ಭರ್ಜರಿ ಮೈಲೇಜ್‌ನೊಂದಿಗೆ ಧೂಳಿಬ್ಬಿಸಲು ರೆಡಿಯಾಗುತ್ತಿದೆ ಟೊಯೊಟಾ ಫಾರ್ಚೂನರ್
ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪ್ರತಿ ತಿಂಗಳು ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಭಾರತದಲ್ಲಿ ಹಲವು ವರ್ಷಗಳಿಂದ ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಮಾರಾಟವಾಗುತ್ತಿದೆ.
ಟೊಯೊಟಾ ಸೌತ್ ಆಫ್ರಿಕಾವು ಫಾರ್ಚುನರ್ ಮತ್ತು ಹಿಲಕ್ಸ್ ಅನ್ನು ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. 2024 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲು ನಿರ್ಧರಿಸಲಾಗಿದೆ, ಮುಂಬರುವ ಮಾದರಿಗಳು ಹೊಸ ಪ್ಲಾಟ್‌ಫಾರ್ಮ್ ಅನ್ನು ಪಡೆಯುತ್ತವೆ ಎಂದು ವರದಿಯಾಗಿದೆ. ಹಳೆಯ IMV ಪ್ಲಾಟ್‌ಫಾರ್ಮ್ ಅನ್ನು ಬದಲಾಯಿಸಲಾಗುತ್ತದೆ. ಈ ಮಾದರಿಗಳ ಬಿಡುಗಡೆಯು ಆರಂಭದಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಲ್ಲಿ ನಡೆಯಲಿದೆ.

ನಂತರ ಹಂತದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ, ಮುಂಬರುವ ಫಾರ್ಚುನರ್ ಮತ್ತು ಹೈಲಕ್ಸ್ ಕಂಪನಿಯ ಸುಧಾರಿತ TNGA-F ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ, ಇದು ಲ್ಯಾಂಡ್ ಕ್ರೂಸರ್ 300 ಮತ್ತು ಲೆಕ್ಸಸ್ LX500d ನಂತಹ ದೊಡ್ಡ ಮತ್ತು ಹೆಚ್ಚು ಪ್ರೀಮಿಯಂ ಮಾದರಿಗಳಲ್ಲಿ ಕಂಡುಬರುತ್ತದೆ. ಹೊಸ ಪ್ಲಾಟ್‌ಫಾರ್ಮ್‌ನ ಬಳಕೆಯು ಕಾರುಗಳು ICE ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಸಂಯೋಜಿಸಲು ಅನುವು ಮಾಡಿಕೊಡುತ್ತದೆ.
ಟೊಯೊಟಾ ಫಾರ್ಚೂನರ್ ಮತ್ತು ಹೈಲಕ್ಸ್ ಎಸ್‍ಯುವಿಗಳಲ್ಲಿ 2.8-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ನೀಡುವ ಸಾಧ್ಯತೆಯಿದೆ. ಈ ಎಂಜಿನ್ ಅನ್ನು ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಫಾರ್ಚುನರ್ ಅಥವಾ ಹೈಲಕ್ಸ್ ಮಾದರಿಗಳು ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಗಳನ್ನು ಸ್ವೀಕರಿಸುತ್ತವೆಯೇ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಹೊಸ ಫಾರ್ಚುನರ್ ಮತ್ತು ಹೈಲಕ್ಸ್ ಮಾದರಿಗಳು ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ.
ಸ್ತುತ, ಟೊಯೊಟಾ ದೇಶದಲ್ಲಿ ಅರ್ಬನ್ ಕ್ರೂಸರ್ ಹೈರೈಡರ್‌ನ ಕಾಯುವ ಅವಧಿಯನ್ನು ಕಡಿಮೆ ಮಾಡುವಲ್ಲಿ ತೊಡಗಿಸಿಕೊಂಡಿದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಇನ್ನು ಕಳೆದ ಬಾರಿ, ಟೊಯೋಟಾ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು ಮತ್ತು ಇದು ಕ್ಲಾಸ್-ಲೀಡಿಂಗ್ 7-ಸೀಟರ್ ಎಸ್‍ಯುವಿಯ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿತು. ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು.
ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಬೆಲೆಗಳಲ್ಲಿನ ಹೆಚ್ಚಳವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಈ ಇನ್ನು ಫಾರ್ಚುನರ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ.
ಇದರಲ್ಲಿ ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ. ಈ ಎಸ್‍ಯುವಿಯ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿವೆ. ಇನ್ನು ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತ್ತು.
ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.


Click it and Unblock the Notifications