ಐಷಾರಾಮಿ ಕ್ಯಾಬಿನ್‌ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳು: ಟಾಟಾ, ಮಹೀಂದ್ರಾ..

ಪ್ರತಿಯೊಬ್ಬ ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ಕ್ಯಾಬಿನ್‌ ಹೊಂದಿರುವ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಟಾಟಾ ಮೋಟಾರ್ಸ್, ಮಹೀಂದ್ರಾ ಹಾಗೂ ಹ್ಯುಂಡೈ ಕಂಪನಿಗಳು ಅಂತಹ ಕಾರುಗಳು ಮಾರಾಟ ಮಾಡುತ್ತವೆ. ಭಾರತದ ಮಾರುಕಟ್ಟೆಯಲ್ಲಿ ರೂ.15 ಲಕ್ಷದೊಳಗೆ ಖರೀದಿಗೆ ಲಭ್ಯವಿರುವ ಟಾಪ್ 5 ಮಾದರಿಗಳ ಬಗ್ಗೆ ತಿಳಿಯೋಣ.

ಟಾಟಾ ಪಂಚ್: ಇದು ಐಷಾರಾಮಿ ಕ್ಯಾಬಿನ್‌ನೊಂದಿಗೆ ಕೈಗೆಟುಕುವ ಬೆಲೆಗೆ ದೊರೆಯುವ ಕಾರಾಗಿದ್ದು, ರೂ.5.99 ಲಕ್ಷದಿಂದ ರೂ.9.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಗ್ಲೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಆಕರ್ಷಕ ಸ್ಟೇರಿಂಗ್ ವೀಲ್ಸ್, 17.78 ಸೆಮೀ ಇನ್ಫೋಟೈನ್ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ಮ್ ಹಾಗೂ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕ್ರಾಶ್ ಅಲರ್ಟ್ ಸೇರಿದಂತೆ ಹೆಚ್ಚಿನ ಮಾಹಿತಿ ಒದಗಿಸಲಿದೆ.

ಐಷಾರಾಮಿ ಕ್ಯಾಬಿನ್‌ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳು: ಟಾಟಾ, ಮಹೀಂದ್ರಾ..

ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಂದಿದೆ. CNG ಕಿಟ್ ಹೊಂದಿರುವ ಕಾರು, 77 PS ಪವರ್ ಹಾಗೂ 97 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 18.8-20.09 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ XUV300: ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ತಯಾರಿಸುವ XUV300 ಎಸ್‌ಯುವಿ ರೂ.9.60 ಲಕ್ಷದಿಂದ ರೂ.13.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರು, ಆಕರ್ಷಕ ಕ್ಯಾಬಿನ್ ಒಳಗೊಂಡಿದ್ದು, ಡುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌, ಎಲೆಕ್ಟ್ರಿಕ್ ಸನ್‌ರೂಫ್, ಬ್ಲೂಟೂತ್ ಸಂಪರ್ಕಿತ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋ ಡಿಮ್ಮಿಂಗ್ IRVMs ಪಡೆದಿದೆ.

ಐಷಾರಾಮಿ ಕ್ಯಾಬಿನ್‌ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳು: ಟಾಟಾ, ಮಹೀಂದ್ರಾ..

ಈ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಪವರ್, 200 Nm ಪೀಕ್ ಟಾರ್ಕ್, 1.5- ಲೀಟರ್ ಡೀಸೆಲ್ ಎಂಜಿನ್ 117 PS ಪವರ್, 300 Nm ಪೀಕ್ ಟಾರ್ಕ್ ಹಾಗೂ 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ 130 PS ಪವರ್, 230 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ AMT ಗೇರ್ ಬಾಕ್ಸ್ ಪಡೆದಿದೆ.

ಸ್ಕೋಡಾ Kushaq: ಐಷಾರಾಮಿ ಕ್ಯಾಬಿನ್‌ ವಿನ್ಯಾಸ ಹೊಂದಿರುವ ಈ ಕಾರು, ರೂ.11.59 ಲಕ್ಷದಿಂದ ರೂ.19.69 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, ಐಕಾನಿಕ್ ಟು-ಸ್ಪೋಕ್ ಸ್ಟೀರಿಂಗ್ ವೀಲ್‌, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಕರ್ಷಕ ಸನ್‌ರೂಫ್, 10-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 17.2 - 19.2 kmpl ಮೈಲೇಜ್ ನೀಡಲಿದ್ದು, 1-ಲೀಟರ್ 3-ಸಿಲಿಂಡರ್ ಪೆಟ್ರೋಲ್, 1.5-ಲೀಟರ್ 4-ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿದೆ.

ಐಷಾರಾಮಿ ಕ್ಯಾಬಿನ್‌ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳು: ಟಾಟಾ, ಮಹೀಂದ್ರಾ..

ಮಹೀಂದ್ರಾ XUV700: ಇದು ರೂ.13.95 ಲಕ್ಷದಿಂದ ರೂ.23.59 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ದೊರೆಯಲಿದ್ದು, ಬೆಲೆಗೆ ತಕ್ಕಂತೆ ಉತ್ತಮ ಕ್ಯಾಬಿನ್ ವಿನ್ಯಾಸವನ್ನು ಪಡೆದಿದೆ. ದೊಡ್ಡದಾದ ಪನೋರಮಿಕ್ ಸನ್‌ರೂಫ್‌, ಎಲ್ಲರನ್ನು ತನ್ನತ್ತ ಆಕರ್ಷಿಸುವ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ 3D ಸೌಂಡ್ ಟೆಕ್ನಲಾಜಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 5 ಅಥವಾ 7 ಆಸನ ವ್ಯವಸ್ಥೆಯನ್ನು ಹೊಂದಿದ್ದು, ಗೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.

ಹ್ಯುಂಡೈ ಕ್ರೆಟಾ: ಭಾರತದ ಮಾರುಕಟ್ಟೆಯಲ್ಲಿ ರೂ.11.89 ಲಕ್ಷದಿಂದ ರೂ.18.34 ಬೆಲೆಯಲ್ಲಿ ಖರೀದಿಗೆ ದೊರೆಯುವ ಈ ಕಾರು, ಐಷಾರಾಮಿ ಕ್ಯಾಬಿನ್ ಹೊಂದಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸೆಂಟರ್ ಆರ್ಮ್‌ರೆಸ್ಟ್, ಆನ್‌ಬೋರ್ಡ್ ಏರ್ ಫಿಲ್ಟರೇಶನ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಹಾಗೂ ಆಂಬಿಯೆಂಟ್ ಲೈಟಿಂಗ್‌ ಅನ್ನು ಪಡೆದಿದೆ. ಹ್ಯುಂಡೈ ಕ್ರೆಟಾ 16.8 kmpl ಮೈಲೇಜ್ ನೀಡಲಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ.

Article Published On: Friday, March 10, 2023, 13:00 [IST]
English summary
Top cars under rs 15 lakh most luxurious cabins details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+