ಟೊಯೋಟಾ-ಸುಜುಕಿ ಪಾಲುದಾರಿಕೆಯಲ್ಲಿ ಸಣ್ಣ ಎಲೆಕ್ಟ್ರಿಕ್ SUV: ಇನ್ನೊಂದೇ ವರ್ಷದಲ್ಲಿ ಪಾದಾರ್ಪಣೆ
ಟೊಯೊಟಾ-ಸುಜುಕಿ ಪಾಲುದಾರಿಕೆಯು ಕೇವಲ ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದೀಗ ಮುಂಬರುವ ವರ್ಷಗಳಲ್ಲಿ (ಅಂದಾಜು 2025) ಎರಡೂ ಕಂಪನಿಗಳ ಪಾಲುದಾರಿಕೆಯಲ್ಲಿ ಸಣ್ಣ ಎಲೆಕ್ಟ್ರಿಕ್ ಕಾರು ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಟೊಯೊಟಾ ಮತ್ತು ಸುಜುಕಿಯ ಪಾಲುದಾರಿಕೆಯು ಇಲ್ಲಿಯವರೆಗೆ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹೆಚ್ಚು ಯಶಸ್ವಿಯಾಗಿದೆ. ಜಪಾನಿನ ಈ ಎರಡೂ ಕಂಪನಿಗಳ ಕಾರು ತಯಾರಕರು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರರ ಸಾಮರ್ಥ್ಯದ ಮೇಲೆ ಹೆಚ್ಚು ಹೊಸ ಮಾದರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಟೊಯೋಟಾ ಇತ್ತೀಚೆಗೆ ತನ್ನ EV ತಂತ್ರದೊಂದಿಗೆ ಎಲ್ಲವನ್ನು ಪಡೆದುಕೊಂಡಿದೆ.

ಈ ಮೂಲಕ ಸುಜುಕಿಯೊಂದಿಗೆ ಕೈಜೋಡಿಸಿ ಸಣ್ಣ SUV ಅನ್ನು ಸಹ-ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಇದು ಟೊಯೋಟಾ bZ ಸ್ಮಾಲ್ ಕ್ರಾಸ್‌ಓವರ್ ಕಾನ್ಸೆಪ್ಟ್‌ನ ಉತ್ಪಾದನಾ ಕಾರಾಗಿರಬಹುದಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇದನ್ನು 2025 ರಲ್ಲಿ ಪರಿಚಯಿಸಬಹುದು ಎನ್ನಲಾಗಿದೆ.
ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಟೊಯೋಟಾ ತನ್ನ ತವರು ಮಾರುಕಟ್ಟೆಯಲ್ಲಿ ಮುಂಬರುವ ಸಣ್ಣ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಭವಿಷ್ಯದ ಇವಿ ಮಾರುಕಟ್ಟೆಯನ್ನು ಆಳುವ ಗುರಿಯನ್ನು ಹೊಂದಿದೆ. ಹೆಚ್ಚಿನ ಮಾರಾಟ ಮತ್ತು ಅವುಗಳನ್ನು ಯುರೋಪ್ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯಗೊಳಿಸಲು ನೋಡುತ್ತಿದೆ.

ಟೊಯೋಟಾ ಈ bZ ಸ್ಮಾಲ್ ಕ್ರಾಸ್ಒವರ್ ಕಾನ್ಸೆಪ್ಟ್ ಕಾರನ್ನು ಎರಡು ವರ್ಷಗಳ ಹಿಂದೆ 14 ಇತರ ಟೊಯೋಟಾ ಮತ್ತು ಲೆಕ್ಸಸ್ ಪರಿಕಲ್ಪನೆಗಳೊಂದಿಗೆ ಪ್ರದರ್ಶಿಸಿತ್ತು. ಈಗ ಈ ಕಾರಿನ ಅಭಿವೃದ್ಧಿಗಾಗಿ ಸುಜುಕಿಯ ಸಹಾಯ ಪಡೆಯಲು ಕೂಡ ಕಾರಣವಿದೆ. ಏನೆಂದರೆ, ಸಣ್ಣ ಕಾರುಗಳನ್ನು ಅಭಿವೃದ್ಧಿಪಡಿಸುವಲ್ಲಿ ಅದರ ಪರಿಣತಿಯನ್ನು ಪರಿಗಣಿಸಿ ಸುಜುಕಿಯನ್ನು ಪಾಲುದಾರರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೇ ಈ ಎರಡು ಕಂಪನಿಗಳ ಯಶಸ್ವಿ ಪಾಲುದಾರಿಕೆಯ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆಯಾ ಕಂಪನಿಗಳಿಗೆ ಹಲವಾರು ಮಾರುಕಟ್ಟೆಗಳಲ್ಲಿ ಸ್ಕೇಲ್, ಬ್ಯಾಡ್ಜ್ ಎಂಜಿನಿಯರಿಂಗ್, ತಂತ್ರಜ್ಞಾನ ಹಂಚಿಕೆ ಮತ್ತು ಮಾರಾಟದ ಪ್ರಮಾಣವನ್ನು ಹೆಚ್ಚಿಸುವ ಆರ್ಥಿಕತೆಯನ್ನು ಸಾಧಿಸುವಲ್ಲಿ ಈ ಮೈತ್ರಿಯು ಅದ್ಭುತಗಳನ್ನು ಮಾಡಿದೆ. ಇದಕ್ಕೆ ಹಲವು ಉದಾಹರಣೆಗಳು ಕೂಡ ಇವೆ.

ಟೊಯೊಟಾ-ಸುಜುಕಿ ಪಾಲುದಾರಿಕೆಯಿಂದ ಹೊರಹೊಮ್ಮಿದ ಮಾದರಿಗಳನ್ನು ಭಾರತ, ದಕ್ಷಿಣ ಆಫ್ರಿಕಾ, ಏಷಿಯಾ, ಯುರೋಪ್ ನಂತಹ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ, ಮಾರುತಿ ಸುಜುಕಿಯ ಬಲೆನೊ ಮತ್ತು ಎರ್ಟಿಗಾವನ್ನು ಕ್ರಮವಾಗಿ ಮರುಬ್ಯಾಡ್ಜ್ ಮಾಡಿದ ಟೊಯೊಟಾ ಗ್ಲಾನ್ಜಾ ಮತ್ತು ರುಮಿಯಾನ್ ಎಂದು ಮಾರಾಟ ಮಾಡಲಾಗುತ್ತಿದೆ.
ಇವಿಷ್ಟೇ ಅಲ್ಲದೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೊ, ಇನ್ನೋವಾ ಹೈಕ್ರಾಸ್ ಕೂಡ ಭಾರತದಲ್ಲಿ ಸಖತ್ ಸದ್ದು ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ. ಜೊತೆಗೆ, ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಎಂದು ರೀಬ್ಯಾಡ್ಜ್ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿರುವುದು ತಿಳದುಬಂದಿದೆ.
ಇನ್ನು ಮುಂಬರಲಿರುವ ಟೊಯೊಟಾ-ಸುಜುಕಿ ಪಾಲುದಾರಿಕೆಯ ಸಣ್ಣ ಎಲೆಕ್ಟ್ರಿಕ್ SUV ಬಗ್ಗೆ ಹೇಳುವುದಾದ್ರೆ, ಟೊಯೋಟಾ bZ ಸ್ಮಾಲ್ ಕ್ರಾಸ್ಒವರ್ ಪ್ರತಿ ಕಿ.ಮೀಗೆ 125 Wh ನಷ್ಟು ಅಂದಾಜು ವಿದ್ಯುತ್ ಬಳಕೆಯೊಂದಿಗೆ eTNGA ಪ್ಲಾಟ್‌ಫಾರ್ಮ್‌ನಿಂದ ಇದು ಆಧಾರವಾಗಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಯ ಯಾರಿಸ್ ಕ್ರಾಸ್‌ಗೆ ಹೋಲಿಸಿಕೊಂಡರೆ ಚಿಕ್ಕದಾಗಿರಲಿದೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications