Toyota: ಟೊಯೊಟಾದ ಇನ್ನೋವಾ ಕಾರಿಗೆ ಭಾರೀ ಜನಪ್ರಿಯತೆ.. ಮತ್ತೊಮ್ಮೆ ಸಾಬೀತು!

ಭಾರತದಲ್ಲಿ ಟೊಯೊಟಾ (Toyota) ಕಾರುಗಳು ಪ್ರತಿಯೊಬ್ಬರ ಅಚ್ಚುಮೆಚ್ಚಿನ ವಾಹನವಾಗಿವೆ. ಕಂಪನಿಯ ಇನ್ನೋವಾ, ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಫಾರ್ಚುನರ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಸದ್ಯ, ಜುಲೈ ತಿಂಗಳಲ್ಲಿಯು ಟೊಯೊಟಾ ವಾಹನಗಳು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಮೊದಲಿಗೆ ಕಂಪನಿಯ ಬಹುಬೇಡಿಕೆಯ ಇನ್ನೋವಾ ಎಂಪಿವಿ ಬಗ್ಗೆ ಮಾತನಾಡೋಣ. 'ಇನ್ನೋವಾ ಹೈಕ್ರಾಸ್' ಕಾರಿನ ಎಲ್ಲ ರೂಪಾಂತರಗಳು ಈ ಜುಲೈ ತಿಂಗಳಲ್ಲಿಯು ಸುಮಾರು 12 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ಅಂದರೆ, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು ಅಷ್ಟು ಸಮಯ ಕಾಯಲೇಬೇಕು. ಬಹುತೇಕ ಜೂನ್ ತಿಂಗಳಲ್ಲೂ ಇದೇ ರೀತಿಯ ಕಾಯುವಿಕೆ ಸಮಯ ಇತ್ತು.

Toyota: ಟೊಯೊಟಾದ ಇನ್ನೋವಾ ಬಿಟ್ರೆ, ಮತ್ಯಾವ ಕಾರಿಗೂ ಇದು ಸಾಧ್ಯವಿಲ್ಲ!

ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯುವ 'ಇನ್ನೋವಾ ಕ್ರಿಸ್ಟಾ'ದ VX ಹಾಗೂ GX ರೂಪಾಂತರಗಳು 12 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ಎಂಟ್ರಿ ಲೆವೆಲ್ ZX ರೂಪಾಂತರ ಕೇವಲ 5 ರಿಂದ 6 ತಿಂಗಳಲ್ಲಿ ವಿತರಣೆಯಾಗಲಿದೆ. ಈ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ, ರೂ.19.99 ಲಕ್ಷದಿಂದ ರೂ.25.43 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಇನ್ನೋವಾ ಹೈಕ್ರಾಸ್ ಕಾರಿನ ಬಗ್ಗೆ ಹೇಳುವುದಾದರೆ, ಇದು ರೂ.18.55 ಲಕ್ಷದಿಂದ ರೂ.29.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪ್ರಮುಖವಾಗಿ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 21 kmpl ಮೈಲೇಜ್ ನೀಡುತ್ತದೆ.

Toyota: ಟೊಯೊಟಾದ ಇನ್ನೋವಾ ಬಿಟ್ರೆ, ಮತ್ಯಾವ ಕಾರಿಗೂ ಇದು ಸಾಧ್ಯವಿಲ್ಲ!

ಟೊಯೊಟಾದ 'ಅರ್ಬನ್ ಕ್ರೂಸರ್ ಹೈರೈಡರ್' ಎಸ್‌ಯುವಿಯು ದೊಡ್ಡ ಮಟ್ಟದಲ್ಲಿ ಬೇಡಿಕೆ ಹೊಂದಿದೆ. ಇದರ, ಹೈಬ್ರಿಡ್ ರೂಪಾಂತರಗಳಾದ S, G ಹಾಗೂ Vಯನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 12 ತಿಂಗಳು ಕಾಯಬೇಕು. ಮೈಲ್ಡ್ ಹೈಬ್ರಿಡ್ ವೇರಿಯೆಂಟ್ 'E' 8 ರಿಂದ 10 ತಿಂಗಳೊಳಗೆ ಡಿಲೆವರಿಯಾಗಲಿದೆ. ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದಿರುವ S ಹಾಗೂ G ರೂಪಾಂತರಗಳು 4 - 5 ತಿಂಗಳ ಕಾಯುವಿಕೆ ಬಳಿಕ ಸಿಗಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ, ದೇಶೀಯ ಮಾರುಕಟ್ಟೆಯಲ್ಲಿ ರೂ.10.73 - 19.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 19.39 - 27.97 kmpl ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಟೊಯೊಟಾ ಗ್ಲಾನ್ಜಾದ ಬಹುತೇಕ ಎಲ್ಲ ರೂಪಾಂತರಗಳು 4 ರಿಂದ 6 ವಾರ ಕಾಯುವಿಕೆ ಅವಧಿಯನ್ನು ಹೊಂದಿವೆ. 'S' ಆಟೋಮೆಟಿಕ್ ಟ್ರಾಸ್ಮಿಷನ್ ಹಾಗೂ 'V' ಆಟೋಮೆಟಿಕ್ ಟ್ರಾಸ್ಮಿಷನ್ ರೂಪಾಂತರ 5 ರಿಂದ 6 ತಿಂಗಳೊಳಗೆ ವಿತರಣೆಯಾಗಲಿದೆ. CNG ರೂಪಾಂತರಗಳು 4 ವಾರ 6 ಕಾಯುವಿಕೆ ಸಮಯ ಪಡೆದಿವೆ. ಈ ಕಾರು, ರೂ.6.71 ಲಕ್ಷದಿಂದ ರೂ.10 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟೊಯೊಟಾ ಫಾರ್ಚುನರ್ ಕಾರು, ರೂಪಾಂತರಗಳಿಗೆ ಅನುಗುಣವಾಗಿ 4 ತಿಂಗಳೊಳಗೆ ವಿತರಣೆಯಾಗಲಿದೆ. ಇದು, ರೂ.32.59 ಲಕ್ಷದಿಂದ ರೂ. 50.34 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇನ್ನು, ಜೂನ್ ತಿಂಗಳಲ್ಲಿ (2023) ಟೊಯೊಟಾ ಕಂಪನಿ 18,237 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (16,500 ಯುನಿಟ್) ವರ್ಷದಿಂದ ವರ್ಷಕ್ಕೆ 10.5% ಪ್ರಗತಿ ಸಾಧಿಸಿರುವುದು ಗಮನಾರ್ಹ ಅಂಶವಾಗಿದೆ.

Article Published On: Tuesday, July 4, 2023, 12:13 [IST]
English summary
Toyota cars waiting period july full details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+