Top 5 SUVs: ಭಾರತೀಯರಿಗೆ ಈ ಎಸ್‌ಯುವಿಗಳೇ ಇಷ್ಟವಂತೆ.. ಸಂಪೂರ್ಣ ಮಾಹಿತಿ

ಭಾರತದ ಕಾರು ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎಸ್‌ಯುವಿ ವಿಭಾಗವು ಸಾಕಷ್ಟು ಮುನ್ನೆಲೆಗೆ ಬರುತ್ತಿದೆ. ಬಹುತೇಕರು, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವುದರಿಂದ ಇವುಗಳನ್ನು ಖರೀದಿಸಲು ಬಯಸುತ್ತಾರೆ. ಕಳೆದ ಜೂನ್ ತಿಂಗಳು ಹ್ಯುಂಡೈ, ಟಾಟಾ ಹಾಗೂ ಮಾರುತಿ ಸುಜುಕಿ ಎಸ್‌ಯುವಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಮೊದಲಿಗೆ ಹ್ಯುಂಡೈ (Hyundai) ಕಂಪನಿಯ ಕ್ರೆಟಾ ಎಸ್‌ಯುವಿ ಬಗ್ಗೆ ಮಾತನಾಡೋಣ. ಇದಕ್ಕೆ ದೇಶದಲ್ಲಿ ಭಾರೀ ಬೇಡಿಕೆಯಿದ್ದು, ಜೂನ್ ತಿಂಗಳು (2023) ಕಂಪನಿ ಬರೋಬ್ಬರಿ 14,447 ಯುನಿಟ್ ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ (YoY) ಶೇಕಡ 4.8% ಪ್ರಗತಿ ಸಾಧಿಸಿದೆ. ಈ ಕಾರು, ರೂ.10.87 ಲಕ್ಷದಿಂದ ರೂ.19.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Top 5 SUVs: ಭಾರತೀಯರಿಗೆ ಈ ಎಸ್‌ಯುವಿಗಳೇ ಇಷ್ಟವಂತೆ.. ಸಂಪೂರ್ಣ ಮಾಹಿತಿ

ಐದು ಆಸನ ಹೊಂದಿರುವ ಹ್ಯುಂಡೈ ಕಂಪನಿಯ ಕ್ರೆಟಾ ಎಸ್‌ಯುವಿ, ಪೆಟೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 16.8 kmpl ಮೈಲೇಜ್ ನೀಡುತ್ತದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬ್ಯಾಗ್ ಪಡೆದಿದೆ.

ಟಾಟಾ (Tata) ಮಾರಾಟ ಮಾಡುವ ಸಬ್4 ಮೀಟರ್ ಎಸ್‌ಯುವಿ 'ನೆಕ್ಸನ್' ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಕಂಪನಿಯು ಹೋದ ತಿಂಗಳು 13,827 ಯುನಿಟ್ ಸೇಲ್ ಮಾಡಿ, ಕೊಂಚ ಹಿನ್ನೆಡೆ ಅನುಭವಿಸಿದೆ. 2022ರ ಇದೇ ಅವಧಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ 468 ಯುನಿಟ್ ನೆಕ್ಸನ್ ಎಸ್‌ಯುವಿ ಕಡಿಮೆ ಮಾರಿದ್ದು, ಶೇಕಡ 3.2% ಇಳಿಕೆ ಸಾಧಿಸಿದೆ.

Top 5 SUVs: ಭಾರತೀಯರಿಗೆ ಈ ಎಸ್‌ಯುವಿಗಳೇ ಇಷ್ಟವಂತೆ.. ಸಂಪೂರ್ಣ ಮಾಹಿತಿ

ಈ ಕಾರು, ರೂ.7.80 ಲಕ್ಷದಿಂದ ರೂ.14.50 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 24.07 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂರನೇ ಎಸ್‌ಯುವಿಯಾಗಿ ಹ್ಯುಂಡೈ ವೆನ್ಯೂ ಫೇಮಸ್ ಆಗಿದೆ. ಜೂನ್ (2023) ತಿಂಗಳಲ್ಲಿ 11,606 ಯುನಿಟ್‌ ಸೇಲ್ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 12.4% ಪ್ರಗತಿಯನ್ನು ಕಂಪನಿ ದಾಖಲು ಮಾಡಿದೆ. ಈ ಕಾರು, ರೂ.7.77 ಲಕ್ಷದಿಂದ ರೂ.13.18 ಲಕ್ಷ ದರದಲ್ಲಿ ಖರೀದಿಗೆ ದೊರೆಯುತ್ತದೆ. ಇದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ.

Top 5 SUVs: ಭಾರತೀಯರಿಗೆ ಈ ಎಸ್‌ಯುವಿಗಳೇ ಇಷ್ಟವಂತೆ.. ಸಂಪೂರ್ಣ ಮಾಹಿತಿ

ಟಾಟಾದ ಜನಪ್ರಿಯ ಮೈಕ್ರೋ ಎಸ್‌ಯುವಿಗಳಲ್ಲಿ ಪಂಚ್ ಒಂದಾಗಿದೆ. ಕಳೆದ ತಿಂಗಳು 10,990 ಯುನಿಟ್ ಸೇಲ್ ಮಾಡಿ, ಕಂಪನಿಯು ವರ್ಷದಿಂದ ವರ್ಷ (YoY)ಕ್ಕೆ ಶೇಕಡ 5.5% ಬೆಳವಣಿಗೆ ಸಾಧಿಸಿದೆ. ಈ ಕಾರು, ರೂ.6 ಲಕ್ಷದಿಂದ ರೂ.9.52 ಲಕ್ಷ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಪಂಚ್, 18.8 - 20.09 kmpl ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ (Maruti suzuki) ಸೇಲ್ ಮಾಡುವ ಪ್ರಮುಖ ಎಸ್‌ಯುವಿಗಳಲ್ಲಿ ಬ್ರೆಝಾ ಕೂಡ ಒಂದಾಗಿದ್ದು, ಜೂನ್ ತಿಂಗಳಲ್ಲಿ 10,578 ಯುನಿಟ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 140% ಪ್ರಗತಿಯನ್ನು ಕಂಪನಿ ಕಂಡಿದೆ. ಈ ಕಾರು, ರೂ.8.29 ಲಕ್ಷದಿಂದ ರೂ.14.14 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.

Article Published On: Saturday, July 15, 2023, 13:23 [IST]
English summary
Top 5 suvs sold in india june details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+