Top Cars: ಜನಮೆಚ್ಚಿದ ಕಾರು ಮಾರುತಿ ಸುಜುಕಿ ವ್ಯಾಗನ್ಆರ್.. ಫುಲ್ ಡೀಟೇಲ್ಸ್
ದೇಶೀಯ ಕಾರು ಮಾರುಕಟ್ಟೆಯಲ್ಲಿ ತಿಂಗಳ ಆರಂಭದಲ್ಲಿ ಸಂತೋಷದ ವಾತಾವರಣವಿರುತ್ತದೆ. ಈ ಅವಧಿಯಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಸೇಲ್ಸ್ ಅಂಕಿ ಅಂಶವನ್ನು ಪ್ರಕಟಿಸುತ್ತವೆ. ಇದನ್ನು ಆಧರಿಸಿಯೇ ವಿವಿಧ ಕಂಪನಿಗಳು ತಮ್ಮ ಮಾರಾಟ ಕಾರ್ಯತಂತ್ರವನ್ನು ರೂಪಿಸುತ್ತವೆ. ಸದ್ಯ, ಜೂನ್ ತಿಂಗಳ (2023) ಸೇಲ್ಸ್ ರಿಪೋರ್ಟ್ ಪ್ರಕಟಗೊಂಡಿದೆ.
ಆ ವರದಿ ಪ್ರಕಾರ, ವಹಿವಾಟಿನಲ್ಲಿ ಮಾರುತಿ ಸುಜುಕಿಯ 'ವ್ಯಾಗನ್ಆರ್' ಕಾರಿನ ಮಾರಾಟ ಪ್ರಮಾಣ ಕುಸಿತ ಕಂಡಿದ್ದರೂ ಬೇರೆಲ್ಲ ಕಂಪನಿ ಮಾದರಿಗಳಿಗೆ ಹೋಲಿಸಿದರೆ, ಜನಮೆಚ್ಚಿದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂನ್ ತಿಂಗಳಲ್ಲಿ (2023) 17,481 ಯುನಿಟ್ ವ್ಯಾಗನ್ಆರ್ ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (19,190 ಯುನಿಟ್) ಶೇಕಡ -9% ಕುಸಿತ ಕಂಡಿದೆ. ಆದರೂ ಹೇರಳವಾಗಿ ಇಳಿಕೆ ಕಂಡಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ವ್ಯಾಗನ್ಆರ್ ರೂ.5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿರುವ ಕಾರು, 23.56 - 25.19 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ವ್ಯಾಗನ್ಆರ್ ಬಳಿಕ, ಭಾರತದಲ್ಲಿ ಸ್ವಿಫ್ಟ್ ಕಾರು, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಜೂನ್ (2023)ನಲ್ಲಿ 15,955 ಯುನಿಟ್ ಮಾರಾಟವಾಗಿದ್ದು, ಕಳೆದ ವರ್ಷದ ಅದೇ ಸಮಯದಲ್ಲಿ 16,213 ಯುನಿಟ್ ಸೇಲ್ ಮಾಡಿತ್ತು. ಹೋಲಿಕೆ ಮಾಡಿದಾಗ, ವರ್ಷದಿಂದ ವರ್ಷಕ್ಕೆ (YoY) ಕೇವಲ -2% ಅಷ್ಟೇ ಕುಸಿತ ಕಂಡಿದೆ.

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ CNG ಹೊಂದಿರುವ ಕಾರು, 22.38 - 22.56 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ, ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಫೀಚರ್ಚ್ ಪಡೆದಿದೆ.
ಹುಂಡೈ ಕಂಪನಿ 'ಕ್ರೆಟಾ' ಕಾರಿಗೆ ದಿಢೀರನೇ ಜನಪ್ರಿಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಕಂಪನಿ 14,447 ಯುನಿಟ್ ಕ್ರೆಟಾ ಎಸ್‌ಯುವಿ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ 5% ಬೆಳವಣಿಗೆ ಸಾಧಿಸಿದೆ. 2022ರ ಜೂನ್ ತಿಂಗಳಲ್ಲಿ 13,790 ಕಾರುಗಳನ್ನು ಸೇಲ್ ಮಾಡಿತ್ತು. ಮಾರುತಿ ಸುಜುಕಿಯ ಬಹುಬೇಡಿಕೆಯ ಬಲೆನೊ ಕಾರಿನ ಮಾರಾಟ ಕುಸಿತ ಕಂಡಿದ್ದು, ಕಂಪನಿಯು 14,077 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, -13% ಹಿನ್ನೆಡೆ ಅನುಭವಿಸಿದೆ.

ಟಾಟಾ ಕಂಪನಿ ಜನಮೆಚ್ಚಿದ ಕಾರುಗಳಲ್ಲಿ 'ನೆಕ್ಸಾನ್' ಎಸ್‌ಯುವಿ ಪ್ರಮುಖವಾಗಿದ್ದರೂ, ಜೂನ್ ತಿಂಗಳಲ್ಲಿ (2023) 13,827 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (13,827 ಯುನಿಟ್) ಕೇವಲ -3% ಅಷ್ಟೇ ಇಳಿಕೆ ಕಂಡಿದೆ. ಹುಂಡೈ ಮಾತ್ರ ವೆನ್ಯೂ ಕಾರಿನ ಮಾರಾಟದಲ್ಲಿ ಉತ್ತಮ ಪ್ರಗತಿಯನ್ನು ಕಂಡಿದ್ದು, ಜೂನ್ ತಿಂಗಳಲ್ಲಿ 11,606 ಯುನಿಟ್ ಮಾರಿ, ಶೇಕಡ 12% ಬೆಳವಣಿಗೆ ಸಾಧಿಸಿದೆ.
ಇನ್ನುಳಿದಂತೆ ಜೂನ್ ತಿಂಗಳ ಟಾಪ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಆಲ್ಟೊ, ಟಾಟಾ ಪಂಚ್, ಮಾರುತಿ ಸುಜುಕಿ ಬ್ರೆಝಾ ಹಾಗೂ ಗ್ರ್ಯಾಂಡ್ ವಿಟಾರಾ ಕಾರುಗಳು ಸ್ಥಾನ ಪಡೆದಿವೆ. ಈ ಪಟ್ಟಿಯನ್ನು ಗಮನಿಸಿದಾಗ ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಹೆಚ್ಚಿನ ಭಾರತೀಯ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ಸುಲಭವಾಗಿ ಹೇಳಬಹುದು. ಆದರೂ, ವ್ಯಾಗನ್ಆರ್ ಮಾರಾಟ ಪ್ರಮಾಣ ಒಂದಷ್ಟು ಕುಸಿದಿರುವುದು ಬೇಸರದ ಸಂಗತಿಯಾಗಿದೆ.


Click it and Unblock the Notifications