Toyota: ಇನ್ನೋವಾ ಗ್ರಾಹಕರೇ... ತಿಂಗಳಾರಂಭದಲ್ಲೇ ಟೊಯೊಟಾದಿಂದ ದಿಢೀರ್ ಶಾಕ್!

ದೇಶದಲ್ಲಿ ಟೊಯೊಟಾ (Toyota) ಮಾರಾಟ ಮಾಡುವ ಇನ್ನೋವಾ ಸರಣಿ ಎಂಪಿವಿಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಪ್ರಸ್ತುತ, ಕಂಪನಿಯು ಇನ್ನೋವಾ ಕ್ರಿಸ್ಟಾ (Innova Crysta) ಕಾರಿನ ಬೆಲೆಯನ್ನು ಏರಿಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಇನ್ನೋವಾ ಕ್ರಿಸ್ಟಾ ಎಂಪಿವಿಯ ಆಯ್ದ ರೂಪಾಂತರಗಳ ಬೆಲೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿದೆ. ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ರೂ.19.99 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ, 5 ಬಣ್ಣಗಳು ಹಾಗೂ 3 ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಒಂದಷ್ಟು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ.

Toyota: ತಿಂಗಳಾರಂಭದಲ್ಲೇ ಟೊಯೊಟಾದಿಂದ ದಿಢೀರ್ ಶಾಕ್!

ಟೊಯೊಟಾ ಇನ್ನೋವಾ ಕ್ರಿಸ್ಟಾ ZX ರೂಪಾಂತರದ ಬೆಲೆ ರೂ.37,000 ಹೆಚ್ಚಳವಾಗಿದ್ದು, ಎಕ್ಸ್ ಶೋರೂಂ ದರ ರೂ.26.05 ಲಕ್ಷಕ್ಕೆ ತಲುಪಿದೆ. ಅದೇ ರೀತಿಯಲ್ಲಿ 7 - 8 ಆಸನ ಹೊಂದಿರುವ VX ವೇರಿಯೆಂಟ್ ಬೆಲೆ ರೂ.35,000 ಏರಿಕೆಯಾಗಿದ್ದು, ಕ್ರಮವಾಗಿ ರೂ.24.39 ಲಕ್ಷ ಹಾಗೂ ರೂ.24.44 ಲಕ್ಷ ದರವಿದೆ. ಆದರೆ, ಎಂಟ್ರಿ ಲೆವೆಲ್ GX ರೂಪಾಂತರ ಯಾವುದೇ ರೀತಿಯಲ್ಲಿ ಬೆಲೆ ಹೆಚ್ಚಳವನ್ನು ಪಡೆದುಕೊಂಡಿಲ್ಲ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ, 2.4 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Toyota: ತಿಂಗಳಾರಂಭದಲ್ಲೇ ಟೊಯೊಟಾದಿಂದ ದಿಢೀರ್ ಶಾಕ್!

ಈ ಇನ್ನೋವಾ ಕ್ರಿಸ್ಟಾ ಕಾರು, ಯುವ ಗ್ರಾಹಕರನ್ನು ಆಕರ್ಷಿಸಿವ ಹತ್ತು ಹಲವು ವೈಶಿಷ್ಟ್ಯವನ್ನು ಹೊಂದಿದೆ. ಪ್ರಮುಖವಾಗಿ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 8 ವೇ ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ರೇರ್ ಎಸಿ ವೆಂಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಅತ್ಯುತ್ತಮವಾಗಿದ್ದು, 7 ಏರ್‌ಬ್ಯಾಗ್ಸ್, ABS (ಆಂಟಿಲಾಕಿಂಗ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಬ್ರೇಕ್ ಅಸಿಸ್ಟ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ. ಇನ್ನೋವಾ ಕ್ರಿಸ್ಟಾಗೆ ಮಹೀಂದ್ರಾ ಮರಾಜ್ಜೊ ಮತ್ತು ಕಿಯಾ ಕ್ಯಾರೆನ್ಸ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇದರೊಟ್ಟಿಗೆ ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಬಗ್ಗೆ ಮಾತನಾಡುವುದಾದರೆ, ಇದು ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಮತ್ತು ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 21 kmpl ಮೈಲೇಜ್ ನೀಡುತ್ತದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಟೊಯೊಟಾ, ದೇಶದಲ್ಲಿ ತನ್ನ ಇನ್ನೋವಾ ಸರಣಿ ಕಾರುಗಳಿಗಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಬೇಗನೇ ಗ್ರಾಹಕರಿಗೆ ತಲುಪಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಅದಕ್ಕಾಗಿ, ಕಂಪನಿಯು ಕರ್ನಾಟಕದ ಬಿಡದಿಯಲ್ಲಿರುವ ತನ್ನ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ವಾರ್ಷಿಕ ಶೇಕಡ 32% ಹೆಚ್ಚಿಸಿದ್ದು, ವರ್ಷವೊಂದಕ್ಕೆ 33,000 ಯುನಿಟ್ ವಾಹನಗಳನ್ನು ಹೆಚ್ಚುವರಿಯಾಗಿ ತಯಾರಿಸಲಿದೆ. ಜೊತೆಗೆ ಕಂಪನಿಯು ಕಾರು ಮಾರಾಟದಲ್ಲೂ ಉತ್ತಮ ಪ್ರಗತಿಯನ್ನು ಸಾಧಿಸಿದೆ.

ಇನ್ನು, ಇನ್ನೋವಾ ಕ್ರಿಸ್ಟಾ ಕಾರಿನ ವಿವಿಧ ರೂಪಾಂತರಗಳ ಬೆಲೆ ಏರಿಕೆಯಾಗಿದೆ. ಆದರೆ, ಕೊಂಚ ಮಟ್ಟಿಗೆ ಆಗಿರುವುದು ಗ್ರಾಹಕರಿಗೆ ನೆಮ್ಮದಿ ತಂದಿದೆ. ದರ ಏರಿಕೆಗೆ ಕಾರಣವೇನು ಎಂಬುದನ್ನು ಟೊಯೊಟಾ ಬಹಿರಂಗಪಡಿಸಿಲ್ಲ. ಈ ಇನ್ನೋವಾ ಕಾರುಗಳು, ದಶಕಗಳಿಂದ ಭಾರತದ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದ್ದು, ಮುಂದೆಯೂ ಅದು ಮುಂದರಿಯಲಿದೆ. ಇನ್ನೋವಾ ಕ್ರಿಸ್ಟಾ ಎಂಪಿವಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು.

Article Published On: Tuesday, August 1, 2023, 14:59 [IST]
English summary
Toyota innova crysta prices hiked india details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+