Bharat NCAP: ಭಾರತದಲ್ಲಿ ಈ ಜನಪ್ರಿಯ ಕಾರುಗಳು ಎಷ್ಟು ಸುರಕ್ಷಿತ? ಶೀಘ್ರದಲ್ಲೇ ಸಿಗುತ್ತಾ ಉತ್ತರ!

ಭಾರತದ ಕಾರು ಉತ್ಪಾದನಾ ಕಂಪನಿಗಳು ಇನ್ನು ಮುಂದೆ ತಮ್ಮ ಕಾರುಗಳನ್ನು ಸುರಕ್ಷತೆಯ ರೇಟಿಂಗ್‌ಗಾಗಿ ಗ್ಲೋಬಲ್‌ ಎನ್‌ಸಿಎಪಿಗೆ ಕಳುಹಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತದಲ್ಲೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಇತ್ತೀಚೆಗೆ ಚಾಲನೆ ನೀಡಿದ್ದಾರೆ.

ಸ್ವಂತ ಎನ್‌ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್‌, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್‌ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಬಹು ನಿರೀಕ್ಷೆಯ 'ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ಗೆ (NCAP) ಆ. 22ರಂದು ಚಾಲನೆ ಸಿಕ್ಕಿದೆ. ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಾವು BNCAP ನಲ್ಲಿ ನೋಡಲು ಬಯಸುವ ಏಳು ಜನಪ್ರಿಯ ಕಾರುಗಳಿವು.

Bharat NCAP

ಮಾರುತಿ ಫ್ರಾಂಕ್ಸ್: ಮಾರುತಿಯಿಂದ ಇತ್ತೀಚಿನ ಬಿಡುಗಡೆಯು ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಫ್ರಾಂಕ್ಸ್ ಮಾದರಿಯು ಹಿಂದೆ ಕ್ರ್ಯಾಶ್ ಟೆಸ್ಟ್ ಮಾಡಲಾದ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ ಮತ್ತು ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಹೊರಬಂದಿತು. ಆದರೆ ಹೊಸ ಮಾರುತಿ ಫ್ರಾಂಕ್ಸ್ ಕಾರಿನಲ್ಲಿ ಈಗ ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ವರೆಗೆ ಪಡೆಯುತ್ತದೆ, ಇವೆರಡೂ ಉತ್ತಮ ಸ್ಕೋರ್ ಸಾಧಿಸಲು ಸಹಾಯ ಮಾಡುತ್ತದೆ.

ಮಾರುತಿ ಗ್ರ್ಯಾಂಡ್ ವಿಟಾರಾ: ಹೊಸದಾಗಿ ಬಿಡುಗಡೆಯಾದ ಹೊಸ ಮಾರುತಿ ಗ್ರಾಂಡ್ ವಿಟಾರಾ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಶೀಘ್ರದಲ್ಲೇ ಕ್ರ್ಯಾಶ್ ಟೆಸ್ಟ್ ಮಾಡಲು ಹೊಂದಿಸಲಾಗಿರುವ BNCAP ನ 30 ಕಾರುಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ನಾವು ಬಯಸುತ್ತೇವೆ.

ಮಾರುತಿ ಡಿಜೈರ್ : ಈ ಮಾರುತಿ ಡಿಜೈರ್ ಸಾಮಾನ್ಯವಾಗಿ 10 ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿದೆ ಮತ್ತು ಪ್ರತಿ ತಿಂಗಳು ಸರಾಸರಿ 11,000 ಯುನಿಟ್‌ಗಳನ್ನು ಮಾರಾಟ ಮಾಡುತ್ತದೆ. ಮಾರುತಿ ಸ್ವಿಫ್ಟ್ ಅನ್ನು ಗ್ಲೋಬಲ್ ಎನ್‌ಸಿಎಪಿಯಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಲಾಯಿತು ಮತ್ತು ಕೇವಲ 1-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಹೊರಬಂದಿತು. ಇದು BNCAP ಕ್ರ್ಯಾಶ್-ಟೆಸ್ಟ್ ನಲ್ಲಿ ಎಷ್ಟು ರೇಟಿಂಗ್ ಅನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನೋಡಬೇಕಾಗಿದೆ.

ಮಹೀಂದ್ರಾ ಬೊಲೆರೊ: ಮಹೀಂದ್ರಾದಿಂದ ರಗಡ್ ಮತ್ತು ಬಾಕ್ಸಿ ಎಸ್‍ಯುವಿ ಸಹ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಮಹೀಂದ್ರಾ ತನ್ನ ಕಾರುಗಳ ಸುರಕ್ಷತೆಯನ್ನು ಸುಧಾರಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಮತ್ತು XUV700 ಮತ್ತು Scorpio N ಗಾಗಿ 5-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್‌ಗಳನ್ನು ಸಹ ಪಡೆದುಕೊಂಡಿದೆ. ಬೊಲೆರೊ ಕೂಡ ನಾವು ಇದೇ ರೀತಿಯ ಸುರಕ್ಷತಾ ರೇಟಿಂಗ್ ಅನ್ನು ನಿರೀಕ್ಷಿಸುತ್ತಿದ್ದೇವೆ.

ಹ್ಯುಂಡೈ ಎಕ್ಸ್‌ಟರ್: ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಇತ್ತೀಚಿನ ಮಾಡೆಲ್, ಹ್ಯುಂಡೈ ಎಕ್ಸ್‌ಟರ್ , ಈಗಾಗಲೇ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಗೆ ದಾರಿ ಮಾಡಿಕೊಟ್ಟಿದೆ. ಈ ಮೈಕ್ರೋ ಎಸ್‍ಯುವಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡೀತು. ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ನಂತಹ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ. ಭಾರತ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಎಕ್ಸ್‌ಟರ್ ಪಲಿತಾಂಶ ನೋಡಲು ಆಸಕ್ತಿದಾಯಕವಾಗಿದೆ.

ಟೊಯೋಟಾ ಇನೋವಾ ಕ್ರಿಸ್ಟಾ: ಇದನ್ನು ಮೊದಲು ಕ್ರ್ಯಾಶ್ ಟೆಸ್ಟ್ ಮಾಡಲಾಗಿದೆ, ಆದರೆ ASEAN NCAP ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಹೊರಬಂದಿದೆ. ಈ ಕಾರಿನಲ್ಲಿ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಹೋಲ್ಡ್ ಅಸಿಸ್ಟ್, ಬ್ರೇಕ್ ಅಸಿಸ್ಟ್ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ಬರುತ್ತದೆ.ಭಾರತ್ NCAP ಕ್ರ್ಯಾಶ್ ಟೆಸ್ಟ್ನಲ್ಲಿ ಎಷ್ಟು ಸುರಕ್ಷತಾ ರೇಟಿಂಗ್ ಪಡೆಯುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ.

ಹ್ಯುಂಡೈ ವೆನ್ಯೂ: ಈ ಹ್ಯುಂಡೈ ವೆನ್ಯೂ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಜನಪ್ರಿಯ ಸಬ್-4 ಮೀಟರ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಆಸ್ಟ್ರೇಲಿಯನ್ NCAP ನಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಲಾಗಿದೆ, ಅಲ್ಲಿ ಇದು 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ, ಆದರೆ ಅದರ ಭಾರತ-ಸ್ಪೆಕ್ ಆವೃತ್ತಿಯನ್ನು ಇನ್ನೂ ಕ್ರ್ಯಾಶ್ ಟೆಸ್ಟ್ ಮಾಡಲಾಗಿಲ್ಲ. ಅದು ಭಾರತೀಯ ಮಾರುಕಟ್ಟೆಯಲ್ಲಿ ಅದೇ ರೀತಿ ಉತ್ತಮ ರೇಟ್ ಪಡೆಯಹುದೇ ಎಂಬುದನ್ನು ಕಾದು ನೋಡಬೇಕಿದೆ.

Article Published On: Friday, August 25, 2023, 13:39 [IST]
English summary
Top cars we want to see undergoing bharat ncap crash test details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+