ಭಾರತದಲ್ಲಿ ಈ ವರ್ಷ ಬಿಡುಗಡೆಗೊಂಡು ಬಿರುಗಾಳಿ ಎಬ್ಬಿಸಿದ ಎಸ್‍ಯುವಿಗಳಿವು...

ಈ ವರ್ಷದ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯು ಕಾರುಗಳು ಬಿಡುಗಡೆಯಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರು ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಬಿಡುಗಡೆಗೊಂಡು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡು ಹೊಸ ಸಂಚಲನ ಸೃಷ್ಟಿಸಿದ ಎಸ್‍ಯುವಿಗಳ (Suvs) ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೋಂಡಾ ಎಲಿವೇಟ್: ಈ ವರ್ಷ ಬಿಡುಗಡೆಗೊಂಡ ಹೋಂಡಾ ಎಲಿವೇಟ್ ಎಸ್‌ಯುವಿ SV, V, VX ಮತ್ತು ZX ಎಂಬಟ್ರಿಮ್ ಹಂತಗಳಲ್ಲಿ ಲಭ್ಯವಿದೆ. 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ. ಈ ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 119.4 bhp ಪವರ್ ಮತ್ತು 145 Nm ಟಾರ್ಕ್ ಉತ್ಪಾದಿಸುತ್ತದೆ.

SUVs

ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ.ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಮಾರುತಿ ಜಿಮ್ನಿ: ಮಾರುತಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯೊಂದಿಗೆ ಹೊಸ ಕ್ರಾಂತಿ ಮಾಡುತ್ತಿದೆ. ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದ ಜಿಮ್ನಿ ಕೂಡ ಭಾರತೀಯ ವಾಹನ ಪ್ರೇಮಿಗಳ ಮನ ಗೆದ್ದಿದೆ.

SUVs

ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿದೆ.

ಹ್ಯುಂಡೈ ಎಕ್ಸ್‌ಟರ್: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಮೈಕ್ರೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಹ್ಯುಂಡೈ ಎಕ್ಸ್‌ಟರ್ ಕಾರು ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಇವು EX, EX(O), S, S(O), SX, SX(O) ಮತ್ತು SX(O) ಆಗಿದೆ.

SUVs

ಎಕ್ಸ್‌ಟರ್ ಕಾರಿನಲ್ಲಿ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ರೂಪದಲ್ಲಿ, ಹುಂಡೈ ಎಕ್ಸ್‌ಟರ್‌ನ ಎಂಜಿನ್ 81.8 bhp ಪವರ್ ಮತ್ತು 113.8 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸ್‌ಟರ್ ಕಾರಿನ CNG ಆವೃತ್ತಿಯು 67.7 bhp ಪವರ್ ಮತ್ತು 95.2 Nm ನ್ನು ಉತ್ಪಾದಿಸುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ.

SUVs

ಈ ಫ್ರಾಂಕ್ಸ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗಿದೆ.

More from DriveSpark

Article Published On: Thursday, December 21, 2023, 16:32 [IST]
English summary
Top new suvs launched in 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+