Toyota: ಟೊಯೊಟಾದ ಈ ಹೊಸ ಕಾರನ್ನು ಬೇಗನೆ ನಿಮ್ಮ ಮನೆಗೆ ತರಬಹುದು, 30 ಕಿ.ಮೀ ಮೈಲೇಜ್.. ರೂ.6 ಲಕ್ಷ ಬೆಲೆ

ಭಾರತದಲ್ಲಿ ಟೊಯೊಟಾಗೆ (Toyota) ಪತ್ಯೇಕ ಅಭಿಮಾನಿ ಬಳಗವಿದ್ದು, ಕಂಪನಿಯ ಇನ್ನೋವಾ ಕ್ರಿಸ್ಟಾ, ಹೈಕ್ರಾಸ್, ರೂಮಿಯನ್ ಎಂಪಿವಿಗಳು ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ಇವುಗಳ ಕೆಲವೊಂದು ರೂಪಾಂತರಗಳನ್ನು ಗ್ರಾಹಕರು ಈ ದಿನ ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು 1 ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ.

ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ 1 ಡಿಸೆಂಬರ್ 2023ಕ್ಕೆ ಅನ್ವಯವಾಗುವಂತೆ ಕಂಪನಿಯ ವಿವಿಧ ಮಾದರಿಗಳ ಕಾಯುವ ಅವಧಿ (Waiting Period) ಕುರಿತ ಮಾಹಿತಿಯನ್ನು ಪ್ರಕಟಿಸಿದೆ. ಅದರಲ್ಲೂ ಕಂಪನಿಯ ಆರಂಭಿಕ ಮಾದರಿಯಾಗಿರುವ ಗ್ಲಾನ್ಜಾ (Glanza), ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ವಿತರಣೆಯಾಗುತ್ತದೆ.

Toyota: ಟೊಯೊಟಾದ ಈ ಹೊಸ ಕಾರನ್ನು ಬೇಗನೆ ನಿಮ್ಮ ಮನೆಗೆ ತರಬಹುದು, 30 ಕಿ.ಮೀ ಮೈಲೇಜ್.. ರೂ.6 ಲಕ್ಷ ಬೆಲೆ

ಟೊಯೊಟಾ ಗ್ಲಾನ್ಜಾದ ಮ್ಯಾನುವಲ್ ಹಾಗೂ ಆಟೋಮೆಟಿಕ್ ಆವೃತ್ತಿಗಳನ್ನು ಖರೀದಿದಾರರೂ ಇವತ್ತು ಬುಕ್ಕಿಂಗ್ ಮಾಡಿದರೂ ಸರಿಯಾಗಿ 1 ತಿಂಗಳ ನಂತರ ಡೆಲೆವರಿಯಾಗುತ್ತವೆ. ಇದು ಕಂಪನಿಯ ಇತರೆ ಕಾರುಗಳಿಗೆ ಹೋಲಿಕೆ ಮಾಡಿದರೆ, ಅತ್ಯಂತ ಅಲ್ಪಾವಧಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೊಸ ಟೊಯೊಟಾ ಗ್ಲಾನ್ಜಾ ರೂ.6.81 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20 ಹಾಗೂ ಟಾಟಾ ಆಲ್ಟ್ರೋಜ್ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಈ ಟೊಯೊಟಾ ಗ್ಲಾನ್ಜಾ ಇ, ಎಸ್, ಜಿ, ಹಾಗೂ ವಿ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ಜೊತೆಗೆ ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್ ಮತ್ತು ಇನ್‌ಸ್ಟಾ ಬ್ಲೂ ಬಣ್ಣಗಳೊಂದಿಗೂ ದೊರೆಯುತ್ತದೆ.

Toyota: ಟೊಯೊಟಾದ ಈ ಹೊಸ ಕಾರನ್ನು ಬೇಗನೆ ನಿಮ್ಮ ಮನೆಗೆ ತರಬಹುದು, 30 ಕಿ.ಮೀ ಮೈಲೇಜ್.. ರೂ.6 ಲಕ್ಷ ಬೆಲೆ

ಟೊಯೊಟಾ ಗ್ಲಾನ್ಜಾ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಲಭ್ಯವಿದೆ. ಇದರ 1.2 - ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಸಿಎನ್‌ಜಿ ಆವೃತ್ತಿಯೂ ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 77.5 PS ಪವರ್ ಹೊರಹಾಕಲಷ್ಟೇ ಶಕ್ತವಾಗಿದ್ದು, 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಗ್ಲಾನ್ಜಾ ಪೆಟ್ರೋಲ್ ರೂಪಾಂತರಗಳು 22.35 - 22.94 kmpl, ಸಿಎನ್‌ಜಿ ವೇರಿಯೆಂಟ್ಸ್ 30.61 km/kg ಮೈಲೇಜ್ ನೀಡುತ್ತವೆ.

Toyota: ಟೊಯೊಟಾದ ಈ ಹೊಸ ಕಾರನ್ನು ಬೇಗನೆ ನಿಮ್ಮ ಮನೆಗೆ ತರಬಹುದು, 30 ಕಿ.ಮೀ ಮೈಲೇಜ್.. ರೂ.6 ಲಕ್ಷ ಬೆಲೆ

5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಟೊಯೊಟಾ ಗ್ಲಾನ್ಜಾ, ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್ - ಅಪ್ ಡಿಸ್ಪ್ಲೇ, 360 - ಡಿಗ್ರಿ ಕ್ಯಾಮೆರಾ, ಹಿಂಭಾಗದ ಎಸಿ ವೆಂಟ್ಸ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್ಸ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.

ಇನ್ನು, ಟೊಯೊಟಾ ಕಂಪನಿಯ ಇತರೆ ಕಾರುಗಳಿಗೆ ಹೋಲಿಸಿದರೆ ಗ್ಲಾನ್ಜಾವೇ ಅಲ್ಪ ಕಾಯುವಿಕೆ ಅವಧಿಯನ್ನು ಹೊಂದಿರುವುದು. ಈ ಕಾರು ತುಂಬಾ ಕಡಿಮೆ ಬೆಲೆಯಲ್ಲಿ ಸಿಕ್ಕರೂ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿರುವದರಿಂದ ಹೆಚ್ಚಿನ ಗ್ರಾಹಕರ ಫೆವರೇಟ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬರುವ ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುವುದರಿಂದ ಗ್ಲಾನ್ಜಾಗೆ ಮತ್ತಷ್ಟು ಬೇಡಿಕೆ ಬಂದರೂ ಅಚ್ಚರಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 13, 2023, 17:48 [IST]
English summary
Toyota glanza december 2023 waiting period revealed 30 km mileage rs 6 lakh price
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+