CNG Cars: ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ಭರ್ಜರಿ ಮೈಲೇಜ್, ಕಡಿಮೆ ಬೆಲೆಗೆ ಸಿಗುವ ಸಿಎನ್‌ಜಿ ಕಾರುಗಳು

ಹೆಚ್ಚುತ್ತಿರುವ ಇಂಧನ ಬೆಲೆ, ವಾಯು ಮಾಲಿನ್ಯ ಮತ್ತು ವಾಹನಗಳ ಅಧಿಕ ಇನ್‌ಪುಟ್ ವೆಚ್ಚಗಳ ಸಮಸ್ಯೆಗಳಿಂದ ವಾಹನ ತಯಾರಕರು ಪರಿಸರ ಸ್ನೇಹಿ ವಾಹನಗಳತ್ತ ಹೆಚ್ಚಿನ ಗಮನಹರಿಸುತ್ತಿದೆ, ಈ ಸಮಸ್ಯೆಗಳಿಗೆ ತಕ್ಷಣದ ಪರಿಹಾರವೆಂಬಂತೆ ವಾಹನ ತಯಾರಕರು ಸಿಎನ್‌ಜಿ ಮಾದರಿಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಸಿಎನ್‌ಜಿ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಸಿಎನ್‌ಜಿ ಮಾದರಿಗಳು ಪರಿಸರ ಸ್ನೇಹಿ ಮತ್ತು ಸುಧಾರಿತ ಮೈಲೇಜ್ ಅನ್ನು ನೀಡುತ್ತದೆ, ಇತ್ತೀಚಿನ ಏರಿಕೆಗಳ ನಂತರ ಭಾರತದಾದ್ಯಂತ ಸಿಎನ್‌ಜಿ ಬೆಲೆಗಳನ್ನು ನಿರ್ವಾಹಕರು 10 ಪ್ರತಿಶತದಷ್ಟು ಕಡಿತಗೊಳಿಸಿದ್ದಾರೆ.ಸಿಎನ್‌ಜಿ ಕಾರಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಾರು ಉತ್ಪಾದನಾ ಕಂಪನಿಗಳು ಸಹ ತಮ್ಮ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಭಾರತದಲ್ಲಿ ಕಗೆಟುಕುವ ಬೆಲೆಯ ಸಿಎನ್‌ಜಿ ಕಾರುಗಳ ಮಾಹಿತಿ ಇಲ್ಲಿದೆ.

Most Affordable CNG Cars

ಮಾರುತಿ ಆಲ್ಟೋ 800: ಮಾರುತಿ ಸುಜುಕಿಯ ಚಿಕ್ಕ ಹ್ಯಾಚ್‌ಬ್ಯಾಕ್ ಆಲ್ಟೊ 800 ಭಾರತದಲ್ಲಿ ಮಾರಾಟವಾಗುವ ಸಿಎನ್‌ಜಿ ಕಾರುಗಳಲ್ಲಿ ಅತ್ಯಂತ ಅಗ್ಗವಾಗಿದೆ. ಕಟ್ಟುನಿಟ್ಟಾದ BS-6 ಹಂತ 2 ಎಮಿಷನ್ ಮಾನದಂಡಗಳಿಂದಾಗಿ ಕಾರು ತಯಾರಕರು ಇತ್ತೀಚೆಗೆ ಆಲ್ಟೋ 800 ಮಾದರಿಯ ಪೆಟ್ರೋಲ್-ಮಾತ್ರ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಿದರೂ, ಸ್ಟಾಕ್‌ಗಳು ಇರುವವರೆಗೆ ಆಲ್ಟೊ 800 CNG ಅನ್ನು ಖರೀದಿಸಬಹುದು.

ಮಾರುತಿ ಆಲ್ಟೋ 800 ಸಿಎನ್‌ಜಿ ಕಾರಿನ ಪ್ರಾರಂಭಿಕ ಬೆಲೆಯು ಎಕ್ಶ್ ಶೋರೂಂ ಪ್ರಕಾರ ರೂ. 5.13 ಲಕ್ಷವಾಗಿದೆ. ಈ ಮಾರುತಿ ಆಲ್ಟೊ 800 ಸಿಎನ್‌ಜಿ ಪ್ರತಿ ಕೆಜಿಗೆ 30 ಕಿ.ಮೀ ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಇದು ಎಲ್ಲಾ ಇತರ ಸಿಎನ್‌ಜಿ ಕಾರುಗಳಲ್ಲಿ ಅತ್ಯಧಿಕವಾಗಿದೆ. ಪವರ್ ಡೆಲಿವರಿ ಅಂಕಿ ಅಂಶದ ಬಗ್ಗೆ ಹೇಳುವುದಾದರೆ, ಈ ಕಾರು 40 bhp ಪವರ್ ಮತ್ತು 60 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರುತಿ ಎಸ್-ಪ್ರೆಸ್ಸೊ ಸಿಎನ್‌ಜಿ; ಕೇವಲ ರೂ.6 ಲಕ್ಷಕ್ಕಿಂತ ಕಡಿಮೆ ಬೆಲೆಯ (ಎಕ್ಸ್ ಶೋರೂಂ) ಎಸ್-ಪ್ರೆಸ್ಸೊ ಸಿಎನ್‌ಜಿ ಕಿಟ್‌ಗಳನ್ನು ಬಳಸುತ್ತದೆ. ಎಸ್-ಪ್ರೆಸ್ಸೊದ ಸಿಎನ್‌ಜಿ ಆವೃತ್ತಿಯು LXi ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರು 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 56 bhp ಪವರ್ ಮತ್ತು 82 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಎಸ್-ಪ್ರೆಸ್ಸೊ ಸಿಎನ್‌ಜಿ ಮಾದರಿಗಳು ಪ್ರತಿ ಕೆಜಿಗೆ 32 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುತ್ತವೆ.

ಮಾರುತಿ ಆಲ್ಟೋ ಕೆ10: ಪ್ರಸ್ತುತ ಮಾರುತಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್ ಅನ್ನು ಕಳೆದ ವರ್ಷ ಮಾರುತಿಯ S-CNG ತಂತ್ರಜ್ಞಾನವನ್ನು ಬಿಡುಗಡೆ ಮಾಡಲಾಗಿತ್ತು. ಆಲ್ಟೋ ಕೆ10 ಕಾರಿನಲ್ಲಿ 1.0-ಲೀಟರ್ K10 ಸೀರಿಸ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 56 bhp ಮತ್ತು 82 Nm ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಕೆಜಿಗೆ ಸುಮಾರು 34 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.96 ಲಕ್ಷವಾಗಿದೆ.

ಮಾರುತಿ ವ್ಯಾಗನ್ಆರ್: ಈ ಬಾಕ್ಸಿ ಹ್ಯಾಚ್‌ಬ್ಯಾಕ್‌ನ CNG ಆವೃತ್ತಿಯನ್ನು ಸಹ ಆಯ್ಕೆ ಮಾಡಬಹುದು, ಇದು ದೇಶದ ಅತ್ಯಂತ ಜನಪ್ರಿಯ ಸಣ್ಣ ಕಾರು ಮಾದರಿಗಳಲ್ಲಿ ಒಂದಾಗಿದೆ. ಇದು ಆಲ್ಟೊ ಕೆ10, ಸೆಲೆರಿಯೊ ಮತ್ತು ಇತರ ಮಾದರಿಗಳಿಗೆ ಬಳಸಲಾಗುವ ಅದೇ 1.0-ಲೀಟರ್ ಕೆ ಸರಣಿಯ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ವ್ಯಾಗನ್ಆರ್ ಮಾದರಿಯಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿವೆ

ಇದು 1.0 ಲೀಟರ್ ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರ ಬೇಡಿಕೆ ಅನುಸಾರವಾಗಿ ಸಿಎನ್‌ಜಿ ಮಾದರಿಯಲ್ಲಿ ವಿಶೇಷವಾಗಿ ಎಲ್ಎಕ್ಸ್ಐ ಸಿಎನ್‌ಜಿ ಟೂರ್ ಹೆಚ್3 ಎನ್ನುವ ವೆರಿಯೆಂಟ್ ಅಭಿವೃದ್ದಿಪಡಿಸಿದೆ. 1.2 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಕಂಪನಿಯು ಈ ಬಾರಿಗೆ ಹೊಸದಾಗಿ ಜೆಡ್ಎಕ್ಸ್ಐ ಮಾದರಿಯನ್ನು ಪರಿಚಯಿಸಿದೆ,

ಟಾಟಾ ಟಿಯಾಗೊ iCNG: ಟಾಟಾದ ಚಿಕ್ಕ ಹ್ಯಾಚ್‌ಬ್ಯಾಕ್ ಈಗ ಪ್ರಸ್ತುತ ಹೊಂದಿರುವ ಅತ್ಯಂತ ಒಳ್ಳೆ ಸಿಎನ್‌ಜಿ ಆಯ್ಕೆಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 1.2-ಲೀಟರ್ ಎಂಜಿನ್ ಅನ್ನು ಹೊಂದಿದ್ದು, 72 bhp ಪವರ್ ಮತ್ತು 95 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾ ಟಿಯಾಗೊ iCNG ಕಾರಿನಲ್ಲಿ 26.49 ಕಿ.ಮೀ ಮೈಲೇಜ್ ನಿಡುತ್ತದೆ. ಟಾಟಾ ಟಿಯಾಗೊ iCNG ಕಾರಿನ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.6.44 ಲಕ್ಷವಾಗಿದೆ.

Article Published On: Saturday, April 15, 2023, 11:21 [IST]
English summary
Top most affordable cng cars details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+