ಹೊಸ ಇಂಧನದೊಂದಿಗೆ ಬರಲಿದೆ ಟೊಯೊಟಾ ಫಾರ್ಚುನರ್: ಪ್ರಯಾಣ ದರ ಅಗ್ಗ

ಟೊಯೊಟಾ ಫಾರ್ಚುನರ್ (Toyota Fortuner) ಭಾರತದಲ್ಲಿ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಜನಪ್ರಿಯ ಎಸ್‍ಯುವಿಯಾಗಿದೆ. ಇದೀಗ ಟೊಯೊಟಾ ಮೋಟಾರ್ ತನ್ನ ಜನಪ್ರಿಯ ಫಾರ್ಚುನರ್ ಎಸ್‍ಯುವಿಯನ್ನು ಫ್ಲೆಕ್ಸ್‌-ಇಂಧನದ ಆವೃತ್ತಿಯಲ್ಲಿ ಗೈಕಿಂಡೋ ಇಂಡೋನೇಷ್ಯಾ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಪರಿಚಯಿಸಿದೆ. ಫಾರ್ಚುನರ್ ಫ್ಲೆಕ್ಸ್‌-ಇಂಧನದ ಎಸ್‌ಯುವಿಯನ್ನು ಬಿಳಿ ಮತ್ತು ಹಸಿರು ಬಾಹ್ಯ ಟೋನ್‌ನಲ್ಲಿ ಪ್ರದರ್ಶಿಸಿದ್ದಾರೆ.

ಟೊಯೊಟಾ ಫಾರ್ಚುನರ್ ಫ್ಲೆಕ್ಸ್‌-ಫ್ಯುಯೆಲ್ E-100 ಎಂದು ಕರೆಯಲ್ಪಡುವ ಫಾರ್ಚುನರ್ ಮಾದರಿಯನ್ನು ಪ್ರದರ್ಶಿಸಿದ್ದಾರೆ. ಬಯೋಇಥೆನಾಲ್ ಇಂಧನದಲ್ಲಿ ಸಂಪೂರ್ಣವಾಗಿ ಚಲಿಸಬಲ್ಲ ಫ್ಲೆಕ್ಸ್-ಇಂಧನ ಎಂಜಿನ್ ಅನ್ನು ಹೊಂದಿದೆ. ಫ್ಲೆಕ್ಸ್-ಇಂಧನ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ 2.7-ಲೀಟರ್ DOHC ಡ್ಯುಯಲ್ VVT-i ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ. ಈ ಎಂಜಿನ್ 161 bhp ಪವರ್ ಮತ್ತು 243 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Toyota Fortuner

ಈ ಎಂಜಿನ್ ಅನ್ನು 5-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹೈಬ್ರಿಡ್ ವಾಹನಗಳನ್ನು ಉತ್ತೇಜಿಸಲು ಪರ್ಯಾಯ ಇಂಧನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಾರು ತಯಾರಕರಲ್ಲಿ ಟೊಯೊಟಾ ಮೋಟಾರ್ ಕೂಡ ಸೇರಿದೆ. ಭಾರತದಲ್ಲಿ, ಕಾರು ತಯಾರಕರು ಇತ್ತೀಚೆಗೆ ಮೊದಲ ಫ್ಲೆಕ್ಸ್-ಇಂಧನ ಆಧಾರಿತ ಮಾದರಿ ಕೊರೊಲ್ಲಾ ಆಲ್ಟಿಸ್ ಅನ್ನು ಪರಿಚಯಿಸಿದರು. ಜಪಾನಿನ ಆಟೋ ದೈತ್ಯ ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಸಾಗುತ್ತಿದ್ದಾರೆ.

ಈ ಫಾರ್ಚುನರ್ ಪ್ರಸ್ತುತ ಮೂಲಮಾದರಿ ಹಂತದಲ್ಲಿದ್ದರೆ, ಟೊಯೊಟಾ ಈಗಾಗಲೇ ಭಾರತದಲ್ಲಿ ಫ್ಲೆಕ್ಸ್-ಇಂಧನ ವಾಹನಗಳ ಪರೀಕ್ಷೆಗಳನ್ನು ನಡೆಸುತ್ತಿದೆ. 2022ರ ಅಕ್ಟೋಬರ್ ತಿಂಗಳಿನಲ್ಲಿ ಟೊಯೋಟಾ ಭಾರತದಲ್ಲಿ ಕೊರೊಲ್ಲಾ ಆಲ್ಟಿಸ್ ಹೈಬ್ರಿಡ್ ಅನ್ನು ಫ್ಲೆಕ್ಸ್-ಇಂಧನ-ಚಾಲಿತ ಕಾರುಗಳನ್ನು ಪರೀಕ್ಷಿಸಲು ಪ್ರಾಯೋಗಿಕ ಯೋಜನೆಯಾಗಿ ಪ್ರದರ್ಶಿಸಿತು . ಪ್ರದರ್ಶಿಸಲಾದ ಮಾದರಿಯು ಎಥೆನಾಲ್-ಮಿಶ್ರಿತ ಇಂಧನವನ್ನು (E85) ಬಳಸಲು ಟ್ಯೂನ್ ಮಾಡಲಾಗಿದೆ, ಮತ್ತು ಬ್ರ್ಯಾಂಡ್‌ಗೆ ತಂತ್ರಜ್ಞಾನ ಪ್ರದರ್ಶಕವಾಗಿದೆ.

Toyota Fortuner

ಇನ್ನು ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಕಂಡು ಹಿಡಿಯುವ ಕೆಲಸ ಹೀಗಾಗಲೇ ನಡೆಯುತ್ತಿದೆ. ಪೆಟ್ರೋಲ್ ಜಾಗಕ್ಕೆ ಇಥೆನಾಲ್ ಬರಬಹುದು. ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಫ್ಲೆಕ್ಸ್ ಫ್ಯೂಯೆಲ್ ಇಂಜಿನ್ (flex-fuel engines) ಅನ್ನು ಮಾರುಕಟ್ಟೆಗೆ ತರಲಿದೆ. ಇಂಥ ಪರ್ಯಾಯ ಇಂಧನ ಅಟೋಮೊಬೈಲ್ ಉದ್ಯಮಕ್ಕೆ ಅನಿವಾರ್ಯ ಎನ್ನಲಾಗಿದೆ. ಫ್ಲೆಕ್ಸ್ ಫ್ಯೂಯೆಲ್ ಅಂದರೆ, ಫ್ಲೆಕ್ಸಿಬಲ್ ಇಂಧನ (Flexible Fuel) ಎಂದರ್ಥವಾಗಿದೆ.

ಅದು ಕೂಡ ಪೆಟ್ರೋಲ್‌ ಇಂಧನ ಬಳಸಿ ಚಲಿಸುವಂತಹ ಮಾದರಿಯ ಇಂಜಿನ್‌ ಆಗಿದೆ. ಆದರೆ, ಈ ಇಂಜಿನ್‌ ಎಥೆನಾಲ್‌ ಬಳಸಿಯೂ ಕಾರ್ಯನಿರ್ವಹಿಸಲಿದೆ. ಎಥೆನಾಲ್‌ ಮತ್ತು ಪೆಟ್ರೋಲ್‌ ಎರಡರ ಮಿಶ್ರಣದಲ್ಲಿಯೂ ಕಾರ್ಯನಿರ್ವಹಿಸಲಿದೆ.ಫ್ಲೆಕ್ಸ್ ಇಂಧನ ವಾಹನಗಳು ಅಷ್ಟೇ ಮುಖ್ಯ, ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ. ಬ್ರೆಸಿಲ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿ ಫ್ಲೆಕ್ಸ್ ಇಂಧನ ತಂತ್ರಜ್ಞಾನವು ವ್ಯಾಪಕವಾಗಿ ಬಳಕೆಯಲ್ಲಿದೆ.

ಇನ್ನು ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‍ಯುವಿಯು ಟೂ ವ್ಹೀಲ್ ಡ್ರೈವ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳ ಆಯ್ಕೆಗಳನ್ನು ಹೊಂದಿವೆ.

ಟೊಯೊಟಾ ಫಾರ್ಚೂನರ್ ಎಸ್‍ಯುವಿಯ ಟಾಪ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಡ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್‌ಲಾಕ್‌) ಮತ್ತು ಎಮರ್ಜನ್ಸಿ ಬ್ರೇಕ್ ಸಿಗ್ನಲ್‌ನಂತಹ ಸಾಕಷ್ಟು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

Article Published On: Wednesday, August 16, 2023, 11:36 [IST]
English summary
Toyota fortuner flex fuel debuts in giias 2023 details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+