ಟೊಯೊಟಾ ಫಾರ್ಚುನರ್ ಎಸ್‍ಯುವಿಗೆ ಭಾರೀ ಡಿಮ್ಯಾಂಡ್: ಇದಕ್ಕೆ ಮತ್ತಷ್ಟು ಕಾಯಬೇಕು
ಫುಲ್ ಸೈಜ್ ಎಸ್‌ಯುವಿ (Full Size Suv) ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪ್ರತಿ ತಿಂಗಳ ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿದೆ. ಈ ನಡುವೆ ಟೊಯೊಟಾ ತನ್ನ ಟೊಯೊಟಾ ಫಾರ್ಚೂನರ್ (Toyota Fortuner) ಎಸ್‍ಯುವಿಯ ಕಾಯುವಿಕೆಯ ಅವಧಿ ಬಹಿರಂಗವಾಗಿದೆ.
ಟೊಯೊಟಾ ಫಾರ್ಚುನರ್ ಖರೀದಿಸುವ ಗ್ರಾಹಕರು ಬುಕಿಂಗ್ ದಿನಾಂಕದಿಂದ 12 ವಾರಗಳವರೆಗೆ ಕಾಯಬೇಕಾಗುತ್ತದೆ. ಇದು ಪ್ರದೇಶ, ರಾಜ್ಯ, ಡೀಲರ್‌ಶಿಪ್, ರೂಪಾಂತರ, ಬಣ್ಣ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ. ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

7-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಅನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ. ಟೊಯೊಟಾ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು. ಈ ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು.
ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಬೆಲೆಗಳಲ್ಲಿನ ಹೆಚ್ಚಳವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಈ ಫಾರ್ಚುನರ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ.
ಇದರಲ್ಲಿ ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ. ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಹೊಂದಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಕೂಡ ಹೊಂದಿದೆ.
ಈ ಎಸ್‍ಯುವಿಯ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿವೆ. ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ.
ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಈ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.
ಟೊಯೊಟಾ ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು ಎಂದು ಕರೆಯಲಾಗುತ್ತದೆ. ಈ ಎಸ್‍ಯುವಿ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications