸ್‌ಯುವಿಗಳ ಬಗ್ಗೆ ತಿಳಿಯೋಣ.

ಮೊದಲಿಗೆ, ನಂಬರ್ 1 ಸ್ಥಾನದಲ್ಲಿರುವ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ಬಗ್ಗೆ ಮಾತನಾಡೋಣ. ಕಂಪನಿಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 15,325 ಯುನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿ, 2022ರ ಇದೇ ಅವಧಿಗೆ (14,518 ಯುನಿಟ್) ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 6% ಪ್ರಗತಿ ಸಾಧಿಸಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಟಾಟಾ ನೆಕ್ಸಾನ್, ರೂ.8.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Top 5 SUVs: ಮಾರುತಿ ಸುಜುಕಿ ಬ್ರೆಝಾ ಹಿಂದಿಕ್ಕಿ, ಮೊದಲ ಸ್ಥಾನಕ್ಕೇರಿದ ಟಾಟಾ ನೆಕ್ಸಾನ್!

ಇದು, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್, 5/6 ಸ್ವೀಡ್ ಮ್ಯಾನುವಲ್, 6 ಸ್ವೀಡ್/ 7 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 17.44 kmpl - 23.23 kmpl ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಸ್ಪೀಕರ್ JBL ಆಡಿಯೊ ಸಿಸ್ಟಮ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎರಡನೇ ಸ್ಥಾನದಲ್ಲಿದ್ದು, ಕಂಪನಿಯೂ ನೆಕ್ಸಾನ್ ಎಸ್‌ಯುವಿಗಳಿಗಿಂತ 324 ಕಡಿಮೆ ಬ್ರೆಝಾ ಕಾರುಗಳನ್ನು ಸೇಲ್ ಮಾಡಿದೆ. 2022ರ ಸೆಪ್ಟೆಂಬರ್ ಗೆ (15,445) ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 3% ಕುಸಿತವನ್ನು ದಾಖಲಿಸಿದೆ. ಈ ಕಾರು, ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ.

Top 5 SUVs: ಮಾರುತಿ ಸುಜುಕಿ ಬ್ರೆಝಾ ಹಿಂದಿಕ್ಕಿ, ಮೊದಲ ಸ್ಥಾನಕ್ಕೇರಿದ ಟಾಟಾ ನೆಕ್ಸಾನ್!

ಬ್ರೆಝಾ, 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವ್ವಿಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ 4 - ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾದ ಮತ್ತೊಂದು ಜನಪ್ರಿಯ ಎಸ್‌ಯುವಿ ಪಂಚ್ (Punch), ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಕಂಪನಿಯು 13,036 ಯುನಿಟ್ ಪಂಚ್ ಕಾರುಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 6% ಬೆಳವಣಿಗೆ ಕಂಡಿದೆ. ಪಂಚ್, ರೂ.6 ಲಕ್ಷದಿಂದ ರೂ.10.10 ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಟಾಟಾ, ಎಲೆಕ್ಟ್ರಿಕ್ ರೂಪದಲ್ಲಿಯೂ ಪಂಚ್ ಕಾರನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ.

Top 5 SUVs: ಮಾರುತಿ ಸುಜುಕಿ ಬ್ರೆಝಾ ಹಿಂದಿಕ್ಕಿ, ಮೊದಲ ಸ್ಥಾನಕ್ಕೇರಿದ ಟಾಟಾ ನೆಕ್ಸಾನ್!

ಹ್ಯುಂಡೈ ಕ್ರೆಟಾ (Hyundai Creta) ನಾಲ್ಕನೇ ಸ್ಥಾನದಲ್ಲಿದ್ದು, 2015ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಎಸ್‌ಯುವಿ, ಅತ್ಯುತ್ತಮ ಬೇಡಿಕೆಯನ್ನು ಹೊಂದಿದೆ. ಕಂಪನಿಯು ಹೋದ ತಿಂಗಳು, 12,717 ಯುನಿಟ್ ಕ್ರೆಟಾ ಕಾರುಗಳನ್ನು ಸೇಲ್ ಮಾಡಿದೆ. ಕ್ರೆಟಾ, ರೂ.10.87 ಲಕ್ಷದಿಂದ ರೂ.19.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಹ್ಯುಂಡೈ ವೆನ್ಯೂ (Hyundai Venue), ಸೆಪ್ಟೆಂಬರ್ (2023) ತಿಂಗಳ ಎಸ್‌ಯುವಿ ಮಾರಾಟದಲ್ಲಿ ಐದನೇ ಸ್ಥಾನದಲ್ಲಿದ್ದು, ಕಂಪನಿಯು 12,204 ಯುನಿಟ್ ಕಾರುಗಳನ್ನೂ ಮಾರಾಟ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ರೂ.7.89 ಲಕ್ಷದಿಂದ ರೂ.13.48 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 10, 2023, 18:03 [IST]
English summary
Top 5 suv sales september 2023 tata maruti suzuki hyundai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+