ಪ್ರತಿ ಟ್ರಕ್ ಚಾಲಕರ ಕ್ಯಾಬಿನ್‌ನಲ್ಲಿ AC ಕಡ್ಡಾಯಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಟ್ರಕ್ ಡ್ರೈವರ್‌ಗಳ ಕೆಲಸ ತುಂಬಾ ಶೋಚನೀಯ, ನಿತ್ಯ 43-47 ಡಿಗ್ರಿಗಳ ಕಠಿಣ ತಾಪಮಾನದಲ್ಲೂ 14-16 ಘಂಟೆಗಳ ಕಾಲ ಟ್ರಕ್ ಚಾಲನೆ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೂ ಆರಮದಾಯಕ ಚಾಲನಾ ಸೌಕರ್ಯ ಒದಗಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೊಸ ನಿಯಮಗಳನ್ನು ತರಲು ಸಜ್ಜಾಗಿದ್ದಾರೆ.
ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಚಾಲಕ ಕ್ಯಾಬಿನ್‌ಗಳನ್ನು (Air-conditioned driver's cabin) ಶೀಘ್ರದಲ್ಲೇ ಕಡ್ಡಾಯಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಟ್ರಕ್ ಡ್ರೈವರ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಹವಾನಿಯಂತ್ರಣವನ್ನು ಕಡ್ಡಾಯಗೊಳಿಸುವ ಫೈಲ್‌ಗೆ ಸಹಿ ಕೂಡ ಹಾಕಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಎಸಿ ಅಳವಡಿಸಿದ ಟ್ರಕ್‌ಗಳ ನಿರ್ಮಾಣದ ಗಡುವಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ದೆಹಲಿಯಲ್ಲಿ ನಡೆದ 'ದೇಶ್ ಚಾಲಕ್ - ಭಾರತವನ್ನು ಸ್ಥಳಾಂತರಿಸುವವರನ್ನು ಗುರುತಿಸುವುದು' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟ್ರಕ್ ತಯಾರಕರು ಶೀಘ್ರದಲ್ಲೇ ಟ್ರಕ್‌ಗಳ ಡ್ರೈವರ್ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸಬೇಕಾಗುತ್ತದೆ. "ಇಂದು ಈ ಕಾರ್ಯಕ್ರಮಕ್ಕೆ ಬರುವ ಮೊದಲು, ಟ್ರಕ್ ಡ್ರೈವರ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಹವಾನಿಯಂತ್ರಣವನ್ನು ಕಡ್ಡಾಯಗೊಳಿಸುವ ಫೈಲ್‌ಗೆ ನಾನು ಸಹಿ ಮಾಡಿದ್ದೇನೆ ಎಂದರು.
ನಮ್ಮ ದೇಶದ ಟ್ರಕ್ ಚಾಲಕರು 43-47 ಡಿಗ್ರಿಗಳ ಕಠಿಣ ತಾಪಮಾನದಲ್ಲಿ ವಾಹನಗಳನ್ನು ಓಡಿಸುತ್ತಾರೆ. ಚಾಲಕರ ಸ್ಥಿತಿಯನ್ನು ನಾವು ಊಹಿಸಬಹುದು. ನಾನು ಸಚಿವನಾದ ನಂತರ AC ಕ್ಯಾಬಿನ್ ಅನ್ನು ಪರಿಚಯಿಸಲು ಉತ್ಸುಕನಾಗಿದ್ದೆ. ಆದರೆ ಟ್ರಕ್‌ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದರು. ಇದ್ಯಾವುದನ್ನು ನಾನು ತಲೆಕೆಡಿಸಿಕೊಳ್ಳದೆ ಎಲ್ಲಾ ಟ್ರಕ್ ಕ್ಯಾಬಿನ್‌ಗಳು ಎಸಿ ಕ್ಯಾಬಿನ್‌ಗಳಾಗಿಸಲು ಫೈಲ್‌ಗೆ ಸಹಿ ಹಾಕಿದ್ದೇನೆ ಎಂದರು.

ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಟ್ರಕ್ ಚಾಲಕರ ಹೋರಾಟವನ್ನು ಗಡ್ಕರಿ ಒಪ್ಪಿಕೊಂಡರು. ಗಡ್ಕರಿ ಭಾರತದಲ್ಲಿ ಚಾಲಕರ ಕೊರತೆಯನ್ನು ಗಮನಸೆಳೆದರು. ಭಾರತದಲ್ಲಿ ಚಾಲಕರ ಕೊರತೆಯಿದೆ, ಇದರ ಪರಿಣಾಮವಾಗಿ ಟ್ರಕ್ ಚಾಲಕರು ದಿನಕ್ಕೆ 14-16 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. "ಇತರ ದೇಶಗಳಲ್ಲಿ, ಟ್ರಕ್ ಚಾಲಕರು ಇಷ್ಟೇ ಗಂಟೆಗಳ ಕಾಲ ಕರ್ತವ್ಯದಲ್ಲಿರಬೇಕು ಎಂಬುದರ ಮೇಲೆ ನಿರ್ಬಂಧವಿದೆ" ಎಂದು ಅವರು ಹೇಳಿದರು.
ಇದಲ್ಲದೆ, ಉತ್ತಮ ಗುಣಮಟ್ಟದ ರಸ್ತೆಗಳು ಮತ್ತು ಟ್ರಕ್‌ಗಳನ್ನು ಸೇರಿಸುವ ಮೂಲಕ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎಸಿ ಕ್ಯಾಬಿನ್‌ಗಳನ್ನು ಹೊಂದಿರುವ ಟ್ರಕ್‌ಗಳನ್ನು ಯಾವಾಗ ಹೊರತರಲಾಗುತ್ತದೆ ಎಂಬುದರ ಬಗ್ಗೆ ಸಚಿವರು ಉಲ್ಲೇಖಿಸಲಿಲ್ಲ. 2025 ರ ಬಳಿಕ ಹೊರತರಬಹುದು ಎಂದು ಕೆಲವು ವರದಿಗಳು ಸೂಚಿಸುತ್ತಿವೆ.

ಇದಲ್ಲದೆ, ಉತ್ತಮ ಗುಣಮಟ್ಟದ ರಸ್ತೆಗಳು ಮತ್ತು ಟ್ರಕ್‌ಗಳನ್ನು ಸೇರಿಸುವ ಮೂಲಕ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎಸಿ ಕ್ಯಾಬಿನ್‌ಗಳನ್ನು ಹೊಂದಿರುವ ಟ್ರಕ್‌ಗಳನ್ನು ಯಾವಾಗ ಹೊರತರಲಾಗುತ್ತದೆ ಎಂಬುದರ ಬಗ್ಗೆ ಸಚಿವರು ಉಲ್ಲೇಖಿಸಲಿಲ್ಲ. 2025 ರ ಬಳಿಕ ಹೊರತರಬಹುದು ಎಂದು ಕೆಲವು ವರದಿಗಳು ಸೂಚಿಸುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications