ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು! ನಿಮ್ಮ ಕಾರು ಈ ಪಟ್ಟಿಯಲ್ಲಿದೆಯೇ ನೋಡಿ

ದೇಶದಲ್ಲಿ ಹೆಚ್ಚಿನ ಜನರು ಕಾರು ಖರೀದಿಸುವಾಗ ಮೈಲೇಜ್, ಫೀಚರ್‌ಗಳು, ನಿರ್ವಹಣಾ ವೆಚ್ಚ ಮತ್ತು ವಿನ್ಯಾಸಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದೇ ರೀತಿ ಕಾರಿನ ರಿಸೇಲ್ ವ್ಯಾಲ್ಯೂಗೂ ಆದ್ಯತೆ ನೀಡುತ್ತಾರೆ. ಯಾಕೆಂದರೆ ಕಾರು ನಂತರ ಮಾರಾಟ ಮಾಡುವಾಗ ನಷ್ಟವಾಗಬಾರದು ಎಂಬ ಕಾರಣಕ್ಕೆ ರಿಸೇಲ್ ವ್ಯಾಲ್ಯೂ ಅನ್ನು ಪರಿಗಣಿಸುತ್ತಾರೆ.

ವರ್ಷಗಳು ಕಳೆದಂತೆ ಹೊಸ ತಂತ್ರಜ್ಙಾನಗಳೊಂದಿಗೆ ಕಾರುಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಆಗ ತಮ್ಮ ಹಳೆಯ ಕಾರನ್ನು ಮಾರಟ ಮಾಡಿ ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಇದರಿಂದ ಕಾರು ಖರೀದಿಸುವಾಗಲೇ ರಿಸೇಲ್ ವ್ಯಾಲ್ಯೂಗೂ ಹೊತ್ತು ನೀಡಿ ಕಾರು ಖರೀದಿಸುತ್ತಾರೆ. ಇದರಿಂದ ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳ (Cars) ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Resale Value Cars

ಹೋಂಡಾ ಸಿಟಿ: ಹೋಂಡಾ ಸಿಟಿ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕವಾದ ಸೆಡಾನ್ ಕಾರ್ ಆಗಿದೆ. ಸೆಡಾನ್ ವಿಭಾಗದಲ್ಲಿ ಜನಪ್ರಿಯ ಸಿಟಿ ಕಾರಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೋಂಡಾ ಪ್ರಯತ್ನಿಸುತ್ತಿದೆ. ಹೋಂಡಾ ಸಿಟಿ ಸಾಕಷ್ಟು ಫೀಚರ್ಸ್-ಲೋಡ್ ಸೆಡಾನ್ ಆಗಿದ್ದು, ಇದರಲ್ಲಿ ಲೆದರ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್, ಪ್ಯಾಡ್ಡ್ ಡೋರ್ ಪ್ಯಾಡ್‌ಗಳು, ಆಟೋ-ಡಿಮ್ಮಿಂಗ್ IRVM, ಎಲೆಕ್ಟ್ರಿಕಲ್ ಆಪರೇಟೆಡ್ ಮತ್ತು ಫೋಲ್ಡಬಲ್ ORVM ಗಳು ಮತ್ತು 8" ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.

ಈ ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರಿನಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 bhp ಪವರ್ ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Resale Value Cars

ಮಹೀಂದ್ರಾ ಸ್ಕಾರ್ಪಿಯೊ: ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಜನಪ್ರಿಯ ಎಸ್‍ಯುವಿಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ ಮಹೀಂದ್ರಾ ಸ್ಕಾರ್ಪಿಯೊ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ವರ್ಷಗಳ ಕಾಲ ಪ್ರಬಲವಾಗಿದೆ. ಅದರ ವಿಶಿಷ್ಟವಾದ ಬಾಕ್ಸಿ ಸೌಂದರ್ಯ ಮತ್ತು ಪ್ರಾಯೋಗಿಕತೆಯು ಅದನ್ನು ನೆಚ್ಚಿನವರನ್ನಾಗಿ ಮಾಡಿದೆ. ವಿಶೇಷವಾಗಿ ಭಾರತದ ರಾಜಕೀಯ ವರ್ಗದಲ್ಲಿ, ಅದರ ಬೇಡಿಕೆ ಮತ್ತು ಸಾಮಾಜಿಕ ಮೌಲ್ಯವನ್ನು ಹೆಚ್ಚಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಬಯಸುವವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಸ್ಮಾರ್ಟ್ ಆಯ್ಕೆಯಾಗಿದೆ. ಈ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಜನಸಾಮಾನ್ಯರಲ್ಲಿ ವ್ಯಾಪಕವಾದ ಜನಪ್ರಿಯತೆ ಗಳಿಸಿದೆ. ಈ ಕಾರಿನ ವಿನ್ಯಾಸ ಮತ್ತು ವೈಯಕ್ತಿಕ ಬಳಕೆಯ ಜನಪ್ರಿಯತೆಯು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅದರ ಸ್ಥಾನಮಾನವನ್ನು ಮತ್ತಷ್ಟು ಭದ್ರಪಡಿಸುತ್ತದೆ.

Resale Value Cars

ಟೊಯೊಟಾ ಇನ್ನೋವಾ ಕ್ರಿಸ್ಟಾ: ಇದು ವಿಶೇಷವಾಗಿ ಟ್ರಾವೆಲ್ ಕಂಪನಿಗಳಲ್ಲಿ ಆದ್ಯತೆಯ ಯುಟಿಲಿಟಿ ವಾಹನವಾಗಿದೆ. ಈ ಎಂಪಿವಿಯು ಆಕರ್ಷಕ ವಿನ್ಯಾಸಗಳು, ಸೌಕರ್ಯಗಳು ಮತ್ತು ಶಕ್ತಿಯುತ ಎಂಜಿನ್ ಅನ್ನು ನೀಡುತ್ತದೆ. ಈ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಜಿಎಕ್ಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಮೂರು ರೂಪಾಂತರಗಳ ಆಯ್ಕೆಗಳಲ್ಲಿ ಲಭ್ಯವಿದೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು.

ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದೇ ಕಾರಣದಿಂದ ಟೊಯೊಟಾ ಕಂಪನಿಯು ಡೀಸೆಲ್ ಎಂಜಿನ್ ನೊಂದಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮರಳಿ ತಂದಿದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಲುಕ್ ಹೆಚ್ಚಾಗಿ ಬದಲಾಗದೆ ಉಳಿದಿದೆ, ಈ ಹೊಸ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Resale Value Cars

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 20, 2023, 19:13 [IST]
English summary
Top cars with high resale value in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+