Top 5 SUVs: ಎಸ್‌ಯುವಿಗಳಿಗೆ ಮುಗಿಬಿದ್ದ ಗ್ರಾಹಕ: ಟಾಟಾ ನೆಕ್ಸಾನ್, ಪಂಚ್, ಮಾರುತಿ ಬ್ರೆಜ್ಜಾಗೆ ಭಾರೀ ಬೇಡಿಕೆ
ಭಾರತದಲ್ಲಿ ದಿನದಿಂದ ದಿನಕ್ಕೆ ಎಸ್‌ಯುವಿಗಳು (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ - Suvs) ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಆಕರ್ಷಕ ವೈಶಿಷ್ಟ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ನವೆಂಬರ್ (2023) ತಿಂಗಳಲ್ಲಿ ಮಾರಾಟಗೊಂಡ ಟಾಪ್ 5 ಎಸ್‌ಯುವಿಗಳ ಬಗ್ಗೆ ವಿವರಿಸಿದ್ದೇವೆ.
ಮೊದಲಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ಬಗ್ಗೆ ತಿಳಿಯೋಣ. ನವೆಂಬರ್ ತಿಂಗಳು ಈ ಕಾರಿನ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತವಾಗಿದ್ದರೂ ಉತ್ತಮವಾಗಿ ಪ್ರಗತಿ ಸಾಧಿಸಲಾಗಿದೆ. ಒಟ್ಟು 14,916 ಯುನಿಟ್ ನೆಕ್ಸಾನ್ ಎಸ್‌ಯುವಿಗಳು ಸೇಲ್ ಆಗಿದ್ದು, 2022ಕ್ಕೆ ಹೋಲಿಸಿದರೆ (15,871 ಯುನಿಟ್) ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಶೇಕಡ -6% ಇಳಿಕೆಯಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇಂಧನ ಚಾಲಿತ ಮಾದರಿ ರೂ.8.10 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನೆಕ್ಸಾನ್ ಇವಿ ರೂ.14.74 ಲಕ್ಷದಿಂದ ರೂ.19.94 ಲಕ್ಷ ದರದಲ್ಲಿ ದೊರೆಯುತ್ತದೆ. ಇವು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಎರಡನೇ ಸ್ಥಾನದಲ್ಲಿ ಪ್ರಖ್ಯಾತ ಮೈಕ್ರೋ ಎಸ್‌ಯುವಿ ಟಾಟಾ ಪಂಚ್ (Tata Punch) ಇದ್ದು, ಕಳೆದ ನವೆಂಬರ್ ತಿಂಗಳು 14,383 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಹೋದ ವರ್ಷದ ಇದೇ ಅವಧಿಗೆ (12,131 ಯುನಿಟ್) ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 19% ಬೆಳವಣಿಗೆಯಾಗಿದೆ. ಟಾಟಾ ಪಂಚ್ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಗೆ ದೊರೆಯುತ್ತದೆ.

ಈ ಟಾಟಾ ಪಂಚ್, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್ ಹಾಗೂ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 18.8 - 20.09 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಒಳಗೊಂಡಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಮೂರನೇ ಸ್ಥಾನವನ್ನು ಮಾರುತಿ ಸುಜುಕಿ ಬ್ರೆಜ್ಜಾ (Maruti Suzuki Brezza) ಆವರಿಸಿಕೊಂಡಿದ್ದು, ನವೆಂಬರ್ (2023) ತಿಂಗಳು 13,393 ಯುನಿಟ್ ಬ್ರೆಜ್ಜಾ ಎಸ್‌ಯುವಿಗಳು ಮಾರಾಟವಾಗಿದ್ದು, ಹೋದ ವರ್ಷದ ಇದೇ ಅವಧಿಗೆ (11,324 ಯುನಿಟ್) ಹೋಲಿಕೆ ಮಾಡಿದರೆ ಶೇಕಡ 18% ಪ್ರಗತಿ ಕಂಡಿದೆ. ಈ ಕಾರು, ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಸರಣಿ ಎಸ್‌ಯುವಿಗಳು ಭರ್ಜರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಕಳೆದ ನವೆಂಬರ್ ತಿಂಗಳು 12,185 ಯುನಿಟ್ ಸೇಲ್ ಮಾಡಲಾಗಿದ್ದು, 2022ರ ಇದೇ ಅವಧಿಗೆ (6,455 ಯುನಿಟ್) ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 89% ಬೆಳವಣಿಗೆ ಸಾಧಿಸಲಾಗಿದೆ. ಸ್ಕಾರ್ಪಿಯೋ ಎನ್ ರೂ.13.26 ಲಕ್ಷದಿಂದ ರೂ.24.53 ಲಕ್ಷ, ಸ್ಕಾರ್ಪಿಯೋ ಕ್ಲಾಸಿಕ್ ರೂ.13.25 ಲಕ್ಷದಿಂದ ರೂ.17.06 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಐದನೇ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಇದ್ದು, ಅದೇಕೋ ಈ ಬಾರಿ ತೀವ್ರ ಹಿನ್ನೆಡೆ ಅನುಭವಿಸಿದೆ. ನವೆಂಬರ್ ತಿಂಗಳು 11,814 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಹೋದ ವರ್ಷದ ಇದೇ ಅವಧಿಗೆ (13,321 ಯುನಿಟ್) ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ -11% ನಷ್ಟ ಅನುಭವಿಸಿದೆ. ಈ ಕಾರು, ರೂ.10.87 ಲಕ್ಷದಿಂದ ರೂ.19.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.
ಉಳಿದಂತೆ ನಂತರದ ಸ್ಥಾನದಲ್ಲಿ ಕ್ರಮವಾಗಿ ಕಿಯಾ ಸೆಲ್ಟೋಸ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಫ್ರಾಂಕ್ಸ್ ಹ್ಯುಂಡೈ ಎಕ್ಸ್‌ಟರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಇದೆ. ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುವ ಹಿನ್ನೆಲೆ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಎಸ್‌ಯುವಿಗಳನ್ನು ಖರೀದಿಸಬಹುದು. ಅದರಲ್ಲೂ ಎರಡನೇ ಸ್ಥಾನದಲ್ಲಿರುವ ಟಾಟಾ ಪಂಚ್ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.


Click it and Unblock the Notifications








